ಭಾನುವಾರ, ಜುಲೈ 25, 2021
22 °C

ಮೂವರು ನೀರುಪಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಖಾನಾಪುರ: ತಾಲ್ಲೂಕಿನ ಕುಸಮಳಿ ಹಾಗೂ ಉಚವಡೆ ಮಧ್ಯದಲ್ಲಿ ಹರಿಯುತ್ತಿರುವ ಮಲಪ್ರಭಾ ನದಿಯಲ್ಲಿ ಈಜಲು ಹೋದ ಮೂವರು ಯುವಕರು ನೀರು ಪಾಲಾದ ಘಟನೆ ಸೋಮವಾರ ಮುಂಜಾನೆ ಸಂಭವಿಸಿದೆ.ಮೂವರೂ ಯುವಕರು ಬೆಳಗಾವಿ ತಾಲ್ಲೂಕಿನ ನಾವಗಾ ಗ್ರಾಮದವರೆಂದು ಹೇಳಲಾಗಿದ್ದು ಸೋಮವಾರ ಸಂಜೆಯವರೆಗೆ ಇಬ್ಬರ ಶವ ಮಾತ್ರ ದೊರೆತಿದೆ.ಮೃತರನ್ನು ರಾಮಲಿಂಗ ಮಲ್ಲಪ್ಪ ದಿಂಡಲಕೊಪ್ಪ (20), ಲಕ್ಷ್ಮಣ ರಾಮಲಿಂಗ ಮುದ್ದಿ (24), ಮಹೇಶ ಪುಂಡಲೀಕ ನಾಯಕ (22) ಎಂದು ಗುರುತಿಸಲಾಗಿದ್ದು, ಮುಂದಿನ ವಾರ ನಾವಗಾದಲ್ಲಿ ನಡೆಯುವ ಜಾತ್ರೆಗಾಗಿ ಕಟ್ಟಿಗೆಗಳನ್ನು ಕಡಿಯಲು ಉಚವಡೆ ಗ್ರಾಮದ ಬಳಿಯ ಅರಣ್ಯಕ್ಕೆ ಹೋದಾಗ ಈ ಘಟನೆ ಸಂಭವಿಸಿದೆ.ಪಿಎಸ್‌ಐ ದಿವಾಕರ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಪಿಎಸ್‌ಐ ಹೊರತುಪಡಿಸಿ ಸ್ಥಳೀಯ ಸಿಪಿಐ ಒಳಗೊಂಡಂತೆ ಇತರೆ ಅಧಿಕಾರಿಗಳು ಘಟನೆ ನಡೆದ ಸ್ಥಳದತ್ತ ಸುಳಿಯದೇ ಇದ್ದುದನ್ನು ಸ್ಥಳೀಯರು ಖಂಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.