ಬುಧವಾರ, ಮೇ 12, 2021
23 °C

ಮೆನನ್ ಅಪಹರಣ: ಬಸ್ತಾರ್ ಪ್ರದೇಶದಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆ ಅಮಾನತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಪುರ/ ನವದೆಹಲಿ (ಪಿಟಿಐ): ಸುಕ್ಮಾ ಜಿಲ್ಲಾಧಿಕಾರಿ ಅಲೆಕ್ಸ್ ಪಾಲ್ ಮೆನನ್ ಅಪಹರಣದ ಹಿನ್ನೆಲೆಯಲ್ಲಿ ಸರ್ಕಾರವು ಛತ್ತೀಸ್ ಗಡದ ಬಸ್ತಾರ್ ಪ್ರದೇಶದಲ್ಲಿ ಎಲ್ಲ ನಕ್ಸಲ್ ವಿರೋಧಿ ಕಾರ್ಯಾಚರಣೆಗಳನ್ನು ಅಮಾನತುಗೊಳಿಸಿದೆ.ಮೆನನ್ ಅವರನ್ನು ಉಗ್ರಗಾಮಿಗಳು ಬಿಡುಗಡೆ ಮಾಡುವವರೆಗೆ ಬಸ್ತಾರ್ ಪ್ರದೇಶದಲ್ಲಿ ಮಾವೋವಾದಿಗಳ ವಿರುದ್ಧ ಯಾವುದೇ ದಾಳಿ ಕಾರ್ಯಾಚರಣೆಗಳನ್ನು ನಡೆಸದಿರುವಂತೆ ನಕ್ಸಲ್ ವಿರೋಧಿ ಕಾರ್ಯಾಚರಣೆ ನಿರತ ಭದ್ರತಾ ಪಡೆಗಳಿಗೆ ರಾಜ್ಯ ಸರ್ಕಾರ ಸೂಚನೆ ನೀಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.2006ರ ತಂಡೆ ಐಎ ಎಸ್ ಅಧಿಕಾರಿ ಅಲೆಕ್ಸ್ ಪಾಲ್ ಮೆನನ್ ಅವರ ಸುರಕ್ಷತೆ ಖಾತರಿ ಸಲುವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಮೆನನ್ ಅವರನ್ನು ಮಾವೋವಾದಿಗಳು ಸರ್ಕಾರದ ವಿಶೇಷ ಗ್ರಾಮ ಸುರಾಜ್ ಅಭಿಯಾನ್ ಅಂಗವಾಗಿ ಸಭೆ ನಡೆಸಿ ವಾಪಸಾಗುತ್ತಿದ್ದಾಗ ಮಾವೋವಾದಿಗಳು ಅಪಹರಿಸಿದ್ದಾರೆ.ಈ ಮಧ್ಯೆ, ನಕ್ಸಲ್ ಬಾಧಿತ ಪ್ರದೇಶಗಳಲ್ಲಿ ಪುನರಾವರ್ತನೆಗೊಳ್ಳುತ್ತಿರುವ ಅಪಹರಣ ಪ್ರಕರಣಗಳ ಹಿನ್ನೆಲೆಯಲ್ಲಿ ಇಂತಹ ಅಪಹರಣಗಳಿಂದ ಉದ್ಭವಿಸುವ ಬಿಕ್ಕಟ್ಟು ಎದುರಿಸಲು ಸಾಮಾನ್ಯ ಕಾರ್ಯಾಚರಣೆ ವಿಧಾನವೊಂದನ್ನು ಸಿದ್ಧ ಪಡಿಸುವಲ್ಲಿ ಎಲ್ಲಾ ರಾಜ್ಯಗಳ ಸಹಕಾರ ಪಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಯೋಜನೆ ರೂಪಿಸುತ್ತಿದೆ.ಒಡಿಶಾದಲ್ಲಿ ಬಿಜೆಡಿ ಶಾಸಕ ಹಾಗೂ ಇಟಲಿ ಪ್ರಜೆಗಳ ಅಪಹರಣ, ಅವರ ಬಿಡುಗಡೆಗಾಗಿ ಉಗ್ರಗಾಮಿಗಳು ಬಿಡುಗಡೆಗೆ ಮಾವೋವಾದಿಗಳು ಬೇಡಿಕೆ ಮುಂದಿಟ್ಟ ಹಿನ್ನೆಲೆಯಲ್ಲಿ ನಕ್ಸಲ್ ಚಟುವಟಿಕೆ ನಿಭಾಯಿಸಲು ಇಂತಹ ಸಾಮಾನ್ಯ ಕಾರ್ಯಾಚರಣೆ ವಿಧಾನವೊಂದನ್ನು ರೂಪಿಸುವುದು ಅಗತ್ಯ ಎಂದು ಕೇಂದ್ರ ಭಾವಿಸಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.