ಭಾನುವಾರ, ಏಪ್ರಿಲ್ 18, 2021
24 °C

ಮೂಲ ಸೌಕರ್ಯವಿಲ್ಲದ ಗುಡಿಸಲು ಕಾಲೋನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಾಂಡವಪುರ: ಇಲ್ಲಿ ಕುಡಿಯಲು ನೀರಿಲ್ಲ, ವಿದ್ಯುತ್ ವ್ಯವಸ್ಥೆಯಂತೂ ಇಲ್ಲವೇ ಇಲ್ಲ. ಸಂಪೂರ್ಣ ಮೂಲ ಸೌಕರ್ಯದಿಂದ ವಂಚಿತರಾಗಿ ಪ್ರತಿದಿನ ಕಷ್ಟಪಡುತ್ತಾ ಗುಡಿಸಲಿನಲ್ಲಿ ಜೀವನ ನಡೆಸುತ್ತಿರುವ ಬೋವಿ ಜನಾಂಗದ ಬವಣೆ ಇದು.  ಪಟ್ಟಣದ ಹೇಮಾವತಿ ಬಡಾವಣೆಯ ಹಿಂಭಾಗದಲ್ಲಿರುವ ಕಾಲೋನಿ ಗುಡಿಸಲುಗಳಿಂದ ಕೂಡಿದೆ. ಈ ಕಾಲೋನಿಯಲ್ಲಿ ಪ್ರತಿದಿನ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿರುವ ಬೋವಿ ಜನಾಂಗದ ಸುಮಾರು 70ಕ್ಕೂ ಹೆಚ್ಚು ಕುಟುಂಬಗಳು ಗುಡಿಸಲನ್ನು  ನಿರ್ಮಿಸಿಕೊಂಡಿದ್ದಾರೆ.

 

ಕಳೆದ 18 ವರ್ಷದಿಂದ ವಾಸಿಸುತ್ತಿರುವ ಈ ಜನರು ಕುಡಿಯುವ ನೀರಿಗಾಗಿ ಪರದಾಡುವಂತ ಸ್ಥಿತಿ ನಿರ್ಮಾಣಗೊಂಡಿದೆ. ಇಲ್ಲಿರುವ ಎಲ್ಲ  ಗುಡಿಸಲು ನಿವಾಸಿಗರಿಗೆ ಇರುವುದೊಂದೆ ನಲ್ಲಿ.

ಈ ಒಂದು ನಲ್ಲಿಯಲ್ಲಿ ವಾರಕ್ಕೆ ಎರಡು ದಿನಗಳು ಮಾತ್ರ ನೀರು ಬರುತ್ತದೆ. ಈ ನೀರಿಗಾಗಿ ಎಲ್ಲ ಕುಟುಂಬಸ್ಥರು ಖಾಲಿ ಬಿಂದಿಗೆ ಹಿಡಿದುಕೊಂಡು ಕಾಯುತ್ತಾ ಕುಳಿತಿರುತ್ತಾರೆ. ಇಲ್ಲಿ ನೀರು ಸರಬರಾಜು ಮಾಡುವ ಒಂದು ಟ್ಯಾಂಕ್ ನಿರ್ಮಿಸಿದ್ದಾರೆ. ಆದರೆ ಈ ಟ್ಯಾಂಕ್ ಕೆಟ್ಟು ಹೋಗಿ ಪ್ರಯೋಜನಕ್ಕೆ ಬಾರದಂತಾಗಿದೆ.

 

ಈ ಕಾಲೋನಿಯಲ್ಲಿ ಎರಡು ಬೀದಿ ದೀಪ ಅಳವಡಿಸಲಾಗಿದೆ. ಆದರೆ ಇಲ್ಲಿರುವ ಗುಡಿಸಲುಗಳಿಗೆ ವಿದ್ಯುತ್ ವ್ಯವಸ್ಥೆ ಇಲ್ಲ. ಸೀಮೆಎಣ್ಣೆ ದೀಪದ ಬೆಳಕಿನಲ್ಲಿ ಕಾಲ ಕಳೆಯುತ್ತಿದ್ದಾರೆ. ಅನೇಕ ಗುಡಿಸಲುಗಳಲ್ಲಿ ಶೌಚಾಲಯವೇ ಇಲ್ಲದೇ ಬಹಿರ್ದೆಸೆಗೆ ಬೆಟ್ಟಗುಡ್ಡಕ್ಕೆ ತೆರಳಬೇಕಾದ ಅನಿವಾರ್ಯತೆ ಇದೆ.  ಕಳೆದ 5 ವರ್ಷಗಳ ಹಿಂದೆ ಪಟ್ಟಣ ಪಂಚಾಯ್ತಿ ಇಲ್ಲಿಯ ಜನರಿಗೆ ನಿವೇಶನದ ಹಕ್ಕು ಪತ್ರ ನೀಡಿದ್ದರೂ ಮನೆ ನಿರ್ಮಾಣ ಮಾಡಿಕೊಳ್ಳಲು ಶಕ್ತಿ ಇಲ್ಲದೆ ಗುಡಿಸಲುಗಳಲ್ಲೇ ವಾಸಿಸುತ್ತಿದ್ದಾರೆ.    

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.