ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಕತ್ತಲು!

7

ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಕತ್ತಲು!

Published:
Updated:

ಬೃಹತ್ ಬೆಂಗಳೂರು ಮಹಾನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಸಾಕಷ್ಟು ವಿದ್ಯುದ್ದೀಪಗಳು ಇಲ್ಲದೆ, ಕತ್ತಲಲ್ಲಿ ಪ್ರಯಾಣಿಕರು ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಲು ತಡಕಾಡ ಬೇಕಾಗುತ್ತದೆ. ಸದಾ ಪ್ರಯಾಣಿಕರಿಂದ ತುಂಬಿ ತುಳುಕುವ ಬಸ್ ನಿಲ್ದಾಣದಲ್ಲಿ ರಾತ್ರಿಯ ವೇಳೆಯಲ್ಲಿ ಅತಿ ಪ್ರಕಾಶಮಾನವಾದ ವಿದ್ಯುತ್ ದೀಪಗಳನ್ನು ಅಳವಡಿಸಬೇಕು.ರೈಲು ನಿಲ್ದಾಣದಲ್ಲೂ ಸಮಸ್ಯೆ: ಬೆಂಗಳೂರು ಸಿಟಿ ರೈಲು ನಿಲ್ದಾಣದಲ್ಲಿ ಕಾಲಕಾಲಕ್ಕೆ ಪ್ರಯಾಣಿಕರಿಗೆ ಧ್ವನಿವರ್ಧಕದ ಮೂಲಕ ರೈಲುಗಳ ಸಂಚಾರದ ಬಗ್ಗೆ ತಿಳಿಸುವ ಮಾಹಿತಿ ಸರಿಯಾಗಿ ಸ್ಪಷ್ಟವಾಗಿ ಉದ್ಘೋಷಿಸುವಂತೆ ಸಂಬಂಧಿಸಿದವರಿಗೆ ತಿಳಿಸಬೇಕಾಗಿದೆ. ಈಗ ನೀಡುವ ಮಾಹಿತಿ ಸರಿಯಾಗಿ ಅರ್ಥವಾಗುವಂತೆ ಬರುತ್ತಿಲ್ಲ. ಈ ಅವ್ಯವಸ್ಥೆಗಳನ್ನು ಸರಿಪಡಿಸಲಿ ಎಂದು ಈ ಮೂಲಕ ವಿನಂತಿಸುತ್ತೇನೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry