ಮೆಗಾಸಿಟಿ: ಯೋಗೇಶ್ವರ್ ವಿರುದ್ಧ ಮೊಕದ್ದಮೆ

7

ಮೆಗಾಸಿಟಿ: ಯೋಗೇಶ್ವರ್ ವಿರುದ್ಧ ಮೊಕದ್ದಮೆ

Published:
Updated:

ಬೆಂಗಳೂರು: ಮೆಗಾಸಿಟಿ (ಬೆಂಗಳೂರು) ಡೆವಲಪರ್ಸ್ ಅಂಡ್ ಬಿಲ್ಡರ್ಸ್‌ ಲಿಮಿಟೆಡ್‌ನ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಸಚಿವ ಸಿ.ಪಿ.ಯೋಗೇಶ್ವರ್ ಹಾಗೂ ಅವರ ಕುಟುಂಬ ಸದಸ್ಯರು ಸೇರಿದಂತೆ ಎಂಟು ಜನರ ವಿರುದ್ಧ ಕೇಂದ್ರ ಕಂಪೆನಿ ವ್ಯವಹಾರಗಳ ಸಚಿವಾಲಯದ ಗಂಭೀರ ವಂಚನೆ ಪ್ರಕರಣಗಳ ತನಿಖಾ ಸಂಸ್ಥೆಯು (ಎಸ್‌ಎಫ್‌ಐಓ) ನಗರದ ಎಂಟನೇ ಎಸಿಎಂಎಂ ನ್ಯಾಯಾಲಯದಲ್ಲಿ ಗುರುವಾರ ಒಟ್ಟು 14 ಮೊಕದ್ದಮೆಗಳನ್ನು ದಾಖಲಿಸಿದೆ.

ಯೋಗೇಶ್ವರ್ (ಎಂಡಿಬಿಎಲ್‌ನ ವ್ಯವಸ್ಥಾಪಕ ನಿರ್ದೇಶಕ), ಅವರ ಪತ್ನಿ ಎನ್. ಮಂಜುಕುಮಾರಿ, ಸಹೋದರ ಸಿ.ಪಿ.ಗಂಗಾಧರೇಶ್ವರ್ (ಕಾರ್ಯನಿರ್ವಾಹಕ ನಿರ್ದೇಶಕ), ಬಾಮೈದ ಪಿ.ಮಹದೇವಯ್ಯ (ನಿರ್ದೇಶಕ), ಎಚ್.ಪಿ.ರಮೇಶ್ (ಕಾರ್ಯನಿರ್ವಾಹಕೇತರ ನಿರ್ದೇಶಕ), ಸಾಂಬಶಿವರಾವ್, ಅರುಣ್ ಚರಂತಿಮಠ್ (ಅಧ್ಯಕ್ಷ) ಮತ್ತು ಅವರ ಪತ್ನಿ ಸುಜಾತಾ ಚರಂತಿಮಠ್ ವಿರುದ್ಧ ಮೊಕದ್ದಮೆಗಳು ದಾಖಲಾಗಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry