ಭಾನುವಾರ, ಜೂನ್ 20, 2021
20 °C

ಮೆಟ್ರೊ ದರ ಪರಿಷ್ಕರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಂಪಿಗೆ ರಸ್ತೆಯಿಂದ ಪೀಣ್ಯ­ವರೆಗೆ ಶುಕ್ರವಾರವಷ್ಟೇ ಸಂಚಾರ ಸೇವೆ­ಯನ್ನು ಆರಂಭಿಸಿ ಖುಷಿ ಮೂಡಿಸಿದ್ದ ಬೆಂಗ­ಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌), ಶನಿವಾರ ಪ್ರಯಾಣ ದರ ಏರಿಸುವ ಮೂಲಕ ನಗರದ ಜನರಿಗೆ ಶಾಕ್‌ ನೀಡಿದೆ.ಎಂ.ಜಿ. ರಸ್ತೆಯಿಂದ ಬೈಯಪ್ಪನ­ಹಳ್ಳಿ­ವರೆಗಿನ ಪ್ರಯಾಣ ದರವನ್ನು ₨ 2ರಷ್ಟು ಹೆಚ್ಚಿಸ­ಲಾಗಿದೆ. ಈ ಎರಡೂ ನಿಲ್ದಾಣಗಳ ಮಧ್ಯೆ ಇದುವರೆಗೆ ₨ 15 ದರ ಇದ್ದರೆ, ಶನಿವಾರ­ದಿಂದ ಅದು ₨ 17ಕ್ಕೆ ಏರಿದೆ. ಯಾವುದೇ ಮುನ್ಸೂಚನೆ ನೀಡದೆ ಮಾಡ­ಲಾಗಿರುವ ಈ ಪ್ರಯಾಣ ದರ ಪರಿಷ್ಕರಣೆ­ಯಿಂದ ನಿತ್ಯದ ಪ್ರಯಾಣಿಕರು ಗೊಂದಲಕ್ಕೆ ಈಡಾಗಿದ್ದರು.ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ ಸಿಂಗ್‌ ಖರೋಲಾ ಅವರನ್ನು ಸಂಪರ್ಕಿಸಿದಾಗ, ‘ತುಂಬಾ ಕಡಿಮೆ ಪ್ರಮಾಣದಲ್ಲಿ ದರ ಪರಿಷ್ಕರಣೆ ಮಾಡಲಾಗಿದ್ದು, ಪ್ರಯಾಣಿಕರಿಗೆ ಇದರಿಂದ ಹೊರೆ ಆಗುವುದಿಲ್ಲ’ ಎಂದು ಹೇಳಿದರು. ‘ರೈಲು ಸಂಚಾರ ನಿರ್ವಹಣಾ ವೆಚ್ಚ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪ್ರಯಾಣ ದರ ಹೆಚ್ಚಳ ಅನಿವಾರ್ಯವಾಗಿದೆ’ ಎಂದು ತಿಳಿಸಿದರು.ಈ ಮಾರ್ಗದಲ್ಲಿ ವಾರದ ದಿನಗಳಲ್ಲಿ ಪ್ರತಿದಿನ 15-–16 ಸಾವಿರ ಪ್ರಯಾಣಿಕರ ಸಂಚಾರವಿದ್ದು, ಅಂದಾಜು ₨ 1.70 ಲಕ್ಷ  ಆದಾಯ ಬರುತ್ತಿದೆ. ಅದೇ ರೀತಿ ವಾರಾಂತ್ಯ ದಿನಗಳಲ್ಲಿ 20-–21 ಸಾವಿರ ಮಂದಿ ಸಂಚರಿಸುತ್ತಿದ್ದು, ಸುಮಾರು ₨ 2.20 ಲಕ್ಷ ಆದಾಯ ಸಂಗ್ರಹವಾಗುತ್ತಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.