ಮೂವರು ಮಕ್ಕಳು ಜಲಸಮಾಧಿ

7

ಮೂವರು ಮಕ್ಕಳು ಜಲಸಮಾಧಿ

Published:
Updated:

ಚಿಕ್ಕಜಾಜೂರು: ದನಗಳಿಗೆ ನೀರು ಕುಡಿಸಲು ಹೋಗಿ ಹೊಂಡದಲ್ಲಿ ಮುಳುಗಿ ಮೂವರು ಮಕ್ಕಳು ಮೃತ­ಪಟ್ಟ ಘಟನೆ ಭಾನುವಾರ ನಡೆದಿದೆ.ಸಮೀಪದ ಬೊಂಡೆಬೊಮ್ಮೆನಹಳ್ಳಿ ವಡ್ಡರಹಟ್ಟಿ ಗ್ರಾಮದ ಕಾರ್ಮಿಕ ಮಂಜಪ್ಪ ಅವರ ಪುತ್ರ ಅಭಿಷೇಕ್‌ (12), ಲಕ್ಷ್ಮಣ ಅವರ ಪುತ್ರ ದರ್ಶನ್‌ (12) ಮತ್ತು ತಿಮ್ಮಪ್ಪ ಅವರ ಪುತ್ರ ಸಾಗರ್‌ (11)  ಮೃತಪಟ್ಟವರು.ಭಾನುವಾರ ರಜಾ ದಿನವಾಗಿದ್ದರಿಂದ ದನಗಳನ್ನು ಮೇಯಿಸಲು ಹೋಗಿದ್ದರು. ಗೋಮಾಳದಲ್ಲಿದ್ದ ಗುಂಡಿಯಲ್ಲಿ ದನಗಳಿಗೆ ನೀರು ಕುಡಿಸಲು ಹೋದಾಗ ಈ ದುರ್ಘಟನೆ ಸಂಭವಿಸಿದೆ. ಈ ಮಕ್ಕಳೆಲ್ಲರೂ 5ನೇ ತರಗತಿಯ ವಿದ್ಯಾರ್ಥಿಗಳು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry