ಸೋಮವಾರ, ಮಾರ್ಚ್ 8, 2021
30 °C
ಕುಡಿಯಲು ನೀರಿಲ್ಲ, ಶೌಚಾಲಯ ದುರ್ನಾತ ಬೀರಿದೆಯಲ್ಲ

ಮೂಲ ಸೌಲಭ್ಯ ವಂಚಿತ ಪುರಸಭೆ ಬಸ್ ನಿಲ್ದಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೂಲ ಸೌಲಭ್ಯ ವಂಚಿತ ಪುರಸಭೆ ಬಸ್ ನಿಲ್ದಾಣ

ಮಾಲೂರು: ಪಟ್ಟಣದ ಬಸ್ ನಿಲ್ದಾಣ ಮೂಲ ಸೌರ್ಕಯಗಳ ಕೊರತೆಯಿಂದ ಬಳಲುತ್ತಿದೆ. ಪ್ರಯಾಣಿಕರು ನಿಲ್ದಾಣದಲ್ಲಿ ನಿಲ್ಲಲು ಸ್ಥಳಾವಕಾಶವಿಲ್ಲದೆ ರಸ್ತೆ ಬದಿ ಬಸ್ಸಿಗಾಗಿ ಕಾಯುವ ಸ್ಥಿತಿ ಇದೆ. ಅಕ್ಕ–ಪಕ್ಕ ಪೆಟ್ಟಿಗೆ ಅಂಗಡಿಗಳು ತುಂಬಿದ್ದು ಬಸ್‌ ಓಡಾಟಕ್ಕೆ ತೀವ್ರ ತೊಂದರೆಯಾಗುತ್ತಿದೆ.ಸೂಕ್ತ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಶೌಚಾಲಯ ನಿರ್ವಹಣೆಯ ಟೆಂಡರ್ ವಿಚಾರದಲ್ಲಿ ಪುರಸಭೆ ಮತ್ತು ಟೆಂಡರ್ದಾರರಿಗೂ ಗೊಂದಲವಿದ್ದು, ಈ ವಿಚಾರದ ನ್ಯಾಯಾಲಯದಲ್ಲಿದೆ. ಶೌಚಾಲಯಕ್ಕೆ ಪುರಸಭೆಯು ನೀರಿನ ಸೌಲಭ್ಯ ಕಲ್ಪಿಸಿಲ್ಲ. ಶೌಚಾಲಯದ ಬಳಿ ಪ್ರಯಾಣಿಕರು ಹೋದರೆ ದುರ್ನಾತದಿಂದ ಮೂಗು ಮುಚ್ಚಿ ವಾಪಸು ಬರಬೇಕಾಗಿದೆ. ಇದರಿಂದ ಪಕ್ಕದಲ್ಲಿರುವ ಸರ್ಕಾರಿ ಆಸ್ಪತ್ರೆಯ ಜಾಗ ಬಯಲು ಶೌಚಾಲಯವಾಗಿ ಬಳಕೆಯಾಗುತ್ತಿದೆ. 1987ರಲ್ಲಿ ಪುರಸಭೆ ಅಧ್ಯಕ್ಷರಾಗಿದ್ದ ಮಾಜಿ ಶಾಸಕ ಎ. ನಾಗರಾಜು ಅವರ ಆಡಳಿತದ ಅವಧಿಯಲ್ಲಿ ಕಾರಂಜಿ ಕಟ್ಟೆ (ಕೆರೆ)ಯಲ್ಲಿ  ಬಸ್ ನಿಲ್ದಾಣ ನಿರ್ಮಾಣ ಮಾಡಲಾಯಿತು.ಪಟ್ಟಣದಿಂದ ಬೆಂಗಳೂರು 48 ಕಿ.ಮೀ ದೂರದಲ್ಲಿ ಇರುವುದರಿಂದ ಬಹಳಷ್ಟು ಮಂದಿ ಉದ್ಯೋಗಕ್ಕಾಗಿ ರಾಜಧಾನಿಗೆ ತೆರಳುವರು. ನಿಲ್ದಾಣದಲ್ಲಿ ಜನ ಸಂದಣಿಯೂ ಹೆಚ್ಚು.ಆದರೆ ಪ್ರಯಾಣಿಕರಿಗೆ ಮೂಲ ಸೌಕರ್ಯ ಇಲ್ಲದೆ ಪರಿತಪಿಸುವಂತಾಗಿದೆ.ಸ್ಥಳಾಂತರ: ‘ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲು ರೈಲ್ವೆ ಸೇತುವೆ ಬಳಿ ಇರುವ ನಾಲ್ಕು ಎಕರೆ ಸರ್ಕಾರಿ ಜಮೀನಿನಲ್ಲಿ ನೂತನ ಬಸ್ ನಿಲ್ದಾಣ ಪ್ರಾರಂಭಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಈ ಬಗ್ಗೆ ಕ್ರಮಕೈಗೊಳ್ಳಲಾಗುವುದು’ ಎಂದು ಶಾಸಕ ಕೆ.ಎಸ್. ಮಂಜುನಾಥ ಗೌಡ ಅವರು ‘ಪ್ರಜಾವಾಣಿ’ ತಿಳಿಸಿದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.