ಮೂವರು ಮಾವೊವಾದಿಗಳ ಹತ್ಯೆ

7

ಮೂವರು ಮಾವೊವಾದಿಗಳ ಹತ್ಯೆ

Published:
Updated:

ರೂರ್ಕೆಲಾ (ಪಿಟಿಐ):  ಓಡಿಶಾದ ಸುಂದರ್‌ಘರ್ ಜಿಲ್ಲೆಯಲ್ಲಿ ಭದ್ರತಾ ಪಡೆಯೊಂದಿಗೆ ನಡೆದ ತೀವ್ರ ಚಕಮಕಿಯಲ್ಲಿ ಪ್ರದೇಶ ಕಮಾಂಡರ್ ಸೇರಿದಂತೆ ಮೂರು ಮಂದಿ ಮಾವೊವಾದಿಗಳು ಶುಕ್ರವಾರ ಮೃತಪಟ್ಟಿದ್ದಾರೆ.

ಸಿಆರ್‌ಪಿಎಫ್ ಜವಾನ್ಸ್ ಮತ್ತು ರಾಜ್ಯ ಪೊಲೀಸ್ ಜರ್ಖಂಡ್ ಗಡಿಯ ಬಿರ್ಸಾ ಪೊಲೀಸ್ ವ್ಯಾಪ್ತಿಯ ದಟ್ಟ ಸರಂಡಾ ಅರಣ್ಯದಲ್ಲಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಈ ಗುಂಡಿನ ಚಕಮಕಿ ನಡೆಯಿತು ಎಂದು ಸಿಆರ್‌ಪಿಎಫ್ ಮೂಲಗಳು ತಿಳಿಸಿವೆ.

ಇಲ್ಲಿಂದ ಸುಮಾರು 30 ಕಿ.ಮೀ. ದೂರದ ಅಖಯಾತಿಲ ನಾಲಾದಲ್ಲಿ ಅರಣ್ಯದಲ್ಲಿ ಅವಿತಿದ್ದ ಮಾವೊವಾದಿಗಳು ಭದ್ರತಾ ಸಿಬ್ಬಂದಿಗೆ ಗುಂಡು ಹಾರಿಸಿದಾಗ ಅವರು ಗುಂಡಿನ ಚಕಮಕಿ ನಡೆಸಿದರು ಎಂದು ಅವರು ತಿಳಿಸಿದ್ದಾರೆ.

ಗುಂಡಿನ ಚಕಮಕಿ ನಂತರ ಮೂವರು ಮಾವೊವಾದಿಗಳ ಶವಗಳು ದೊರೆತವು ಎಂದು ಅವರು ಹೇಳಿದ್ದಾರೆ. ಇವರಲ್ಲಿ ಒಬ್ಬನನ್ನು ಜಾರ್ಖಂಡ್‌ನ ದಿಘಾ ಪ್ರದೇಶದ ಮಾವೊವಾದಿಗಳ ಪ್ರದೇಶ ಕಮಾಂಡರ್ ಮೊಹಮ್ಮದ್ ವಸ್ಲೀಮ್ ಎಂದು ಗುರುತಿಸಲಾಗಿದೆ.

ಸ್ಥಳದಿಂದ ಬಂದೂಕು, ಪಿಸ್ತೂಲು, ಮದ್ದುಗುಂಡುಗಳು ಮತ್ತು ಭಿತ್ತಿ ಪತ್ರಗಳು, ಪೋಸ್ಟರ್‌ಗಳು ಸೇರಿದಂತೆ ಮಾವೊವಾದಿಗಳ ಕುರಿತ ಕೃತಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಅರಣ್ಯದಲ್ಲಿ ತೀವ್ರ ಶೋಧ ಕಾರ್ಯ ಕ್ಕೆಗೊಳ್ಳಲಾ  ಗಿದೆ ಎಂದು ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry