ಮೃತಮಕ್ಕಳಿಗಾಗಿ ಕಂಬನಿ ಮಿಡಿಯುವ ಚಿಂಪಾಂಜಿಗಳು

7

ಮೃತಮಕ್ಕಳಿಗಾಗಿ ಕಂಬನಿ ಮಿಡಿಯುವ ಚಿಂಪಾಂಜಿಗಳು

Published:
Updated:

ಲಂಡನ್ (ಪಿಟಿಐ): ಹೆಣ್ಣು ಚಿಂಪಾಂಜಿಗಳು ತಮ್ಮ ಅತಿ ಹತ್ತಿರದವರನ್ನು ಕಳೆದುಕೊಂಡರೆ ಮಾನವರಂತೆಯೇ ಶೋಕಿಸುತ್ತವೆ ಎಂಬುದನ್ನು ವಿಜ್ಞಾನಿಗಳ ತಂಡವೊಂದು ಚಿತ್ರೀಕರಿಸುವುದರ ಮೂಲಕ ಸಾಬೀತುಪಡಿಸಿದೆ.ಜರ್ಮನಿಯ ಮ್ಯಾಕ್ಸ್ ಪ್ಲಾಂಕ್ ಮನೋವೈಜ್ಞಾನಿಕ ಭಾಷಾಶಾಸ್ತ್ರದ ಸಂಸ್ಥೆಯ ಅಂತರರಾಷ್ಟ್ರೀಯ ತಂಡವೊಂದು ಜಂಜಿಯಾದದಲ್ಲಿ ತನ್ನ 16 ತಿಂಗಳ ಮರಿ ಮೃತಪಟ್ಟಾಗ  ತಾಯಿ ಚಿಂಪಾಂಜಿ ದುಃಖಿಸುವುದನ್ನು ದಾಖಲಿಸಿಕೊಂಡಿದೆ. ಮರಿಯ ಶವವನ್ನು 24 ಗಂಟೆಗೂ ಅಧಿಕ ಕಾಲ ಹಿಡಿದುಕೊಂಡಿದ್ದ ತಾಯಿ ನಿಧಾನವಾಗಿ ನೆಲದ ಮೇಲೆ ಮಲಗಿಸಿತು. ನಂತರವೂ ಅದನ್ನು ಹತ್ತಿರದಿಂದ ವೀಕ್ಷಿಸುತ್ತಲೇ ಇತ್ತು. ಆಗಾಗ್ಗೆ ದೇಹದ ಬಳಿ ಬಂದು ಅದರ ಮುಖ ಮತ್ತು ಕುತ್ತಿಗೆಯನ್ನು ಸ್ಪರ್ಶಿಸುತ್ತಿತ್ತು. ಬಳಿಕ ಅದನ್ನು ಇತರ ಚಿಂಪಾಂಜಿಗಳ ಬಳಿ ತೆಗೆದುಕೊಂಡು ಹೋಯಿತು. ಮಾರನೆಯ ದಿನ ಮೃತದೇಹವನ್ನು ಒಪ್ಪಿಸಿತು. ಇದರ ಈ ವರ್ತನೆ ಮಾನವರ ಭಾವನೆಗಳನ್ನೇ ಹೊರಹೊಮ್ಮಿಸುತ್ತಿತ್ತು ಎಂದು ಸಂಶೋಧಕರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry