ಮೃತರ ಸಂಖ್ಯೆ 15ಕ್ಕೆ ಏರಿಕೆ: ಗುತ್ತಿಗೆದಾರನಿಗೆ ಶೋಧ

7

ಮೃತರ ಸಂಖ್ಯೆ 15ಕ್ಕೆ ಏರಿಕೆ: ಗುತ್ತಿಗೆದಾರನಿಗೆ ಶೋಧ

Published:
Updated:

ಪಣಜಿ(ಪಿಟಿಐ): ಇಲ್ಲಿಗೆ ಸಮೀಪದ ಕಾಣಕೋಣ್‌ ಪಟ್ಟಣದಲ್ಲಿ ಶನಿವಾರ ಕುಸಿದು ಬಿದ್ದ ಐದು ಮಹಡಿಯ ನಿರ್ಮಾಣಹಂತದ  ವಸತಿಗೃಹದ ಅವಶೇಷಗಳ ಅಡಿ ಸಿಲುಕಿ ಮೃತಪಟ್ಟವರ ಸಂಖ್ಯೆ 15ಕ್ಕೆ ಏರಿದೆ.ಇನ್ನೂ 20 ಜನರು ಅವಶೇಷಗಳ ಅಡಿ ಸಿಲುಕಿರುವ ಸಾಧ್ಯತೆ ಇದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ಹೇಳಿದ್ದಾರೆ.    ತಲೆ ಮರೆಸಿಕೊಂಡಿರುವ ಕಟ್ಟಡದ ಮಾಲೀಕ ವಿಶ್ವಾಸ್‌ ದೇಸಾಯಿ ಹಾಗೂ ಗುತ್ತಿಗೆದಾರ ಜೈದೀಪ್‌ ಸೆಹಗಲ್‌ ಅವರಿಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಈ ಇಬ್ಬರ ವಿರುದ್ಧ ಶನಿವಾರವೇ ಎಫ್‌ಐಆರ್‌ ದಾಖಲಾಗಿದೆ.ಮೃತರಿಗೆ ಪರಿಹಾರ ಹಣವನ್ನು ಸೋಮವಾರ ಘೋಷಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಮನೋಹರ್‌ ಪರಿಕ್ಕರ್‌ ಹೇಳಿದ್ದಾರೆ.  ಕುಸಿದ ಕಟ್ಟಡದ ಅವಶೇಷಗಳ ಅಡಿ  ಸಿಲುಕಿರುವ ಜನರಿಗೆ ಯಾವುದೇ ತೊಂದರೆಯಾಗದಂತೆ  ಕಾರ್ಯಾಚರಣೆ  ನಡೆಸುವುದು ಅಗ್ನಿಶಾಮಕದಳದ ಅಧಿಕಾರಿಗಳಿಗೆ  ಸವಾಲಾಗಿದೆ. ಈ ಕಟ್ಟಡವನ್ನು ನವಿ ಮುಂಬೈ ಮೂಲದ ಭಾರತ್‌ ರಿಯಲೇಟರ್ಸ್‌ ಹಾಗೂ ಡೆವಲಪರ್ಸ್‌ ನಿರ್ಮಿಸುತಿತ್ತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry