ಮೆಟ್ರೊ ನಿಲ್ದಾಣಕ್ಕೆ ಮುತ್ತಿಗೆ : ಬಂಧನ

7

ಮೆಟ್ರೊ ನಿಲ್ದಾಣಕ್ಕೆ ಮುತ್ತಿಗೆ : ಬಂಧನ

Published:
Updated:

ಬೆಂಗಳೂರು: ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ಮೆಟ್ರೊ ನಿಲ್ದಾಣಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಕರ್ನಾಟಕ ರಕ್ಷಣಾ ವೇದಿಕೆಯ 65 ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.ಬಂದ್ ಬೆಂಬಲಿಸಿ ಮೆಟ್ರೊ ರೈಲು ಸಂಚಾರ ನಿಲ್ಲಿಸಬೇಕೆಂದು ಕಾರ್ಯಕರ್ತರು ಆಗ್ರಹಿಸಿದರು. ಈ ವೇಳೆ ಅವರನ್ನು ಬಂಧಿಸಿದ ಪೊಲೀಸರು, ಕೋರಮಂಗಲದ ಪರೇಡ್ ಮೈದಾನಕ್ಕೆ ಕರೆದೊಯ್ದು ನಂತರ ಬಿಡುಗಡೆ ಮಾಡಿದರು.ಎಟಿಎಂ ಘಟಕಗಳು ಸ್ಥಗಿತ: ಕರ್ನಾಟಕ ಬಂದ್‌ನ ಬಿಸಿ ಎಟಿಎಂ ಬಳಕೆದಾರರ ಮೇಲೂ ಆಯಿತು.ಬಂದ್‌ನಿಂದಾಗಿ ಶನಿವಾರ ನಗರದ ಬಹುತೇಕ ಎಟಿಎಂ ಘಟಕಗಳು ಮುಚ್ಚಿದ್ದವು. ನಗರದ ಕೆಲವು ಕಡೆಗಳಲ್ಲಿ ಬೆಳಿಗ್ಗೆ 10ಗಂಟೆಯವರೆಗೆ ಎಟಿಎಂ ಘಟಕಗಳು ತೆರೆದಿದ್ದು, ಮಧ್ಯಾಹ್ನದ ವೇಳೆಗೆ ಸ್ಥಗಿತಗೊಂಡಿದ್ದವು. ಕೆಲವು ಬ್ಯಾಂಕ್‌ಗಳ ಬಳಿಯ ಎಟಿಎಂ ಘಟಕಗಳು ಭದ್ರತಾ ಸಿಬ್ಬಂದಿಯ ರಕ್ಷಣೆಯಲ್ಲಿ ಎಂದಿನಂತೆ ಕಾರ್ಯನಿರ್ವಹಿಸಿದವು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry