ಮೂಲ ಸೌಲಭ್ಯ ವಂಚಿತ ಹರಕಂಚಿ ಗ್ರಾಮ

7

ಮೂಲ ಸೌಲಭ್ಯ ವಂಚಿತ ಹರಕಂಚಿ ಗ್ರಾಮ

Published:
Updated:

ಕಮಲಾಪುರ: ಇಲ್ಲಿಗೆ ಸಮೀಪದ ಹರಕಂಚಿ ಗ್ರಾಮದಲ್ಲಿ ಮೂಲ ಸೌಲಭ್ಯಗಳಿಲ್ಲದೇ ಗ್ರಾಮಸ್ಥರು ಕಂಗಾಲಾಗಿದ್ದಾರೆ.

ಗ್ರಾಮದಲ್ಲಿ ಸುಮಾರು ಎರಡು ಸಾವಿರಕ್ಕೂ ಹೆಚ್ಚಿನ ನಿವಾಸಿಗಳಿದ್ದರೂ, ಗ್ರಾಮಕ್ಕೆ ಸರಿಯಾದ ರಸ್ತೆಯಿಲ್ಲ. ಬಸ್‌ ಸೌಲಭ್ಯವಿಲ್ಲ.  ಪಟ್ಟಣಕ್ಕೆ ಹೋಗಿಬರಲು ಖಾಸಗಿ ವಾಹನಗಳ ಅವಂಬನೆ ಅನಿವಾರ್ಯವಾಗಿದೆ.ಗ್ರಾಮದ ವಿದ್ಯಾರ್ಥಿಗಳು ಶಾಲೆ ಕಾಲೇಜುಗಳಿಗೆೆ ಟಂಟಂ ಮತ್ತು ಜೀಪ್‌ಗಳಲ್ಲಿ ಕೈಯಲ್ಲಿ ಜೀವ ಹಿಡಿದು ಪ್ರಯಾಣೀಸಬೇಕಿದೆ. ಮಳೆಯಾದರೆ ರಸ್ತೆಯಿಲ್ಲ ನೀರು ನಿಲ್ಲುತ್ತದೆ ಎಂದು ಸ್ಥಳಿಯ ನಿವಾಸಿ ಶರಣು ದೂರುತ್ತಾರೆ.ಗ್ರಾಮದಲ್ಲಿ ಮಹಿಳಾ ಶೌಚಾಲಯಗಳಿಲ್ಲ, ಆಸ್ಪತ್ರೆಗಳಿಲ್ಲ ಈ ಕುರಿತು ಕ್ರಮ ಜರುಗಿಸಿ ಎಂದು ಗಾ್ರಾಮಸ್ಥರು ಅಧಿಕಾರಿಗಳು ಹಾಗೂ ಕ್ಷೇತ್ರದ ಜನ ಪ್ರತಿನಿಧಿಗಳನ್ನು ಕಂಡು ಹಲವಾರು ಬಾರಿ ಮನವಿ ಮಾಡಿ ಕೊಂಡರೂ ಪ್ರಯೋಜನವಾಗಿಲ್ಲ ಎಂಬುದು ನಿವಾಸಿಗಳ ನೋವಿನ ನುಡಿ.ಪುನರ್ವಸತಿ ನೆಲೆಯಾದ ಇಲ್ಲಿ ಮೂಲ ಸೌಲಭ್ಯಗಳಿಲ್ಲದೇ ಅವರು ಕಂಗಾಲಾ ಗಿದ್ದಾರೆ.    ಮನೆಗಳೆಲ್ಲ ತಗಡಿನ ಛತ್ತಿನ ಮನೆಗಳು.ಬೇಸಿಗೆಯಲ್ಲಿ ಧಗ ಧಗ ಬಿಸಿಲಿಗೆ ಬೆಂದರೆ, ಮಳೆಗಾಲಕ್ಕೆ ಡಬ್‌ ಡಬ್‌ ಸಪ್ಪಳ ನಿದ್ದೆಗೆಡಿಸುತ್ತದೆ ಎಂದು ನಿವಾಸಿಗಳು ದೂರುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry