ಮೃತಪಟ್ಟವರು ಅಧ್ಯಕ್ಷರಾಗಿ ನೇಮಕ!

7
ಬೆಂಗಳೂರು ವಿ.ವಿ. ಅವಾಂತರ

ಮೃತಪಟ್ಟವರು ಅಧ್ಯಕ್ಷರಾಗಿ ನೇಮಕ!

Published:
Updated:

ಬೆಂಗಳೂರು: ಸೇವೆಯಿಂದ ನಿವೃತ್ತರಾಗಿರುವ ವ್ಯಕ್ತಿಯೊಬ್ಬರನ್ನು ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕ ಪದವಿಯ ಅರ್ಥಶಾಸ್ತ್ರ ಪರೀಕ್ಷಾ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲು ಸಾಧ್ಯವೇ? ಅಷ್ಟೇ ಅಲ್ಲ. ಮೃತಪಟ್ಟಿರುವ ವ್ಯಕ್ತಿಯೊಬ್ಬರನ್ನು ಆ ಸ್ಥಾನಕ್ಕೆ ನೇಮಕ ಮಾಡುವುದು ಯಾರಿಂದಾದರೂ ಸಾಧ್ಯವೇ?!ಖಂಡಿತ ಸಾಧ್ಯ! ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವರಿಂದ (ಮೌಲ್ಯಮಾಪನ) ಈ ಕೆಲಸ ಸಾಧ್ಯ. ನವೆಂಬರ್ 30ರಂದು ಆದೇಶ ಹೊರಡಿಸಿರುವ ಕುಲಸಚಿವರು, ಮಂಡಳಿಯ ಅಧ್ಯಕ್ಷ ಸ್ಥಾನದಿಂದ ಪ್ರೊ.ಎನ್. ರಾಜಗೋಪಾಲ್ ಅವರು ನಿವೃತ್ತರಾದ ಕಾರಣ, ಆ ಸ್ಥಾನಕ್ಕೆ ಪಿ. ಚಂದ್ರಾ ಅವರನ್ನು ನೇಮಕ ಮಾಡಿರುವುದಾಗಿ ಹೇಳಿದ್ದಾರೆ.ಸೋಜಿಗದ ಸಂಗತಿ ಎಂದರೆ, ಪ್ರೊ. ರಾಜಗೋಪಾಲ್ ಅವರು ಈ ವರ್ಷದ ಮೇನಲ್ಲಿ ನಿವೃತ್ತಿ ಹೊಂದಿದ್ದಾರೆ. ಇವರಿಗಿಂತ ಒಂದು ತಿಂಗಳು ಮುನ್ನವೇ (2012ರ ಏಪ್ರಿಲ್) ಚಂದ್ರಾ ಅವರು ಕರ್ತವ್ಯದಿಂದ ನಿವೃತ್ತಿಹೊಂದಿದ್ದಾರೆ. ಅಲ್ಲದೆ ಇದೇ ಮೇನಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಆದರೂ, ವಿ.ವಿ. ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ.ಈ ಕುರಿತು ಪ್ರತಿಕ್ರಿಯೆ ನೀಡಿದ ಪ್ರೊ. ರಾಜಗೋಪಾಲ್, `ವಿ.ವಿ.ಯ ಮೂರ್ಖತನಕ್ಕೆ ಇದೊಂದು ಉದಾಹರಣೆ' ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry