ಮೂಲ ಸೌಕರ್ಯಕ್ಕಾಗಿ ರಾಮಸಾಗರ ಗ್ರಾಮಸ್ಥರ ಆಗ್ರಹ

7

ಮೂಲ ಸೌಕರ್ಯಕ್ಕಾಗಿ ರಾಮಸಾಗರ ಗ್ರಾಮಸ್ಥರ ಆಗ್ರಹ

Published:
Updated:

ರಾಮಸಾಗರ(ಹೊಸಪೇಟೆ):   ತಾಲ್ಲೂಕಿನ ರಾಮಸಾಗರ ಗ್ರಾಮಕ್ಕೆ ಮೂಲ ಸೌಲಭ್ಯ ಕಲ್ಪಿಸುವಂತೆ ಕರ್ನಾಟಕ ಜನಶಕ್ತಿ ಸಂಘದ ಪದಾಧಿಕಾರಿಗಳು ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.

ಗುರುವಾರ ತಾ.ಪಂ. ಕಚೇರಿಗೆ ಆಗಮಿಸಿದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು  ಕಾರ್ಯನಿರ್ವಾಹಕ ಅಧಿಕಾರಿ ಬಾಲಸ್ವಾಮಿ ದೇಶಪ್ಪರವರಿಗೆ ಬೇಡಿಕೆಗಳ ಈಡೇರಿಕೆಗಾಗಿ ಮನವಿ ಸಲ್ಲಿಸಿದರು.ಸಂಘದ ಅಧ್ಯಕ್ಷ ಬಿ. ಗಂಗಾಧರ,  ಗ್ರಾಮದಲ್ಲಿ ಚರಂಡಿ, ಕುಡಿಯುವ ನೀರಿನ ವ್ಯವಸ್ಥೆ ಮತ್ತು ಸಮರ್ಪಕ ವಿದ್ಯುತ್ ಸರಬರಾಜು ಇಲ್ಲದೆ ಗ್ರಾಮಸ್ಥರಿಗೆ ತೀವ್ರ ತೊಂದರೆಯಾಗಿದೆ. ಗ್ರಾಮಕ್ಕೆ ನೀರು ಸರಬರಾಜು ಮಾಡುವ ಟ್ಯಾಂಕ್‌ನ ಮೇಲ್ಛಾವಣಿಗೆ ಭದ್ರತೆ ಇಲ್ಲ. ಇದರಿಂದ ಟ್ಯಾಂಕ್‌ನಲ್ಲಿ ತ್ಯಾಜ್ಯ ಬೀಳುವ ಸಂಭವವಿದೆ ಎಂದು ಆತಂಕ ವ್ಯಕ್ತಪಡಿಸಿದರು.ಆರೋಗ್ಯ ಕೇಂದ್ರದಲ್ಲಿ ಕಳೆದ 5 ತಿಂಗಳಿಂದ ವೈದ್ಯ ಸಹಾಯಕರಿಲ್ಲದೇ ಮಹಿಳೆಯರಿಗೆ ಹಾಗೂ ಚಿಕ್ಕ ಮಕ್ಕಳಿಗೆ ಪ್ರಾಥಮಿಕ ಚಿಕಿತ್ಸೆ ದೊರೆಯದೆ ಪರದಾಡುವಂತಾಗಿದೆ. ಈ ಕುರಿತು ಗ್ರಾಮ ಪಂಚಾಯಿತಿ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು. ಗ್ರಾಮಸ್ಥರ ಸಮಸ್ಯೆಗಳನ್ನು ಪರಿಹರಿಸದಿದ್ದಲ್ಲಿ ಗ್ರಾ.ಪಂ.ಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಕೆ. ಪರಶುರಾಮ, ರಮೇಶನಾಯ್ಕ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಮನವಿ ಸ್ವೀಕರಿಸಿದ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಬಾಲಸ್ವಾಮಿ ದೇಶಪ್ಪ, ಈ ಬಗ್ಗೆ ಪರಿಶೀಲಿಸಿ ಗ್ರಾ.ಪಂ. ಅಧಿಕಾರಿಗಳೊಂದಿಗೆ ಚೆರ್ಚಿಸಿ ಸೂಕ್ತ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು. ಪಿ. ಮಂಜುನಾಥ, ಎ. ರಾಮಾಲಿ, ಎನ್. ಶರಣ, ಲಕ್ಷ್ಮಣ, ರಾಮಾನಾಯ್ಕ ಸೇರಿದಂತೆ ಇತರರಿದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry