ಗುರುವಾರ , ಜನವರಿ 23, 2020
21 °C

ಮೆದುಳು ಜ್ವರ ಮುಂಜಾಗ್ರತೆಗೆ ಇಲಾಖೆ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಟ್ಕಳ: ತಾಲ್ಲೂಕಿನ ಮಾವಿನಕುರ್ವೆ ಗ್ರಾಪಂ ವ್ಯಾಪ್ತಿಯ ತಲಗೋಡು ಹಾಗೂ ಬೇಂಗ್ರೆ ಗ್ರಾಪಂ ವ್ಯಾಪ್ತಿಯ ಸಣ ಬಾವಿ ಯಲ್ಲಿ ಮಿದುಳುಜ್ವರ ಕಾಣಿಸಿಕೊಂಡ ರೋಗಿ ಗಳು ಪತ್ತೆಯಾದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ಎರಡೂ ಗ್ರಾಮಗಳ ಮನೆಮನೆಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಿದರಲ್ಲದೆ, ಮುಂಜಾಗ್ರತ ಕ್ರಮದ ಬಗ್ಗೆ ಸಲಹೆ ಸೂಚನೆ ನೀಡಿದ್ದಾರೆ.ಮಾವಿನಕುರ್ವೆ ತಲಗೋಡ್‌ನ 7 ವರ್ಷದ ದರ್ಶನ ಮಂಜುನಾಥ ನಾಯ್ಕ ಎಂಬ ಬಾಲಕ ಮಿದುಳು ಜ್ವರದಿಂದ ತೀವ್ರವಾಗಿ ಬಳಲಿ ಮಣಿಪಾಲ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತ ಚೇತರಿ ಸಿಕೊಳ್ಳುತ್ತಿದ್ದಾನೆ. ಅದೇ ರೀತಿ ಸಣ ಬಾವಿಯ ಮಂಜುನಾಥ ಮೊಗೇರ್ ಎಂಬವವರಿಗೂ ಜ್ವರ ಕಾಣಿಸಿಕೊಂಡು ಅವರೂ ಸಹ ಆಸ್ಪತ್ರೆಗೆ ದಾಖಲಾಗಿ ಚೇತರಿಸಿಕೊಳ್ಳುತ್ತಿದ್ದಾರೆ.ಅತಿಯಾದ ಜ್ವರದಿಂದ ಬಳಲಿಕೆ, ಬೆನ್ನುಮೂಳೆ ನೋವು ಹಾಗೂ ತಲೆ ನೋವು ಬರುವುದು ಈ ಜ್ವರದ ಲಕ್ಷಣ ವಾಗಿದೆ.ಕೊಳಚೆ ನೀರಿನಲ್ಲಿ ಬೆಳೆಯುವ ಕೆಲವು ಜಾತಿಯ ಸೊಳ್ಳೆಗಳಿಂದ ಮಿದುಳು ಜ್ವರ ಹರಡುತ್ತದೆ ಎಂದು ಜ್ವರದ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ನೀಡಿದ ಆರೋಗ್ಯ ಇಲಾಖೆಯ ಸಿಬ್ಬಂದಿ, ಮನೆಯ ಸುತ್ತ ಮುತ್ತಲಿನ ಪ್ರದೇಶ, ಬಚ್ಚಲು, ಚರಂಡಿಗಳಲ್ಲಿ ಕೊಳಚೆ ನೀರು ಶೇಖರಣೆ ಯಾಗದಂತೆ ಸ್ವಚ್ಚವಾಗಿಟ್ಟುಕೊಳ್ಳು ವಂತೆ ಸಲಹೆ ನೀಡಿದರು.ಸೊಳ್ಳೆಗಳ ನಿಯಂತ್ರಕ್ಕಾಗಿ ಮೆಲಾಸಿನ್ ಎಂಬ ಔಷಧಿ ಯಿಂದ ಕೆಲವೆಡೆ ಫಾಗಿಂಗ್ ಕಾರ್ಯವನ್ನೂ ಸಹ ಆರೋಗ್ಯ ಇಲಾಖೆ ಯವರು ನಡೆಸಿದರು.ಈ ಎರಡೂ ಗ್ರಾಮಗಳಲ್ಲಿ ಮಿದುಳುಜ್ವರ ಕಾಣಿಸಿ ಕೊಂಡ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆತಂಕಗೊಂಡಿದ್ದರು.

ಆದರೆ ಅರೋಗ್ಯ ಇಲಾಖೆಯವರು ಜ್ವರ ಹರಡದಂತೆ ಸೂಕ್ತ ಮುನ್ನೆಚ್ಚರಿಕೆ ಕ್ರಮಕೈಗೊಂಡು,ಜ್ವರದ ನಿಯಂತ್ರಣಕ್ಕೆ ಅಗತ್ಯ ಸಲಹೆ ಸೂಚನೆ ನೀಡಿದ್ದರಿಂದ ಸ್ವಲ್ಪಮಟ್ಟಿಗೆ ಗ್ರಾಮಸ್ಥರು ನಿರಾಳ ವಾಗಿದ್ದಾರೆ. ಜತೆಗೆ ಆರೋಗ್ಯ ಇಲಾಖೆ ಯವರ ಸೂಚನೆಗಳನ್ನೂ ಪಾಲಿಸು ತ್ತಿದ್ದಾರೆ.

ಪ್ರತಿಕ್ರಿಯಿಸಿ (+)