ಸೋಮವಾರ, ಮಾರ್ಚ್ 8, 2021
24 °C

ಮೆನನ್ ಅಪಹರಣ: ಮಾವೋವಾದಿ ಪರ ಸಂಧಾನಕ್ಕೆ ಪ್ರಶಾಂತ ಭೂಷಣ್ ನಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೆನನ್ ಅಪಹರಣ: ಮಾವೋವಾದಿ ಪರ ಸಂಧಾನಕ್ಕೆ ಪ್ರಶಾಂತ ಭೂಷಣ್ ನಕಾರ

ನವದೆಹಲಿ (ಪಿಟಿಐ): ಮಾವೋವಾದಿಗಳ ಪರವಾಗಿ ಸರ್ಕಾರದ ಜೊತೆ ಸಂಧಾನಕ್ಕೆ ಮಂಗಳವಾರ ನಿರಾಕರಿಸಿದ ಅಣ್ಣಾ ತಂಡದ ಸದಸ್ಯ, ಸುಪ್ರೀಂ ಕೋರ್ಟ್ ವಕೀಲ ಪ್ರಶಾಂತ ಭೂಷಣ್ ಅವರು ಅಪಹೃತ ಸುಕ್ಮಾ ಜಿಲ್ಲಾಧಿಕಾರಿ ಅಲೆಕ್ಸ್ ಪಾಲ್ ಮೆನನ್ ಅವರನ್ನು ಭೇಷರತ್ ಬಿಡುಗಡೆ ಮಾಡುವಂತೆ ಮಾವೋವಾದಿ ನಕ್ಸಲೀಯರಿಗೆ ಮನವಿ ಮಾಡಿದ್ದಾರೆ.ಮಾವೋವಾದಿಗಳ ಬೇಡಿಕೆಗಳು ನ್ಯಾಯೋಚಿತವಾಗಿದ್ದು, ಸರ್ಕಾರವು ಅವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಗಮನಹರಿಸಬೇಕು ಎಂದೂ ಭೂಷಣ್ ಹೇಳಿದ್ದಾರೆ.ಸರ್ಕಾರದ ಜೊತೆಗಿನ ಸಂಧಾನ ಮಾತುಕತೆಗಳಿಗೆ ಮೂವರು ಮಧ್ಯವರ್ತಿಗಳ ಪೈಕಿ ಒಬ್ಬ ಮಧ್ಯವರ್ತಿಯಾಗಿ ಪ್ರಶಾಂತ ಭೂಷಣ್ ಅವರ ಹೆಸರನ್ನು ಮಾವೋವಾದಿಗಳು ಪ್ರಕಟಿಸಿದ ಕೆಲವೇ ಗಂಟೆಗಳಲ್ಲಿ ~ವಿಷಯಕ್ಕೆ ಸಂಬಂಧಿಸಿದಂತೆ ನಾನು ಸಂಧಾನ ನಡೆಸುವುದಿಲ್ಲ~ ಎಂದು ಭೂಷಣ್ ಪ್ರಕಟಿಸಿದರು.~ಇಲ್ಲ, ಜಿಲ್ಲಾಧಿಕಾರಿಯನ್ನು ಭೇಷರತ್ ಬಿಡುಗಡೆ ಮಾಡುವಂತೆ ನಾನು ಮಾವೋವಾದಿಗಳಿಗೆ ಮನವಿ ಮಾಡುತ್ತಿದ್ದೇನೆ. ನಾನು ಅವರ ಬಹುತೇಕ ಬೇಡಿಕೆಗಳು ನ್ಯಾಯೋಚಿತವಾದವುಗಳು ಎಂಬುದನ್ನು ಒಪ್ಪುತ್ತೇನೆ, ಆದರೆ ಇದಕ್ಕಾಗಿ ಜಿಲ್ಲಾಧಿಕಾರಿಯನ್ನು ~ಚೌಕಾಸಿಯ ದಾಳ~ ಮಾಡಬಾರದು~ ಎಂದು ತಾವು ಸಂಧಾನಕಾರರಾಗುವಿರಾ ಎಂಬ ಪ್ರಶ್ನೆಗೆ ಉತ್ತರವಾಗಿ ಭೂಷಣ್ ಪಿಟಿಐಗೆ ತಿಳಿಸಿದರು.~ಮೆನನ್ ಒಬ್ಬ ಮುಗ್ಧ ಅಧಿಕಾರಿ. ನಕ್ಸಲೀಯರ ಮೂಲಭೂತ ಸಮಸ್ಯೆಗಳನ್ನು ನಿವಾರಿಸುವ ಬಗ್ಗೆ ಸರ್ಕಾರ ಗಂಭೀರವಾಗಿದ್ದರೆ, ಆಗ ಅವರ ಜೊತೆಗೆ ಯಾವುದೇ ಮಾತುಕತೆಗಳಲ್ಲಿ ಪಾಲ್ಗೊಳ್ಳಲು ನಾನು ಸಿದ್ಧ~ ಎಂದು ಅವರು ಹೇಳಿದರು.~ಗ್ರೀನ್ ಹಂಟ್ ಕಾರ್ಯಾಚರಣೆ ಸ್ಥಗಿತಗೊಳಿಸಬೇಕು ಮತ್ತು ಮುಗ್ಧ ಗುಡ್ಡಗಾಡು ಜನರನ್ನು ಬಿಡುಗಡೆ ಮಾಡಬೇಕು ಎಂಬ ಬೇಡಿಕೆಗಳು ಸಮರ್ಥನೀಯ. ಸರ್ಕಾರವು ಅವರು ಎದುರಿಸುತ್ತಿರುವ ಇತರ ಸಮಸ್ಯೆಗಳ ಬಗೆಗೂ ಗಮನ ಹರಿಸಬೇಕು~ ಎಂದು ಅವರು ನುಡಿದರು.ಸುಕ್ಮಾ ಜಿಲ್ಲಾಧಿಕಾರಿಯ ಬಿಡುಗಡೆಗಾಗಿ ಮಾತುಕತೆ ನಡೆಸಲು ಸಿದ್ಧ ಎಂಬುದಾಗಿ ಛತ್ತೀಸ್ ಗಡ ಸರ್ಕಾರ ಕಳೆದ ರಾತ್ರಿ ಪ್ರಕಟಿಸಿದ್ದನ್ನು ಅನುಸರಿಸಿ ಮಾವೋವಾದಿಗಳು ಮೂವರು ಮಧ್ಯವರ್ತಿಗಳ ಹೆಸರುಗಳನ್ನು ಪ್ರಕಟಿಸಿದ್ದರು. ಪ್ರಶಾಂತ್ ಭೂಷಣ್ ಜೊತೆಗೆ ರಾಷ್ಟ್ರೀಯ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಆಯೋಗದ ಮಾಜಿ ಅಧ್ಯಕ್ಷ ಬಿ.ಡಿ. ಶರ್ಮಾ ಮತ್ತು ಅಖಿಲ ಭಾರತ ಆದಿವಾಸಿ ಮಹಾಸಭಾ ಅಧ್ಯಕ್ಷ ಮನಿಶ್ ಕುಂಜಂ ಹೆಸರುಗಳನ್ನು ಅವರು ಸಂಧಾನಕಾರರಾಗಿ ಸೂಚಿಸಿದ್ದರು.ಈ ಮಧ್ಯೆ ಕುಂಜಂ ಕೂಡಾ ಮಾವೋವಾದಿಗಳ ಸೂಚನೆಯನ್ನು ತಿರಸ್ಕರಿಸಿದ್ದಾರೆ.

 

ಮೆನನ್ ಆರೋಗ್ಯ ಹದಗೆಡುತ್ತಿದೆ ಎಂಬುದಾಗಿ ಪ್ರಕಟಿಸಿರುವ ಮಾವೋವಾದಿಗಳು ಮೆನನ್ ಅವರಿಗೆ ಔಷಧ ತರುವಂತೆಯೂ ಸಂಧಾನಕಾರರನ್ನು ಕೋರಿದ್ದಾರೆ. ಮೆನನ್ ಆರೋಗ್ಯ ಹದಗೆಡುತ್ತಿರುವುದರಿಂದ ಯಾವುದೇ ವಿಳಂಬತಂತ್ರ ಹೂಡುವುದು ಬೇಡ ಎಂಬುದಾಗಿಯೂ ನಕ್ಸಲೀಯರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.