ಸೋಮವಾರ, ಮೇ 17, 2021
28 °C

ಮೂವರು ಕಿರಿಯ ಎಂಜಿನಿಯರ್ ಅಮಾನತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಜಿಲ್ಲೆಯ ವಿವಿಧ ಭಾಗಗಳಲ್ಲಿ ಕಳಪೆ ಕಾಮಗಾರಿ ನಡೆಸಿ, ದೃಢಪಟ್ಟ ಹಿನ್ನೆಲೆಯಲ್ಲಿ ಮೂವರು ಕಿರಿಯ ಎಂಜಿನಿಯರ್‌ಗಳನ್ನು ಅಮಾನತುಗೊಳಿಸಿದ ಜಿಲ್ಲಾಧಿಕಾರಿವಿ. ಪೊನ್ನುರಾಜ್, ಈ ಸಂಬಂಧ ಹಲವು ಕಾರ್ಯ ನಿರ್ವಾಹಣಾ ಎಂಜಿನಿಯರ್ ಹಾಗೂ ಗುತ್ತಿಗೆದಾರರಿಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಿದ್ದಾರೆ.ಮೂವರು ಕಿರಿಯಎಂಜಿನಿಯರ್‌ಗಳಾದ ಶಿಕಾರಿಪುರದ ಜಿ.ಪಿ. ನಾಗರಾಜ್, ತೀರ್ಥಹಳ್ಳಿಯ ಎಂ.ಪಿ. ನಾಗರಾಜ್ ಹಾಗೂ ಭದ್ರಾವತಿಯ ಹಾಲೇಶಪ್ಪ ಎಂಬುವವರನ್ನು ಅಮಾನತು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಶಿಕಾರಿಪುರದ ಬೇಗೂರು ಮರಡಿ ತಾಂಡದಲ್ಲಿ ಮೂಲಸೌಕರ್ಯ ಯೋಜನೆ ಅಡಿ ರಸ್ತೆ ಕಾಮಗಾರಿಗ್ಙೆ 10 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದ್ದು, ಟೆಂಡರ್ ನಿಯಮದ ಪ್ರಕಾರ ರಸ್ತೆ ನಿರ್ಮಾಣದಲ್ಲಿ 17 ಸೆಂ.ಮೀ ಡಾಂಬರ್, ಕಲ್ಲಿನ ಪದರು  ಇರಬೇಕು. ಆದರೆ, ಇಲ್ಲಿ 9 ಸೆಂ.ಮೀ ಮಾತ್ರ ಇರುವುದು ಕಂಡುಬಂದಿದೆ. ಈ ಸಂಬಂಧ ಕಿರಿಯ ಎಂಜಿನಿಯರ್ ಎಂ.ಪಿ. ನಾಗರಾಜ್ ಅವರನ್ನು ಅಮಾನತುಗೊಳಿಸಿ, ಗುತ್ತಿಗೆದಾರಎಸ್.ಬಿ. ಮಹೇಂದ್ರ ಹಾಗೂ ಸಹಾಯಕ ಕಾರ್ಯ ನಿರ್ವಾಹಣಾ ಎಂಜಿನಿಯರ್ ಲೋಕೇಶ್ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದರು.ಪ್ರಕೃತಿ ವಿಕೋಪ ಯೋಜನೆ ಅಡಿ ತೀರ್ಥಹಳ್ಳಿಯ ದೇವಂಗಿ ಗ್ರಾಮ ಪಂಚಾಯ್ತಿಯ ನವಿಲೆಗುಡ್ಡ 1 ಕಿ.ಮೀ. ಉದ್ದದ ರಸ್ತೆ ನಿರ್ಮಾಣಕ್ಕೆ ್ಙ 9.5 ಲಕ್ಷ  ಗುತ್ತಿಗೆ ನೀಡಲಾಗಿದ್ದು, ಅಲ್ಲಿಯೂ ಕಳಪೆ ಕಾಮಗಾರಿ ಆಗಿರುವುದು ದೃಢಪಟ್ಟಿದ್ದರಿಂದ ಇಲ್ಲಿನ ಕಿರಿಯ ಎಂಜಿನಿಯರ್ ಜಿ.ಪಿ. ನಾಗರಾಜ್ ಅವರನ್ನು ಅಮಾನತುಗೊಳಿಸಿ, ಸಹಾಯಕ ಕಾರ್ಯ ನಿರ್ವಾಹಣಾ ಎಂಜಿನಿಯರ್ ನಾಗಪ್ಪ ಹಾಗೂ ಗುತ್ತಿಗೆದಾರರಿಗೆ ನೋಟಿಸ್ ನೀಡಲಾಗಿದೆ ಎಂದರು.ಭದ್ರಾವತಿ ತಾಲ್ಲೂಕಿನ ಗೋಣಿಬೀಡು ಗ್ರಾಮದ 150 ಮೀ. ಉದ್ದದ ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ ್ಙ 4 ಲಕ್ಷ  ಗುತ್ತಿಗೆ  ನೀಡಲಾಗಿದ್ದು, ಕಾಮಗಾರಿ ಕಳಪೆಯಾದ್ದರಿಂದ ಕಿರಿಯ ಎಂಜಿನಿಯರ್ ಜೆ.ಪಿ. ಹಾಲೇಶಪ್ಪ ಅವರನ್ನು ಅಮಾನತುಗೊಳಿಸಿ, ಸಹಾಯಕ ಕಾರ್ಯ ನಿರ್ವಾಹಣಾ ಎಂಜಿನಿಯರ್ ರಾಮಚಂದ್ರಪ್ಪ ಹಾಗೂ ಗುತ್ತಿಗೆದಾರರಿಗೆ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದರು.ಬಿಆರ್‌ಪಿ ಬದಲಿ ರಸ್ತೆಯೂ ಕಳಪೆ:  ಭದ್ರಾವತಿ ತಾಲ್ಲೂಕಿನ ಬಿಆರ್‌ಪಿ ಬಳಿಯ ಸೇತುವೆ ಕುಸಿತಿದ್ದು, ಸಂಚಾರದ ದೃಷ್ಟಿಯಿಂದಾಗಿ ನಿರ್ಮಿಸಿದ ಬದಲಿ ರಸ್ತೆ ಕಾಮಗಾರಿಯಲ್ಲೂ ಅವ್ಯವಹಾರ ಹಾಗೂ ಕಳಪೆ ಕಾಮಗಾರಿ ನಡೆದಿದೆ ಎಂದು ಈಚೆಗೆ ಜನರು ಪ್ರತಿಭಟನೆ ನಡೆಸಿದ್ದರು. ಬಿಆರ್‌ಪಿ ಬಳಿಯ ಸೇತುವೆ ನಿರ್ಮಾಣವಾಗುವವರೆಗೂ ಬದಲಿ ರಸ್ತೆಗೆ ಸ್ಥಳೀಯ ಶಾಸಕರ ಕ್ಷೇತ್ರಾಭಿವೃದ್ಧಿ ಹಾಗೂ ಪ್ರಕೃತಿ ವಿಕೋಪ ಯೋಜನೆಯಡಿಯಲ್ಲಿ 450 ಮೀ. ಉದ್ದದ ಬದಲಿ ರಸ್ತೆ ಕಾಮಗಾರಿಗೆ ್ಙ 5 ಲಕ್ಷ ಗುತ್ತಿಗೆ ನೀಡಲಾಗಿದ್ದು, ಕಳಪೆ ಕಾಮಗಾರಿ ನಡೆಸಿದ ಹಿನ್ನೆಲೆಯಲ್ಲಿ ಪಿಡಬ್ಲೂಡಿ ಎಂಜಿನಿಯರ್ ಮಮತಾ ಹಾಗೂ ಸಹಾಯಕ ಕಾರ್ಯ ನಿರ್ವಾಹಣಾ ಎಂಜಿನಿಯರ್ ತಿಮ್ಮೇಗೌಡ ಅವರಿಗೆ ನೋಟಿಸ್ ನೀಡಲಾಗಿದೆ ಎಂದರು. ಅಧಿಕಾರಿ ಅಮಾನತು:  ಸಮಾಜ ಕಲ್ಯಾಣ ಇಲಾಖೆ, ಕುವೆಂಪು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡದೇ ಇರುವ ಕುರಿತು ವಿಚಾರ ನಡೆಸಿದಾಗ ಸಕಾರಣ ನೀಡದ ಭದ್ರಾವತಿ ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಚಂದ್ರಪ್ಪ ಅವರನ್ನು ಅಮಾನತು ಮಾಡಲಾಗಿದೆ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.