ಗುರುವಾರ , ಏಪ್ರಿಲ್ 22, 2021
23 °C

ಮೃಗಾಲಯದಲ್ಲಿ ಶೀಘ್ರ ಅತ್ಯಾಧುನಿಕ ಇನ್ಸಿನಿರೇಟರ್

ವಿಶೇಷ ವರದಿ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಮೃತಪಟ್ಟ ಪ್ರಾಣಿಗಳ ಅಂತ್ಯ ಸಂಸ್ಕಾರ ಮಾಡಲು ಶ್ರೀಚಾಮರಾಜೇಂದ್ರ ಮೃಗಾಲಯವು ಅತ್ಯಾಧುನಿಕ ತಂತ್ರಜ್ಞಾನದ ಮೊರೆ ಹೋಗುತ್ತಿದೆ. ರಾಜ್ಯದಲ್ಲಿಯೇ ಮೊದಲ ಬಾರಿಗೆ ಈ ಮೃಗಾಲಯದಲ್ಲಿ ಶ್ರೇಡರ್ ತಂತ್ರಜ್ಞಾನ ಆಧಾರಿತ `ಇನ್ಸಿನಿರೇಟರ್~ ಅನ್ನು ರೂ 30.91 ಲಕ್ಷ ವೆಚ್ಚದಲ್ಲಿ ಅಳವಡಿಸಲಾಗುತ್ತಿದೆ.`ಮೃಗಾಲಯದಲ್ಲಿ ಜೈವಿಕ ಗೊಬ್ಬರ ತಯಾರಿಸುವ ಜಾಗದ ಪಕ್ಕದಲ್ಲಿಯೇ 40/60 ಅಡಿ ಜಾಗದಲ್ಲಿ ಈ ಇನ್ಸಿನಿರೇಟರ್ ಮುಂದಿನ ಫೆಬ್ರುವರಿ ವೇಳೆಗೆ ಸಿದ್ಧವಾಗಲಿದೆ. ಹೈದರಾಬಾದಿನ ನೆಹರು ಮೃಗಾಲಯದಲ್ಲಿ ಇಂತಹ ಸೌಲಭ್ಯವಿದೆ. ಕೇಂದ್ರ ಮೃಗಾಲಯ ಪ್ರಾಧಿಕಾರ (ಸಿಜೆಡ್‌ಎ) ನಿಯಮದನ್ವಯ ಇದನ್ನು ಮಾಡಲಾಗಿದೆ. ಸಿಜೆಡ್‌ಎ ನಿಯಮದ ಪ್ರಕಾರ ದೊಡ್ಡ ಮತ್ತು ಮಧ್ಯಮ ಪ್ರಮಾಣದ ಮೃಗಾಲಯಗಳಲ್ಲಿ ಇಂತಹ ಇನ್ಸಿನೆರೇಟರ್‌ಗಳು ಕಡ್ಡಾಯ. ಪ್ರಾಣಿಗಳ ದೇಹವನ್ನು ದಹಿಸುವುದು ಕೂಡ ಕಡ್ಡಾಯ~ ಎಂದು ಮೈಸೂರು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ. ರವಿ ಹೇಳುತ್ತಾರೆ.ಇನ್ಸಿನಿರೇಟರ್ ಪರಿಸರಸ್ನೇಹಿಯಾಗಿರುವಂತೆ ಮುತುವರ್ಜಿ ವಹಿಸಿ ವಿನ್ಯಾಸಗೊಳಿಸಲಾಗಿದೆ. ಪ್ರಾಣಿ ದೇಹವನ್ನು ದಹಿಸುವಾಗ ಬಿಡುಗಡೆಯಾಗುವ ವಿಷಕಾರಿ ಅನಿಲವನ್ನು ರಾಸಾಯನಿಕ ಮಿಶ್ರಿತ ನೀರಿನ ಸಹಾಯದಿಂದ ನಿಯಂತ್ರಿಸಲಾಗುತ್ತದೆ. ದೊಡ್ಡ ಗಾತ್ರದ ಪ್ರಾಣಿಗಳು ಮತ್ತು ಪಕ್ಷಿಗಳನ್ನು ನಿಯಮದ ಪ್ರಕಾರ ಕಟ್ಟಿಗೆ ಬಳಸಿ ಸುಡಬೇಕು.

 

ಒಂದು ಹುಲಿ ದೇಹ ದಹಿಸಲು ಸುಮಾರು 400 ಕೆಜಿ ಉರುವಲು ಬೇಕಾಗುತ್ತದೆ. ಆನೆ ದೇಹವನ್ನು ಹೂಳಲಾಗುತ್ತದೆ. ಈ ನಿಯಮದಲ್ಲಿ ಕಾಡು ಹಂದಿ, ಕಪ್ಪು ಹಂಸ, ಸಿಂಹ, ಹೇಸರಗತ್ತೆ, ತೋಳ, ಕಾಶ್ಮೀರ್ ಜಿಂಕೆ, ದೊಡ್ಡ ಮಂಗ, ಹೆಬ್ಬಾವು, ರೈನೋಸಾರಸ್ ಕೂಡ ಬರುತ್ತವೆ ಎಂದು ರವಿ ವಿವರಿಸುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.