ಮೆಚ್ಚುಗೆ ಗಳಿಸಿದ ವಾಲಿಬಾಲ್ ಟೂರ್ನಿ

7

ಮೆಚ್ಚುಗೆ ಗಳಿಸಿದ ವಾಲಿಬಾಲ್ ಟೂರ್ನಿ

Published:
Updated:

ಶಿಕಾರಿಪುರ: ಪಟ್ಟಣದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಆಹ್ವಾನಿತ ಹೊನಲು ಬೆಳಕಿನ ವಾಲಿಬಾಲ್ ಟೂರ್ನಿಯ ಎರಡನೇ ದಿನವಾದ ಭಾನುವಾರ ನಡೆದ ಪಂದ್ಯಗಳು  ಪ್ರೇಕ್ಷಕರ ಭಾರೀ ಮೆಚ್ಚುಗೆಗೆ ಪಾತ್ರವಾದವು.ಬೆಳಿಗ್ಗೆ 9 ಗಂಟೆಯಿಂದ ಪ್ರಾರಂಭವಾದ ಪಂದ್ಯಾವಳಿಯಲ್ಲಿ ಪುರುಷರ ವಿಭಾಗದಲ್ಲಿ ಜಿಂದಾಲ್, ಶಿವಮೊಗ್ಗ, ಕರ್ನಾಟಕ ಯೂತ್ಸ್, ಆರ‌್ಮಿ ಸರ್ವೀಸ್ ಕೋರ್, ಮಹಿಳೆಯರ ವಿಭಾಗದಲ್ಲಿ ಕರ್ನಾಟಕ ಸ್ಟೇಟ್ ಪೊಲೀಸ್, ಕರ್ನಾಟಕ ಯೂತ್ ಹಾಸ್ಟೆಲ್ ತಂಡಗಳ ನಡುವೆ ಪಂದ್ಯಗಳು ನಡೆದವು.ಮಧ್ಯಾಹ್ನದ ಪಂದ್ಯಗಳಿಗೆ ಬಿಸಿಲಿನ ಕಾರಣ ಪ್ರೇಕ್ಷಕರ ಕೊರತೆ ಎದ್ದು ಕಾಣುತ್ತಿದ್ದರೂ ಸಂಜೆ ಯಾಗುತ್ತಿದ್ದಂತೆ ಕ್ರೀಡಾಂಗಣದ ತುಂಬ ಪ್ರೇಕ್ಷಕರು ಕಿಕ್ಕಿರಿದು ಬಿರುಸಿನ ಪಂದ್ಯಾವಳಿ ವೀಕ್ಷಿಸಿದರು.ಸೂಪರ್ 6 ಹಂತದ ಪಂದ್ಯಾವಳಿಯಲ್ಲಿ ಪುರುಷರ ತಂಡ ಆರ‌್ಮಿ ಸರ್ವೀಸ್ ಕೋರ್, ಶಿವಮೊಗ್ಗ ಜಯಗಳಿಸಿದವು. ಮಹಿಳೆಯರ ತಂಡದಲ್ಲಿ ಕರ್ನಾಟಕ ಸ್ಟೇಟ್ ಪೊಲೀಸ್ ತಂಡ ಜಯಗಳಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry