ಮೆಟ್ರೊ: ಪೂಂಜ್ ಲಾಯ್ಡ ಗಮನಾರ್ಹ ಕೊಡುಗೆ

7

ಮೆಟ್ರೊ: ಪೂಂಜ್ ಲಾಯ್ಡ ಗಮನಾರ್ಹ ಕೊಡುಗೆ

Published:
Updated:

ನವದೆಹಲಿ: ಗುರುವಾರ ಬೆಂಗಳೂರಿನಲ್ಲಿ `ನಮ್ಮ ಮೆಟ್ರೊ~ ರೈಲಿನ ಮೊದಲ ಹಂತ ಕಾರ್ಯಾರಂಭ ಮಾಡುವಲ್ಲಿ ಎಂಜಿನಿಯರಿಂಗ್ ಮತ್ತು ನಿರ್ಮಾಣ ಸಂಸ್ಥೆ ಪೂಂಜ್ ಲಾಯ್ಡ ಲಿಮಿಟೆಡ್ ಕೂಡ ಪ್ರಮುಖ ಪಾತ್ರ ನಿರ್ವಹಿಸಿದೆ.ಮಹಾತ್ಮ ಗಾಂಧಿ ರಸ್ತೆ ಮತ್ತು ಟ್ರಿನಿಟಿ ವೃತ್ತದ ನಿಲ್ದಾಣಗಳ ನಿರ್ಮಾಣವನ್ನು ನಿಗದಿತ ಕಾಲಮಿತಿ ಒಳಗೆ ಪೂರ್ಣಗೊಳಿಸಲು ಸಂಸ್ಥೆಯು ಮೊದಲ ಆದ್ಯತೆ ನೀಡಿತ್ತು. ಈ ಎರಡೂ ನಿಲ್ದಾಣಗಳು ನಗರದ ಹೊಸ ಆಕರ್ಷಕ ತಾಣಗಳಾಗಿ ಖಂಡಿತವಾಗಿಯೂ ಗಮನ ಸೆಳೆಯಲಿವೆ.  ಈ ಯಶಸ್ಸಿನ ಕಾರಣಕ್ಕೇನೆ ಮೈಸೂರು ರಸ್ತೆ ಟರ್ಮಿನಲ್, ದೀಪಾಂಜಲಿ ನಗರ, ಮಾಗಡಿ ರಸ್ತೆ, ರಾಜಾಜಿನಗರ, ಕುವೆಂಪು ಮತ್ತು ಮಲ್ಲೇಶ್ವರಂ ರೈಲು ನಿಲ್ದಾಣಗಳ ಗುತ್ತಿಗೆಯನ್ನೂ ನಮಗೆ ನೀಡಲಾಗಿದೆ ಎಂದು ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಮೂಲಸೌಕರ್ಯ) ಎಸ್. ಎಸ್. ರಾಜು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry