ಶನಿವಾರ, ಜನವರಿ 18, 2020
19 °C

ಮೂಲಸೌಲಭ್ಯ ಕಾಣದ ಕಪ್ಪರಗಾಂವ

ಪ್ರಜಾವಾಣಿ ವಾರ್ತೆ/ –ಶಶಿಕಾಂತ ಭಗೋಜಿ Updated:

ಅಕ್ಷರ ಗಾತ್ರ : | |

ಹುಮನಾಬಾದ್‌: ತಾಲ್ಲೂಕಿನ ನಂದ­ಗಾಂವ್‌ ಗ್ರಾಮ ಪಂಚಾಯಿತಿ ವ್ಯಾಪ್ತಿ­ಯ ಕಪ್ಪರಗಾಂವ್‌ ಹಲವು ವರ್ಷ­ಗಳಿಂದ ಮೂಲಸೌಕರ್ಯ ಕೊರತೆ ಎದುರಿಸುತ್ತಿದೆ.ಕೃಷಿಕರಿಂದಲೇ ಕೂಡಿರುವ ಈ ಗ್ರಾಮದಲ್ಲಿ ಕೆಲವೇ ಕೆಲವು ಓಣಿಗಳು ಮಾತ್ರ ಸಿಸಿ ರಸ್ತೆಯನ್ನು ಕಂಡಿವೆ. ಗ್ರಾಮದ ಮುಖ್ಯರಸ್ತೆ ಸೇರಿದಂತೆ ಯಾವುದೇ ಓಣಿಯಲ್ಲೂ ಚರಂಡಿ ನಿರ್ಮಿಸಿಲ್ಲ.ಚರಂಡಿ ನಿರ್ಮಿಸ ಕಾರಣ ಕೊಳಚೆ ರಸ್ತೆ ಮೇಲೆ ಹರಿಯುತ್ತಿದೆ. ಕೊಳಚೆ ದುರ್ವಾಸನೆ ಬೀರುತ್ತಿದ್ದು, ಸೊಳ್ಳೆ­ಕಾಟ ಹೆಚ್ಚಿದೆ ಎಂದು ಗ್ರಾಮಸ್ಥರು ದೂರುತ್ತಾರೆ.ಪ್ರತಿನಿತ್ಯ ಅದೇ ರಸ್ತೆಗಳಲ್ಲಿ ಓಡಾ­ಡುವ ಗ್ರಾಮ ಪಂಚಾಯಿತಿ ಸದಸ್ಯರು ಸಂಬಂಧವೇ ಇಲ್ಲ ಎನ್ನುವ ರೀತಿಯಲ್ಲಿ ನೋಡದಂತೆ ಹೋಗು­ತ್ತಾರೆ.ಸಮಸ್ಯೆ ಹೇಳಿಕೊಳ್ಳಲು ಹೋದರೇ ಗಮನ ಹರಿಸುವುದಿಲ್ಲ ಎನ್ನುವುದು ಗ್ರಾಮದ ಜೈತುಂಬಿ, ಫರೀದಾಬೀ, ಶಾಂತಾಬಾಯಿ, ನಿಸಾಬೀ, ಸರಸ್ವತಿ, ನಸರಮ್ಮಿ ಅವರ ಆರೋಪ.ಗ್ರಾಮದಲ್ಲಿ ಕಸದ ತೊಟ್ಟಿ ವ್ಯವಸ್ಥೆ ಇಲ್ಲ. ಇದರಿಂದ ರಸ್ತೆ ಪಕ್ಕದಲ್ಲೇ ತ್ಯಾಜ್ಯ ಸಂಗ್ರಹವಾಗುತ್ತಿದೆ. ರಸ್ತೆಗಳು ತಿಪ್ಪೆಗುಂಡಿಯಂತೆ ಕಾಣುತ್ತಿವೆ. ಎಂದು ಗ್ರಾಮ ಶಂಕರರೆಡ್ಡಿ, ಖಾಜಾ ಪಟೇಲ, ಮಲ್ಲಿಕಾರ್ಜುನ ಹೇಳುತ್ತಾರೆ.ನಂದಗಾಂವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 17ಜನ ಸದಸ್ಯರಿದ್ದಾರೆ.  ಕಪ್ಪರಗಾಂವ ಗ್ರಾಮದಲ್ಲಿ 6ಜನ ಸದಸ್ಯರಿದ್ದಾರೆ. ಆದರೆ ಯಾರೊಬ್ಬರೂ  ಅತ್ಯಂತ ಅವಶ್ಯವಿರುವ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವ ಬಗ್ಗೆ ಕಾಳಜಿ ವಹಿಸುತ್ತಿಲ್ಲ.ಹೀಗಾಗಿ ಗ್ರಾಮದ ಹೊರ ವಲಯದಲ್ಲಿನ ತೋಟಗಳಿಗೆ ಹೋಗಿ  ನೀರು ತರುವುದು ಅನಿವಾರ್ಯ­ವಾಗಿದೆ. ಗ್ರಾಮದ ಮುಖ್ಯ ಬೀದಿ­ಯಲ್ಲಿ ವಿದ್ಯುತ್‌ ದೀಪ ಅಳವಡಿಸಿಲ್ಲ. ಗ್ರಾಮದ ಹೊರವಲಯದಲ್ಲಿ ಕೊಳವೆ ಬಾವಿಗೆ ಪೈಪ್‌ಲೈನ್‌ ಅಳವಡಿಸಿ, ನೀರು ಪೂರೈಕೆ ವ್ಯವಸ್ಥೆ ಮಾಡ­ಲಾಗಿದೆ. ಆದರೆ ಅದು ಸಮರ್ಪಕ­ವಾಗಿಲ್ಲ.ಶೀಘ್ರ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕೆನ್ನುವುದು ಗ್ರಾಮಸ್ಥರ ಆಗ್ರಹ.‘ಅಭಿವೃದ್ಧಿಗೆ ಯತ್ನ’

‘ಗ್ರಾಮ ಪಂಚಾಯಿತಿಗೆ ಅತ್ಯಂತ ಕಡಿಮೆ ಅನುದಾನವಿದೆ. ಅಷ್ಟೇ ಹಣದಲ್ಲಿ ಗ್ರಾಮದ ಸಮಗ್ರ ಅಭಿವೃದ್ಧಿ ಕೈಗೊಳ್ಳುವುದು ಕಷ್ಟ. ಗ್ರಾಮದ ಸಮಗ್ರ ಅಭಿವೃದ್ಧಿ ಸಂಬಂಧ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಅಲ್ಲದೇ ಹೆಚ್ಚಿನ ಅನುದಾನಕ್ಕೆ ಕ್ಷೇತ್ರದ ಶಾಸಕರಿಗೂ ಮನವಿ ಮಾಡಲಾಗುವುದು.ಗ್ರಾಮದ ಸರ್ವತೋಮುಖ ಅಭಿವೃದ್ಧಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.

–ಪುಂಡ್ಲಿಕ, ಗ್ರಾಮ ಪಂಚಾಯಿತಿ ಸದಸ್ಯ‘ಕಾಳಜಿ ಇಲ್ಲ’

‘ಗ್ರಾಮದ ಅಭಿವೃದ್ಧಿ ಬಗ್ಗೆ ಯಾರೊಬ್ಬರಿಗೂ ಕಾಳಜಿ ಇಲ್ಲ. ಸಮರ್ಪಕ ರಸ್ತೆ, ಚರಂಡಿ, ನೀರಿನ ವ್ಯವಸ್ಥೆ ಮಾಡುವಂತೆ ಹಲವು ಬಾರಿ ಮಾಡಿದ ಮನವಿಗೆ ಗ್ರಾಮ ಪಂಚಾಯಿತಿ ಸದಸ್ಯರು ಸ್ಪಂದಿ­ಸುತ್ತಿಲ್ಲ. ಬೇಸತ್ತು ಹೇಳುವುದನ್ನೇ ಬಿಟ್ಟಿದ್ದೇವೆ. ತಮ್ಮನ್ನು ಜನ ಯಾವ ಕಾರಣಕ್ಕಾಗಿ ಚುನಾಯಿಸಿ ಕಳಿಸಿ­ದ್ದಾರೆ ಎಂಬ ಬಗ್ಗೆ ಅವರು ಆತ್ಮಾವಲೋಕನ ಮಾಡಿಕೊಳ್ಳ­ಬೇಕು’.

–ದಾರಾ ಸಿಂಗ್‌, ಗ್ರಾಮಸ್ಥ‘ಹಣ ಇಲ್ಲ’

‘ಗ್ರಾಮದಲ್ಲಿನ ಕುಡಿಯುವ ನೀರಿ­ನ ಸಮಸ್ಯೆ ವಿ­ಷ­ಯ ಗೊತ್ತಿಲ್ಲ. ಆ ಬಗ್ಗೆ ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಚರಂಡಿ ಸಮಸ್ಯೆ ಇದೆ. ಆದರೆ  ಕಾಮಗಾರಿಗಳಿಗೆ ಯೋಜನೆಯಲ್ಲಿ  ಹಣ ಇಟ್ಟಿಲ್ಲ.

–ಭಾಗ್ಯಜ್ಯೋತಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ

ಪ್ರತಿಕ್ರಿಯಿಸಿ (+)