ಮೆಟ್ರೊ ಸುರಂಗ ನಿರ್ಮಾಣ ಪೂರ್ಣ

7
ವಿಧಾನಸೌಧ– ಮಿನ್ಸ್ಕ್‌ಚೌಕ

ಮೆಟ್ರೊ ಸುರಂಗ ನಿರ್ಮಾಣ ಪೂರ್ಣ

Published:
Updated:
ಮೆಟ್ರೊ ಸುರಂಗ ನಿರ್ಮಾಣ ಪೂರ್ಣ

ಬೆಂಗಳೂರು: ವಿಧಾನಸೌಧದ ಮುಂಭಾಗದಿಂದ ಮಿನ್ಸ್ಕ್‌ಚೌಕದವರೆಗೆ ನೆಲದಡಿಯಲ್ಲಿ  ಎರಡನೇ ಸುರಂಗ ಮಾರ್ಗದ ನಿರ್ಮಾಣ ಕಾರ್ಯವು ಬುಧವಾರ  ಬೆಳಿಗ್ಗೆ 11.45ಕ್ಕೆ ಪೂರ್ಣಗೊಂಡಿತು.ಇದರೊಂದಿಗೆ ಮೆಜೆಸ್ಟಿಕ್‌ನಿಂದ ಚಿನ್ನಸ್ವಾಮಿ ಕ್ರೀಡಾಂಗಣದವರೆಗೆ ಜೋಡಿ ಸುರಂಗ ನಿರ್ಮಾಣ ಕಾರ್ಯ ಪೂರ್ಣಗೊಂಡಂತಾಗಿದೆ.ಮಾಗಡಿ ರಸ್ತೆ ಪ್ರವೇಶ ದ್ವಾರ, ಮೆಜೆಸ್ಟಿಕ್‌, ಸೆಂಟ್ರಲ್‌ ಕಾಲೇಜು, ವಿಧಾನಸೌಧ, ಮಿನ್ಸ್ಕ್‌‌ಚೌಕ– ಈ ಐದು   ಕಡೆ ನೆಲದಡಿಯಲ್ಲಿ ನಿಲ್ದಾಣಗಳು ನಿರ್ಮಾಣದ ವಿವಿಧ ಹಂತದಲ್ಲಿವೆ. ಈ ನಿಲ್ದಾಣಗಳ ನಡುವೆ ಜೋಡಿ ಸುರಂಗ ಮಾರ್ಗವನ್ನು ‘ಹೆಲೆನ್‌’ ಮತ್ತು ‘ಮಾರ್ಗರೀಟಾ’ ಎಂಬ ಎರಡು ದೈತ್ಯ ‘ಸುರಂಗ ಕೊರೆಯುವ ಯಂತ್ರ’ಗಳು (ಟಿಬಿಎಂ) ನಿರ್ಮಿಸಿವೆ.ಮೆಜೆಸ್ಟಿಕ್‌ನಿಂದ ಪಶ್ಚಿಮದ ಕಡೆ ನಗರ ರೈಲು ನಿಲ್ದಾಣದ ಹತ್ತು ಪ್ಲಾಟ್‌ಫಾರಂಗಳ ಕೆಳಭಾಗದಲ್ಲಿ ಮಾಗಡಿ ರಸ್ತೆ ಪ್ರವೇಶ ದ್ವಾರದೆಡೆಗೆ ಜೋಡಿ ಸುರಂಗ ಕೊರೆಯುವ ಕಾರ್ಯ ಇನ್ನಷ್ಟೇ ಪ್ರಾರಂಭವಾಗಬೇಕಿದೆ. ಈ ಭಾಗದ ಸುರಂಗವನ್ನು ಹೆಲೆನ್‌ ಮತ್ತು ಮಾರ್ಗರೀಟಾ ಯಂತ್ರಗಳೇ ನಿರ್ಮಿಸಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry