ಮೂಲ ಸೌಕರ್ಯಕ್ಕೆ ಆಗ್ರಹ

ಶನಿವಾರ, ಜೂಲೈ 20, 2019
22 °C

ಮೂಲ ಸೌಕರ್ಯಕ್ಕೆ ಆಗ್ರಹ

Published:
Updated:

ರಾಜರಾಜೇಶ್ವರಿನಗರ:  ಬಂಗಾರಪ್ಪನಗರ ನಿವಾಸಿಗಳಿಗೆ ಕುಡಿಯುವ ನೀರು, ರಸ್ತೆ, ಒಳಚರಂಡಿ, ಶೌಚಾಲಯ, ಬೀದಿ ದೀಪಗಳ ವ್ಯವಸ್ಥೆ , ಪಡಿತರ ಚೀಟಿ , ನಿವೇಶನ ಹಕ್ಕು ಪತ್ರಗಳನ್ನು ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಬಂಗಾರಪ್ಪ ನಗರದಿಂದ ಪಾದಯಾತ್ರೆ ಮೂಲಕ ಮೆರವಣಿಗೆ ಮೂಲಕ ರಾಜರಾಜೇಶ್ವರಿನಗರ ವಲಯ ಕಚೇರಿವರೆಗೆ ಬಂದು ಪ್ರತಿಭಟನೆ ನಡೆಸಿ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹ ಪಡಿಸಿದರು.ಬಂಗಾರಪ್ಪನಗರ ಶನಿಮಹಾತ್ಮ ದೇವಸ್ಥಾನ ಸುತ್ತ ಮುತ್ತ ಪ್ರದೇಶದಲ್ಲಿ ಮಳೆ ಬಂದಾಗ ಶೌಚಾಲಯ ನೀರಿನಿಂದ ಕೆಟ್ಟ ವಾಸನೆ ಬರುತ್ತಿದೆ ಮನೆಗಳಿಗೆ ನೀರು ನುಗುತ್ತದೆ ಎಂದು ದೂರಿದರು. ಸಂಘಟನೆಯ ಜಿಲ್ಲಾ ಅಧ್ಯಕ್ಷ ಸುಬ್ಬಲಕ್ಷ್ಮಿ, ಕಾರ್ಯದರ್ಶಿ ಯಶೋದಾ ಮಾತನಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry