ಮೆಟ್ರೊ ನೋಡಲು ಹೆಚ್ಚುವರಿ ಬಸ್

7

ಮೆಟ್ರೊ ನೋಡಲು ಹೆಚ್ಚುವರಿ ಬಸ್

Published:
Updated:

ಬೆಂಗಳೂರು: ಇಂದಿನಿಂದ ಮೆಟ್ರೊ ರೈಲು ಸಂಚಾರ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಬಿಎಂಟಿಸಿ ಎಂ.ಜಿ.ರಸ್ತೆಯ ಮಹಾತ್ಮಗಾಂಧಿ ಮೆಟ್ರೊ ನಿಲ್ದಾಣಕ್ಕೆ ಹೆಚ್ಚುವರಿ ಬಸ್‌ಗಳನ್ನು ಅಣಿಗೊಳಿಸಿದೆ.

ಕೆಂಪೇಗೌಡ ಬಸ್ ನಿಲ್ದಾಣದಿಂದ ಮಹಾರಾಣಿ ಕಾಲೇಜು, ಕಾರ್ಪೊರೇಷನ್, ಮ್ಯೂಸಿಯಂ ರಸ್ತೆ ಮಾರ್ಗವಾಗಿ ಎಂ.ಜಿ.ರಸ್ತೆ ನಿಲ್ದಾಣಕ್ಕೆ ಮಾರ್ಗಸಂಖ್ಯೆ 129ಎ ನಲ್ಲಿ ಪ್ರಯಾಣಿಸಬಹುದಾಗಿದೆ. ಪ್ರತಿ 15 ನಿಮಿಷ ಅಂತರದಲ್ಲಿ ಹೆಚ್ಚುವರಿ ಬಸ್ಸುಗಳು ಸಂಚರಿಸಲಿವೆ.

ಅಲ್ಲದೆ ಸಾರ್ವತ್ರಿಕ ರಜಾ ದಿನ ಹಾಗೂ ವಾರಾಂತ್ಯ ದಿನಗಳಲ್ಲಿ ಚಂದ್ರಾ ಬಡಾವಣೆ, ವಿಜಯನಗರ, ಯಶವಂತಪುರ ಹಾಗೂ ಮಲ್ಲೇಶ್ವರದಿಂದ ಮೆಟ್ರೊ ನಿಲ್ದಾಣಕ್ಕೆ ವಿಶೇಷ ಬಸ್ ಸೌಲಭ್ಯ ಒದಗಿಸಲಾಗುವುದು ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry