ಭಾನುವಾರ, ಮಾರ್ಚ್ 7, 2021
31 °C
ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದ ಎನ್‌ಐಎ

ಮೂವರು ಶಂಕಿತ ಐಎಸ್‌ ಉಗ್ರರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೂವರು ಶಂಕಿತ ಐಎಸ್‌ ಉಗ್ರರ ಬಂಧನ

ನವದೆಹಲಿ (ಐಎಎನ್‌ಎಸ್‌): ಮೂರು ಮಂದಿ ಶಂಕಿತ ಐಎಸ್‌ ಉಗ್ರರನ್ನು ರಾಷ್ಟ್ರೀಯ ತನಿಖಾದಳ (ಎನ್‌ಐಎ) ಅಧಿಕಾರಿಗಳು ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಬಂಧಿಸಿದ್ದಾರೆ.

ಶೇಖ್‌ ಅಜರ್‌ –ಅಲ್‌– ಇಸ್ಲಾಮ್‌ ಅಲಿಯಾಸ್‌ ಅಬ್ದುಲ್‌ ಸತ್ತಾರ್‌ ಶೇಖ್‌, ಮೊಹಮ್ಮದ್‌ ಫರಾನ್‌ ಅಲಿಯಾಸ್‌ ಮೊಹಮ್ಮದ್‌ ರಫೀಕ್‌ ಶೇಖ್‌ ಮತ್ತು ಅದ್ನಾನ್‌ ಹುಸೇನ್‌ ಅಲಿಯಾಸ್‌ ಮೊಹಮ್ಮದ್‌ ಹುಸೇನ್‌ ಬಂಧಿತರು.

‘ವಿಮಾನ ನಿಲ್ದಾಣದಲ್ಲಿ ಈ ಮೂರು ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಯಿತು. ಮೂರು ಮಂದಿಯ ವಿಚಾರಣೆ ಮುಂದುವರಿದಿದೆ’ ಎಂದು ಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆ.

ಭಾರತದಲ್ಲಿ ಐಎಸ್‌ ಪರ ಒಲವು ಹೊಂದಿರುವವರನ್ನು ಗುರುತಿಸುವುದು, ಅವರನ್ನು ಸಂಘಟನೆಗೆ ಸೆಳೆಯುವುದು ಮತ್ತು ತರಬೇತಿ ನೀಡುವುದು ಸೇರಿದಂತೆ ಐಎಸ್‌ ಪರ ಕಾರ್ಯನಿರ್ವಹಿಸಲು ಈ ಮೂರು ಮಂದಿ ಭಾರತಕ್ಕೆ ಬಂದಿರುವ ಶಂಕೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಮೂರು ಮಂದಿ ಎಲ್ಲಿಯವರು ಎಂಬ ಮಾಹಿತಿಯನ್ನು ತಿಳಿಸಲು ಭಯೋತ್ಪಾದನಾ ನಿಗ್ರಹಾದಳದ ಅಧಿಕಾರಿಗಳು ನಿರಾಕರಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.