ಮೃಗಾಲಯ ಪ್ರವೇಶ ಶುಲ್ಕ: ಪರಿಷ್ಕರಣೆಗೆ ಮನವಿ

7

ಮೃಗಾಲಯ ಪ್ರವೇಶ ಶುಲ್ಕ: ಪರಿಷ್ಕರಣೆಗೆ ಮನವಿ

Published:
Updated:

ಮೈಸೂರು: ನಗರದ ಚಾಮರಾಜೇಂದ್ರ ಮೃಗಾಲಯದ ಪ್ರವೇಶ ದರ ಹೆಚ್ಚಳ ಮಾಡುವುದರಿಂದ ಬಡ ವಿದೇಶಿ ಪ್ರವಾಸಿಗಳಿಗೆ ಹೊರೆಯಾಗಲಿದೆ. ಆದ್ದರಿಂದ, ಈ ಹಿಂದಿನ ಶುಲ್ಕವನ್ನೇ ಮುಂದುವರಿಸಬೇಕು ಎಂದು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅನುಮೋದಿತ ಮಾರ್ಗದರ್ಶಿ ಸಂಘ ಮನವಿ ಮಾಡಿದೆ.ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರು ಅದರಲ್ಲೂ ವಿದೇಶಿ ಪ್ರವಾಸಿಗರು ವನ್ಯಧಾಮ ಮತ್ತು ಪಕ್ಷಿಧಾಮಗಳಿಗೆ ಭೇಟಿ ನೀಡುತ್ತಾರೆ. ಆದರೆ, ಪ್ರವೇಶ ದರ ಮತ್ತು ಕಾರ್ ಪಾರ್ಕಿಂಗ್ ಶುಲ್ಕವನ್ನು ಹೆಚ್ಚಿಸುವುದರಿಂದ ಬಡ ವಿದೇಶಿ ಪ್ರವಾಸಿಗರಿಗೆ ಹೊರೆಯಾಗುತ್ತದೆ. ಆದ್ದರಿಂದ ಹಿಂದಿನ ದರಗಳನ್ನೇ ಮುಂದುವರಿಸಬೇಕು. ಇಲ್ಲದಿದ್ದರೆ ವಿದೇಶಿ ಪ್ರವಾಸಿಗರೊಡನೆ ಸೇರಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಸಂಘದ ಕಾರ್ಯದರ್ಶಿ ಟಿ.ಆರ್.ನಾಗರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry