ಭಾನುವಾರ, ಫೆಬ್ರವರಿ 28, 2021
23 °C
ವಿದ್ಯಾರ್ಥಿನಿಯರಿಗೆ ಸಮವಸ್ತ್ರ ಬದಲಿಸುವ ವ್ಯವಸ್ಥೆ ಇಲ್ಲ

ಮೂಲ ಸೌಲಭ್ಯಗಳಿಂದ ವಂಚಿತ ಕ್ರೀಡಾಂಗಣ

–ನಟರಾಜ ನಾಗಸಂದ್ರ Updated:

ಅಕ್ಷರ ಗಾತ್ರ : | |

ಮೂಲ ಸೌಲಭ್ಯಗಳಿಂದ ವಂಚಿತ ಕ್ರೀಡಾಂಗಣ

ದೊಡ್ಡಬಳ್ಳಾಪುರ: ಒಂದು ಲಕ್ಷ ಜನ ಸಂಖ್ಯೆಯನ್ನು ಹೊಂದಿರುವ  ನಗರಕ್ಕೆ ಇರುವ  ಎನ್ನುವ ಖ್ಯಾತಿಗೆ ಒಳಗಾಗಿರುವ ತಾಲ್ಲೂಕು ಕಚೇರಿ ಸಮೀಪದ ಭಗತ್‌ಸಿಂಗ್‌ ಕ್ರೀಡಾಂಗಣವು ಮೂಲ ಭೂತ ಸೌಲಭ್ಯಗಳಿಂದ ವಂಚಿತವಾಗಿದೆ.ನಗರದಲ್ಲಿ ಯಾವುದೇ ಸರ್ಕಾರಿ ಇಲ್ಲವೆ ಖಾಸಗಿ ಕಾರ್ಯಕ್ರಮಗಳು ಭಗತ್‌ ಸಿಂಗ್‌ ಕ್ರೀಡಾಂಗಣದಲ್ಲೇ ಹಮ್ಮಿಕೊಳ್ಳಲಾಗುತ್ತದೆ. ಅಂತಯೇ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ನಡೆಯುವ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ, ಕನ್ನಡ ರಾಜ್ಯೋತ್ಸವ ಸೇರಿದಂತೆ, ಶಾಲಾ–ಕಾಲೇಜುಗಳ ಕ್ರೀಡಾ ಕೂಟಗಳೂ ಇದೇ ಭಗತ್‌ಸಿಂಗ್‌ ಕ್ರೀಡಾಂಗಣದಲ್ಲೇ ನಡೆಯುತ್ತವೆ.ಇಲ್ಲಿನ ಮೈದಾನಕ್ಕೆ ಬರುವ ವಿದ್ಯಾರ್ಥಿಗಳು ಎಲ್ಲಿ ಬೇಕಾದರೂ ನಿಂತು  ಮೂತ್ರ ವಿಸರ್ಜನೆ ಮಾಡಿ ದೇಹ ಭಾದೆಯನ್ನು ತೀರಿಸಿಕೊಳ್ಳುತ್ತಾರೆ. ಇದರಿಂದ ಪರಿಸರದ ಮೇಲೂ ಹಾನಿಯಾಗುತ್ತದೆ ನಿಜ. ಆದರೆ ವಿದ್ಯಾರ್ಥಿನಿಯರ ಪಾಡು ಹೇಳ ತೀರದಾಗಿದೆ.ಅದರಲ್ಲೂ ಕ್ರೀಡಾ ಕೂಟದಲ್ಲಿ ಭಾಗವಹಿಸುವ ಸಂದರ್ಭ ಗಳಲ್ಲಿ ಸಮವಸ್ತ್ರ ಬದಲಿಸಲು ಸಹ ಕೊಠಡಿಗಳು ಸೌಲಭ್ಯ ಇಲ್ಲದಾಗಿವೆ. ಗುಂಪಾಗಿ ಎಲ್ಲ ವಿದ್ಯಾರ್ಥಿನಿಯರು ಒಂದೆಡೆ ನಿಂತು ಮಧ್ಯದಲ್ಲಿ ಭಾಗದಲ್ಲಿ ಸಮವಸ್ತ್ರಗಳನ್ನು ಬದಲಿಸಿಕೊಳ್ಳುವಂತಹ ಸ್ಥಿತಿ ಇದೆ ಎಂದು ತಿಳಿಸಿರುವ ಕರವೇ (ಕನ್ನಡಿಗರ ಬಣ) ರಾಜ್ಯ ಅಧ್ಯಕ್ಷ ಬಿ.ಎಸ್‌. ಚಂದ್ರಶೇಖರ್‌, ಈ ಹಿಂದೆ ಸಾಮೂಹಿಕ ಮೂತ್ರ ವಿಸರ್ಜನೆಯ ಬೆದರಿಕೆ ಹಾಕಲಾಗಿತ್ತು,

ಆಗ ತಾತ್ಕಾಲಿಕವಾಗಿ ತಗಡಿನ ರೇಖುಗಳಿಂದ ಮೂತ್ರ ವಿಸರ್ಜನೆಗೆ  ಅನುಕೂಲವಾಗುವಂತೆ ತಡೆಗೋಡೆಗಳನ್ನು ನಿರ್ಮಿಸಿದ್ದರು. ಒಂದೆರಡು ತಿಂಗಳಲ್ಲೇ ಶಾಶ್ವತವಾಗಿ ಶೌಚಾಲಯ ಹಾಗೂ ಕುಡಿಯುವ ನೀರಿನ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಭರಸವೆ ನೀಡಿದ್ದರು.

ಆದರೆ ಒಂದು ವರ್ಷ ಕಳೆದರು ಸಹ ಶೌಚಾಲಯ ಇರಲಿ ಕುಡಿಯುವ ನೀರಿಗೆ ಒಂದು ಕೊಳಾಯಿ ಸಹ ಹಾಕಿಲ್ಲ. ಇಡೀ ದೇಶದಲ್ಲಿ ಸ್ವಚ್ಛ ಭಾರತದ ಬಗ್ಗೆ ಭಾರಿ ಪ್ರಚಾರ ಮಾಡಲಾಗುತ್ತಿದೆ. ನಗರಸಭೆಯಂತು ದಿನವಿಡಿ ಸ್ವಚ್ಛತೆ ಬಗ್ಗೆ ಪ್ರಚಾರ ಮಾಡುತ್ತಲೇ ಇದೆ.

ಆದರೆ ಭಗತ್‌ಸಿಂಗ್‌ ಕ್ರೀಡಾಂಗಣಕ್ಕೆ ಬರುವ ಸಾರ್ವಜನಿಕರು, ವಿದ್ಯಾರ್ಥಿಗಳು ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡುವುದರಿಂದ ಕ್ರೀಡಾಂಗ ಣದಲ್ಲಿ ಮೂಗು ಮುಚ್ಚಿ ಕೊಂಡು ಒಡಾಡುವಂತಾಗಿದೆ.ಇದೀಗ ಸ್ವಾತಂತ್ರ್ಯ ದಿನಾಚರಣೆ ಎದುರಾಗುತ್ತಿದೆ. ಎಲ್ಲೆಡೆ  ಈ ಸಂದರ್ಭದಲ್ಲಿ ಸಿದ್ಧತೆಗಳು ನಡೆಯುತ್ತಿವೆ. ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ಸಂದರ್ಭ ಕ್ಕಾದರೂ ಶಾಶ್ವತ ಶೌಚಾಲಯ, ಕುಡಿಯುವ ನೀರಿಗೆ ಕೊಳಾಯಿ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.

*

ಕ್ರೀಡಾಂಗಣದಲ್ಲಿ ಕುಡಿಯುವ ನೀರು ಇರಲಿ, ಕನಿಷ್ಟ ಶೌಚಾಲಯವು ಸಹ ಇಲ್ಲ. ತುರ್ತಾಗಿ ಇಲ್ಲಿ ಶೌಚಾಲಯ ನಿರ್ಮಿಸದಿದ್ದರೆ  ಸಾಮೂಹಿಕ ಮೂತ್ರ ವಿಸರ್ಜನೆ ಮೂಲಕ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಲಾಗಿತ್ತು.

-ಬಿ.ಎಸ್‌. ಚಂದ್ರಶೇಖರ್‌,

ಕರವೇ (ಕನ್ನಡಿಗರ ಬಣ) ರಾಜ್ಯ ಅಧ್ಯಕ್ಷ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.