ಮಂಗಳವಾರ, ನವೆಂಬರ್ 19, 2019
23 °C

ಮೆಟ್ರೊ ಸೇತುವೆ ಕೆಳಗೆ ರಸ್ತೆ ದುರಸ್ತಿಪಡಿಸಿ

Published:
Updated:

ಹೆಚ್ಚು ವಾಹನದಟ್ಟಣೆ ಇರುವ ಮಾಗಡಿ ಮುಖ್ಯರಸ್ತೆಯಲ್ಲಿ ಮೆಟ್ರೊ ಕಾಮಗಾರಿ ಬಹುತೇಕ ಮುಗಿದಿದ್ದು, ಸೇತುವೆಯ ಕೆಳಗಿನ ರಸ್ತೆ ಸಂಪೂರ್ಣವಾಗಿ ಕಿತ್ತು ಹೋಗಿದೆ. ಇಲ್ಲಿ ಪಾದಚಾರಿ ಮಾರ್ಗವೂ ಇಲ್ಲದಂತಾಗಿದೆ. ಇನ್ನು ವಾಹನ ಸವಾರರಿಗೆ  ಸಂಚರಿಸುವುದು ದೊಡ್ಡ ಸವಾಲಾಗಿದೆ.ಕೆಂಪೇಗೌಡ ಬಸ್ ನಿಲ್ದಾಣ ಮತ್ತು ಮಾರುಕಟ್ಟೆಗೆ ಹೋಗುವ ಬಿಎಂಟಿಸಿ ಮತ್ತು ಖಾಸಗಿ ಬಸ್‌ಗಳು, ಕಾರು, ಲಾರಿ, ಆಟೋ, ದ್ವಿಚಕ್ರ ವಾಹನಗಳು ಸಂಚರಿಸಲು ಇರುವುದು ಇದೊಂದೇ ರಸ್ತೆ. ಕೆಲ ದಿನಗಳಿಂದ ಒಂದು ರಸ್ತೆಯನ್ನು ಮುಚ್ಚಿದ್ದು ಇನ್ನೊಂದು ರಸ್ತೆಯಲ್ಲಿ ದ್ವಿಮುಖ ಸಂಚಾರ ಸಾಗಿದೆ.ಟೋಲ್ ಗೇಟ್‌ನಿಂದ ಮಾಗಡಿ ರಸ್ತೆ ಮೊದಲ ತಿರುವಿನವರೆಗೂ ಸಂಪೂರ್ಣವಾಗಿ ಟಾರು ರಸ್ತೆ ಮಾಯವಾಗಿ ಹೊಂಡ ನಿರ್ಮಾಣವಾಗಿದೆ. ಮಳೆ ಬಂದರೆ ಈ ರಸ್ತೆಯಲ್ಲಿ ಸಂಚರಿಸುವುದು ಅಪಾಯಕಾರಿಯಾಗಲಿದೆ. ದಯವಿಟ್ಟು ಸಂಬಂಧಪಟ್ಟವರು ಕೂಡಲೇ ರಸ್ತೆ ದುರಸ್ತಿಗೆ ಮುಂದಾಗಬೇಕು.

 

ಪ್ರತಿಕ್ರಿಯಿಸಿ (+)