ಶುಕ್ರವಾರ, ಜನವರಿ 24, 2020
16 °C
ಹೆಸ್ಕಾಂ ಗ್ರಾಹಕರ ಸಂವಾದ ಸಭೆ

ಮೂವರು ಗ್ರಾಹಕರು; ಐವರು ಅಧಿಕಾರಿಗಳು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿದ್ದಾಪುರ (ಉ.ಕ ಜಿಲ್ಲೆ): ಹೆಸ್ಕಾಂ ಸ್ಥಳೀಯ ಉಪ ವಿಭಾಗದ ಕಾರ್ಯಾ­ಲಯದಲ್ಲಿ ಸೋಮವಾರ ನಡೆದ ಗ್ರಾಹಕರ ಸಂವಾದ ಸಭೆಯಲ್ಲಿ ಗ್ರಾಹಕರಿಗಿಂತ ಅಧಿಕಾರಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದರು.ಸಭೆಯ ಆರಂಭದಲ್ಲಿ ಇಬ್ಬರು ಗ್ರಾಹಕರಿದ್ದರೆ, ನಂತರ ಮತ್ತೊಬ್ಬರು ಸೇರಿಕೊಂಡರು.ಹೆಸ್ಕಾಂ ಸಹಾಯಕ ಕಾರ್ಯ­ನಿರ್ವಾಹಕ ಎಂಜಿನಿಯರ್‌ ಡಿ.ಟಿ.­ಹೆಗಡೆ, ವಿವಿಧ ಸೆಕ್ಷನ್‌ಗಳ ಅಧಿಕಾರಿ­ಗಳಾದ ಅಶೋಕ ನಾಯ್ಕ, ಕೆ.ಜಿ.­ಕಡಕೇರಿ,ಎಸ್‌.ಎನ್‌.ಮೋಹನ್, ಪಿ.ಎನ್‌.ಮಡಿವಾಳ ಹೀಗೆ ಐವರು ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)