ಬುಧವಾರ, ಮೇ 12, 2021
19 °C

ಮೂವರು ಕೊಲೆ ಆರೋಪಿಗಳ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಾಲ್‌ಸೆಂಟರ್‌ನ ಕಾರು ಚಾಲಕ ಪದ್ಮನಾಭನಗರದ ರಾಘವೇಂದ್ರ ಲೇಔಟ್‌ನ ನಿವಾಸಿ ಆನಂದ್ ಕೊಲೆ ಪ್ರಕರಣದ ಮೂರು ಮಂದಿ ಆರೋಪಿಗಳನ್ನು ಬನಶಂಕರಿ ಪೊಲೀಸರು ಬಂಧಿಸಿದ್ದಾರೆ.

ದೊಡ್ಡಬಳ್ಳಾಪುರದ ಕುರುಬರಹಳ್ಳಿಯ ಪ್ರದೀಪ್ (24), ಎಳ್ಳುಪುರ ಗ್ರಾಮದ ವೆಂಕಟೇಶ (19) ಮತ್ತು ತುಮಕೂರು ಸಮೀಪದ ನರಸಯ್ಯನಪಾಳ್ಯದ ಜಯರಾಮ (23) ಬಂಧಿತರು.ದ್ವೇಷದ ಹಿನ್ನೆಲೆಯಲ್ಲಿ ಆನಂದ್‌ನನ್ನು ಅಪಹರಿಸಿದ್ದ ಆರೋಪಿಗಳು ಕೊಲೆ ಮಾಡಿ ಶವವನ್ನು ತುಮಕೂರು ಸಮೀಪದ ಸಾತಘಟ್ಟದ ಬಳಿಯ ನೀರಿನ ಹೊಂಡಕ್ಕೆ ಎಸೆದು ಪರಾರಿಯಾಗಿದ್ದರು. ಆನಂದ್ ಕಾಣೆಯಾಗಿದ್ದ ಬಗ್ಗೆ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.`ಜಯರಾಮ ಮತ್ತು ಆನಂದ್ ಕಾಲ್‌ಸೆಂಟರ್‌ನಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಕ್ಷುಲ್ಲಕ ವಿಷಯಕ್ಕೆ ಅವರ ಮಧ್ಯೆ ಜಗಳವಾಗಿತ್ತು. ಆನಂದ್ ತನ್ನ ಸ್ನೇಹಿತರ ಜತೆ ಸೇರಿ ಜಯರಾಮನ ಮೇಲೆ ಹಲ್ಲೆ ನಡೆಸಿದ್ದ. ಇದಕ್ಕೆ ಪ್ರತೀಕಾರವಾಗಿ ಆತ ಕೊಲೆ ಮಾಡಿದ್ದ. ವೆಂಟೇಶ ಮತ್ತು ಪ್ರದೀಪ್ ಜಯರಾಮನ ಚಿಕ್ಕಮ್ಮನ ಮಕ್ಕಳು~ ಎಂದು ಇನ್‌ಸ್ಪೆಕ್ಟರ್ ಗೋವಿಂದರಾಜು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.