ಶುಕ್ರವಾರ, ಫೆಬ್ರವರಿ 26, 2021
18 °C

ಮೂವರು ಬಾಕ್ಸರ್‌ಗಳ ಮೇಲೆ ಭರವಸೆಯ ಭಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೂವರು ಬಾಕ್ಸರ್‌ಗಳ ಮೇಲೆ ಭರವಸೆಯ ಭಾರ

ರಿಯೊ ಡಿ ಜನೈರೊ (ಪಿಟಿಐ): ಭಾರತಕ್ಕೆ ಪದಕ ತರುವ ಕ್ರೀಡೆಗಳಲ್ಲಿ ಬಾಕ್ಸಿಂಗ್ ಪ್ರಮುಖವಾದದ್ದು.  ಅದರೆ ಕಳೆದ ಹಲವು ದಿನಗಳಿಂದ ಭಾರತ ಬಾಕ್ಸಿಂಗ್ ಫೆಡರೇಷನ್ ಅಸ್ತಿತ್ವದಲ್ಲಿಯೇ ಇಲ್ಲ.ಆಡಳಿತಾತ್ಮಕ ಗೊಂದಲಗಳನ್ನು ಎದುರಿಸುತ್ತಲೇ ಇಲ್ಲಿಯ ಮೂವರು ಬಾಕ್ಸರ್‌ಗಳು ಅಂತೂ ಇಂತೂ ರಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ. ಕಳೆದ ಎರಡು ಒಲಿಂಪಿಕ್ಸ್‌ಗಳಲ್ಲಿ ದೇಶಕ್ಕೆ  ಪದಕದ ಕಾಣಿಕೆ  ತಂದು ಕೊಟ್ಟ ವಿಭಾಗ ಇದು.  ಈ ಬಾರಿ ಕಣದಲ್ಲಿರುವ  ಶಿವ ಥಾಪಾ (56ಕೆಜಿ), ಮನೋಜ್ ಕುಮಾರ್ (64ಕೆಜಿ) ಮತ್ತು ವಿಕಾಸ್ ಕೃಷ್ನನ್  (75 ಕೆಜಿ) ಅವರು ಈ ವರ್ಷವೂ ಪದಕ ಗಳಿಕೆಯನ್ನು ಮುದು ವರೆಇಸುವರೆ ಎಂಬ ಕುತೂಹಲ ಗರಿ ಗೆದರಿದೆ.  ಆದರೆ, ಅವರ ಹಾದಿ ಸುಗಮವಾಗಿಲ್ಲ. ಏಷ್ಯನ್ ಕ್ರೀಡಾಕೂಟದ ಚಿನ್ನದ ಪದಕ ಮತ್ತು ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗಳಿಸಿರುವ ವಿಕಾಸ್ ಕೃಷ್ಣನ್ ಅವರು ಇಲ್ಲಿಯೂ ಮಿಂಚುವ ಸಾಮರ್ಥ್ಯ ಹೊಂದಿದ್ದಾರೆ. ಆಗಸ್ಟ್ 9ರಂದು ನಡೆಯುವ ಮೊದಲ ಸುತ್ತಿನ ಪಂದ್ಯದಲ್ಲಿ ಅವರು ಅಮೆರಿಕದ 18 ವರ್ಷದ ಬಾಕ್ಸರ್ ಚಾರ್ಲ್ಸ್ ಕಾನ್‌ವೆಲ್ ವಿರುದ್ಧ ಸೆಣಸಲಿದ್ದಾರೆ.ಆ. 10ರಂದು ಮನೋಜ್ ಅವರು ಲಿಥುವಾನಿಯಾದ ಪೆಟ್ರಾಸ್ಕರಸ್ ಅವರ ವಿರುದ್ಧ ಹೋರಾಡಲಿದ್ದಾರೆ. ಪೆಟ್ರಾ ಸ್ಕರಸ್ ಅವರು ಯೂತ್ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ವಿಜೇತರಾಗಿದ್ದರು.ಆ. 11ರಂದು ಭಾರತದ ಇನ್ನೊಬ್ಬ ಪ್ರತಿಭಾವಂತ ಬಾಕ್ಸರ್ ಶಿವ ಥಾಪಾ ಅವರು ಕ್ಯೂಬಾದ ರೊಬಿಸಿ ರಾಮಿರೇಜ್ ಅವರ ವಿರುದ್ಧ ಹಣಾಹಣಿ ನಡೆಸುವರು.  ಕ್ಯೂಬಾದ ಆರನೇ ಶ್ರೇಯಾಂಕದ ಬಾಕ್ಸರ್ ರಮಿರೇಜ್ ಅವರು 2012ರ ಒಲಿಂಪಿಕ್ಸ್‌ನ ಫ್ಲೈವೇಟ್ ವಿಭಾಗದಲ್ಲಿ ಚಾಂಪಿಯನ್ ಆಗಿದ್ದರು. ಅವರು ಮತ್ತು ಥಾಪಾ ಇಬ್ಬರೂ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಪಡೆದಿದ್ದಾರೆ. ಇದರಿಂದಾಗಿ ಇಬ್ಬರ ನಡುವಿನ ಹಣಾಹಣಿ ತುರುಸಿನಿಂದ ನಡೆಯುವ ನಿರೀಕ್ಷೆ ಇದೆ.ಕಳೆದ ನಾಲ್ಕು ವರ್ಷಗಳಲ್ಲಿ ಹಲವು ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಸಾಧನೆ ಮಾಡಿರುವ ಈ ಮೂವರು ಬಾಕ್ಸರ್‌ಗಳು ಈಗ ಒಲಿಂಪಿಕ್ಸ್‌ ಅಗ್ನಿ ಪರೀಕ್ಷೆಯನ್ನು ಹೇಗೆ ಎದುರಿಸುತ್ತಾ ರೆಂದು ಕಾದು ನೋಡಬೇಕು.ಕಳೆದ ಎರಡೂ ಒಲಿಂಪಿಕ್ಸ್‌್ ಗಳಲ್ಲಿ  ಬಾಕ್ಸರ್‌ಗಳು ದೇಶಕ್ಕೆ ಪದಕದ ಕಾಣಿಕೆ ನೀಡಿದ್ದರು.  2008ರಲ್ಲಿ ಪುರುಷರ ಮಿಡ್ಲ್‌ವೇಟ್‌ನಲ್ಲಿ ವಿಜೇಂದರ್ ಸಿಂಗ್ ಕಂಚಿನ ಪದಕ ಜಯಿಸಿದ್ದರು. ಲಂಡನ್‌ನಲ್ಲಿ ಮಹಿಳೆಯರ ವಿಭಾಗದಲ್ಲಿ ಮೇರಿ ಕೋಮ್ ಕಂಚು ಗಳಿಸಿದ್ದರು. ಆದರೆ, ಈ ಬಾರಿ ಇವರಿಬ್ಬರೂ ಇಲ್ಲ. ವಿಜೇಂದರ್ ವೃತ್ತಿಪರ ಬಾಕ್ಸಿಂಗ್‌ನಲ್ಲಿ ಮಿಂಚುತ್ತಿದ್ದಾರೆ.  ಮೇರಿ ಅರ್ಹತೆ ಗಿಟ್ಟಿಸಿರಲಿಲ್ಲ.  ಎಲ್. ಸರಿತಾದೇವಿ ಕೂಡ ಅರ್ಹತೆ ಪಡೆದಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.