ಭಾನುವಾರ, ಮೇ 29, 2022
23 °C

ಮೆಟ್ರೊಗೆ ಏರ್‌ಟೆಲ್ ರೀಚಾರ್ಜ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಂದಿನಿಂದ ಮೆಟ್ರೊ ರೈಲು ಸಂಚಾರ ಆರಂಭ. ಏರ್‌ಟೆಲ್ ಮೊಬೈಲ್ ಈ ಹಿನ್ನೆಲೆಯಲ್ಲಿ ಮೆಟ್ರೊ ಟಿಕೆಟ್ ರಿಚಾರ್ಜ್ ಸೌಕರ್ಯ ಜಾರಿಗೆ ತಂದಿದೆ. ಅದು ನಗರದಲ್ಲಿ ಇಂಥ ಸೇವೆ ಪ್ರಾರಂಭಿಸಿದ ಮೊದಲ ಟೆಲಿಕಾಂ ಕಂಪೆನಿ.ಬೆಂಗಳೂರು ಮೆಟ್ರೊ ರೈಲು ನಿಗಮ ಮೆಟ್ರೊ ಸ್ಮಾರ್ಟ್ ಕಾರ್ಡ್ ಟಾಪ್ ಅಪ್ ವಿತರಿಸುವ ಗುತ್ತಿಗೆಯನ್ನು ಏರ್‌ಟೆಲ್‌ಗೆ ನೀಡಿದೆ. ಹೀಗಾಗಿ ಮೊಬೈಲ್ ಬಳಕೆದಾರರು ತಮ್ಮ ಪ್ರೀ ಪೇಯ್ಡ ಮೊಬೈಲ್ ಖಾತೆಯನ್ನು ರೀಚಾರ್ಜ್ ಮಾಡಿಸಿದಂತೆಯೇ ಇದನ್ನು ರೀಚಾರ್ಜ್ ಮಾಡಿಸಿಕೊಳ್ಳಬಹುದು.ರಾಜ್ಯದ ವಿವಿಧೆಡೆಯ 1 ಲಕ್ಷ  ಮತ್ತು ಬೆಂಗಳೂರಿನ 17,000ಕ್ಕೂ ಹೆಚ್ಚು ಏರ್‌ಟೆಲ್ ಮಳಿಗೆಗಳಲ್ಲಿ ಈ ಸೌಲಭ್ಯ ಲಭ್ಯ. ಇದಕ್ಕಾಗಿ ಬೆಂಗಳೂರಿನ ಮೆಟ್ರೊ ಬಳಕೆದಾರರು ಸಿಎಸ್ಸಿ ಕಾರ್ಡ್ ಖರೀದಿಸಬೇಕು. ನಂತರ 50 ರೂ ಮತ್ತು ಮೇಲ್ಪಟ್ಟು ಮೂಲಕ ರೀಚಾರ್ಜ್ ಮಾಡಿಸಿಕೊಂಡು ರೈಲಿನಲ್ಲಿ ಸಂಚರಿಸಬಹುದು.ಇದರಿಂದ  ಸಮಯ ಮತ್ತು ಶ್ರಮದ ಉಳಿತಾಯ, ಸರದಿಯಲ್ಲಿ ನಿಲ್ಲುವ ಅಗತ್ಯವಿಲ್ಲ, ಮನೆಯ ಸಮೀಪದ ಏರ್‌ಟೆಲ್ ರೀಟೇಲ್ ಟಚ್ ಪಾಯಿಂಟ್‌ಗಳಲ್ಲಿ ರೀಚಾರ್ಜ್ ಮಾಡಿಸಿಕೊಳ್ಳಬಹುದು, ಏರ್‌ಟೆಲ್ ಮಾತ್ರವಲ್ಲದೆ ಇತರ ಮೊಬೈಲ್ ಬಳಕೆದಾರರು ಇದರ ಅನುಕೂಲ ಪಡೆಯಬಹುದು ಎನ್ನುತ್ತಾರೆ ಏರ್‌ಟೆಲ್ ಕರ್ನಾಟಕ ವಲಯ ಸಿಇಒ ರೋಹಿತ್ ಮಲೋತ್ರಾ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.