ಭಾನುವಾರ, ಏಪ್ರಿಲ್ 18, 2021
24 °C

ಮೆಟ್ರೊ ನಿಲ್ದಾಣಗಳಲ್ಲಿ ಶೀಘ್ರದಲ್ಲಿ ರೆಸ್ಟೋರೆಂಟ್ ಕಾರ್ಯಾರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ನಮ್ಮ ಮೆಟ್ರೊ~ದ ನಿಲ್ದಾಣಗಳಲ್ಲಿ ಔಷಧದ ಅಂಗಡಿ, ಲಾಂಡ್ರಿ, ಸಲೂನ್, ಟೀ ಕೆಫೆ, ತ್ವರಿತ ಸೇವೆ ಒದಗಿಸುವ ರೆಸ್ಟೋರೆಂಟ್, ಪುಸ್ತಕದಂಗಡಿ ಮೊದಲಾದ ಚಿಲ್ಲರೆ ಮಾರಾಟ ಮಳಿಗೆಗಳು ಸದ್ಯದಲ್ಲೇ ಕಾರ್ಯಾರಂಭ ಮಾಡಲಿವೆ.ಬೈಯಪ್ಪನಹಳ್ಳಿಯಿಂದ ಎಂ.ಜಿ.ರಸ್ತೆವರೆಗಿನ ರೀಚ್- 1ರ ಮಾರ್ಗದ ಐದು ನಿಲ್ದಾಣಗಳಲ್ಲಿ ವಿವಿಧ ಬಗೆಯ 36 ಮಾರಾಟ ಮಳಿಗೆಗಳಿಗೆ ಲೈಸನ್ಸ್ ನೀಡಲು ಬೆಂಗಳೂರು ಮೆಟ್ರೊ ರೈಲು ನಿಗಮವು ಉದ್ದೇಶಿಸಿದ್ದು, ಅದಕ್ಕಾಗಿ ಟೆಂಡರ್ ಕರೆದಿದೆ.ಮಳಿಗೆಗಳಲ್ಲಿ ತಿಂಡಿ ತಿನಿಸುಗಳನ್ನು ಖರೀದಿಸಲು ಅವಕಾಶ ಇದೆಯಾದರೂ ರೈಲಿನೊಳಗೆ ಅವನ್ನು ತಿನ್ನುವಂತಿಲ್ಲ. ಈಗಾಗಲೇ ಎರಡು ನಿಲ್ದಾಣಗಳಲ್ಲಿ ಕಾಫಿ ಶಾಪ್‌ಗಳ ಪ್ರಾರಂಭಕ್ಕೆ ಕರೆದಿದ್ದ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಾಫಿ ಶಾಪ್‌ಗಳು ಮುಂದಿನ ತಿಂಗಳು ಪ್ರಾರಂಭವಾಗುವ ಸಾಧ್ಯತೆ ಇದೆ.ಲೈಸನ್ಸ್ ನೀಡಲು ಉದ್ದೇಶಿಸಿರುವ ಮಳಿಗೆಗಳ ವಿವರ ಇಲ್ಲಿದೆ...


ಮಾರಾಟ ಯಂತ್ರ: ನಿಗದಿತ ಮೊತ್ತದ ನಾಣ್ಯ ಹಾಕಿದರೆ ತಿಂಡಿ ತಿನಿಸು, ತಂಪು ಪಾನೀಯ, ನಿಯತಕಾಲಿಕಗಳನ್ನು ನೀಡುವ ಯಂತ್ರಗಳನ್ನು ಒಳಗೊಂಡ ಮಳಿಗೆ.ಹಣ ವಿನಿಮಯ: ವಿದೇಶಿ ಕರೆನ್ಸಿಗಳ ವಿನಿಮಯ ಮತ್ತಿತರ ಸೇವೆ ಒದಗಿಸುವ ಮಳಿಗೆ.ಔಷಧದಂಗಡಿ: ದಿನದ 24 ಗಂಟೆಯೂ ತೆರೆದಿರುವ ಔಷಧಿಗಳ ಮಾರಾಟ ಮಳಿಗೆ.ಲಾಂಡ್ರಿ: ಉಡುಪುಗಳ ಇಸ್ತ್ರಿ, ಡ್ರೈ ಕ್ಲೀನಿಂಗ್ ಮಾಡಿಕೊಡುವ ಲಾಂಡ್ರಿ ಶಾಪ್.ಸಲೂನ್: ಕ್ಷೌರ, ಕೇಶ ಸಿಂಗಾರ, ಮುಖ ಅಲಂಕಾರ, ಪಾದ ಮತ್ತು ಶಿರ ಮರ್ದನ (ಮಸಾಜ್) ಸೇವೆಗಳನ್ನು ಒದಗಿಸುವ ಮಳಿಗೆ.ರಿಪೇರಿ ಮಳಿಗೆ: ಮೊಬೈಲು, ಗಡಿಯಾರ, ಶೂ, ಬ್ಯಾಗು, ಛತ್ರಿ, ಬೀಗದ ಕೀ ಮೊದಲಾದವನ್ನು ರಿಪೇರಿ ಮಾಡಿಕೊಡುವ ಅಂಗಡಿ.ಹೂ ಮಳಿಗೆ: ಅಲಂಕಾರಿಕ ಹೂವುಗಳು ಮತ್ತು ಪುಷ್ಪಗುಚ್ಛಗಳನ್ನು ಮಾರುವ ಮಳಿಗೆಸಿದ್ಧಪಡಿಸಿದ ಆಹಾರ ಮಳಿಗೆ: ಬೇಕರಿ ಪದಾರ್ಥಗಳು, ಉಪಾಹಾರಗಳು, ಸಿಹಿ ತಿನಿಸುಗಳು, ಲಘು ಪಾನೀಯಗಳನ್ನು ಮಾರುವ ಮಳಿಗೆ. ಇಲ್ಲಿ ಯಾವುದೇ ತಿನಿಸುಗಳನ್ನು ಪಾರ್ಸೆಲ್ ರೂಪದಲ್ಲಿಯೇ ಮಾರಾಟ ಮಾಡಬೇಕು.ಪುಸ್ತಕ- ಉಡುಗೊರೆ- ಆಟಿಕೆ: ಪುಸ್ತಕಗಳು, ಶುಭಾಶಯ ಪತ್ರಗಳು, ಸಂಗೀತ, ನಿಯತಕಾಲಿಕಗಳು, ಉಡುಗೊರೆಗಳು, ಆಟಿಕೆಗಳು ಮೊದಲಾದವನ್ನು ಮಾರಾಟ ಮಾಡುವ ಮಳಿಗೆ.ಟೀ ಕೆಫೆ: ಟೀ ಮತ್ತಿತರ ಬಿಸಿ ಪಾನೀಯಗಳು, ತಿನಿಸುಗಳನ್ನು ಮಾರುವ ಮಳಿಗೆ.

ಬಿಡ್‌ಗಳನ್ನು ಸೆಪ್ಟೆಂಬರ್ 14ರ ಮಧ್ಯಾಹ್ನ 1ರ ಒಳಗೆ ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.