ಶನಿವಾರ, ಮೇ 28, 2022
30 °C

ಮೆರ್ಕ್ಯೂರ್‌ನಲ್ಲಿ ಕೇಕ್ ಮಿಕ್ಸಿಂಗ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋರಮಂಗಲದ ತಾರಾ ಹೋಟೆಲ್ ಗ್ರಾಂಡ್  ಮೆರ್ಕ್ಯೂರ್‌ನಲ್ಲಿ ಅಂದು ಸಂಜೆ ಸಂಭ್ರಮ, ಸಡಗರ. ಹೋಟೆಲ್‌ನಲ್ಲಿ ತಂಗಿದ್ದವರು ಕುಟುಂಬ ಸಮೇತ ಹಾಜರಿದ್ದರು. ಒಂದಿಷ್ಟು ಆಹ್ವಾನಿತರೂ ಇದ್ದರು.ಹೋಟೆಲ್ ಷೆಫ್‌ಗಳ ಥರ ಎಲ್ಲರೂ ತಲೆಗೆ ಬಿಳಿ ಹೆಡ್‌ಗೇರ್ ಧರಿಸಿ ಕೈಯಲ್ಲಿ ಸ್ಟೀಲ್ ಸೌಟು ಹಿಡಿದು ನಿಂತರು. ಮಕ್ಕಳಲ್ಲೂ ಉತ್ಸಾಹಕ್ಕೆ ಕೊರತೆ ಇರಲಿಲ್ಲ. ಹೋಟೆಲ್ ಸಿಬ್ಬಂದಿ ದೊಡ್ಡ ಲೋಹದ ಬಾಕ್ಸ್‌ನಲ್ಲಿ ಗೋಡಂಬಿ, ದ್ರಾಕ್ಷಿ, ಬಾದಾಮಿ ಮುಂತಾದ ಡ್ರೈಫ್ರೂಟ್‌ಗಳನ್ನು ಸುರಿದು ಮೇಲೊಂದಿಷ್ಟು ಯಾಲಕ್ಕಿ ಪುಡಿ ಹಾಕಿದರು. ವೈನ್‌ಗಳನ್ನು ಸೇರಿಸಿದರು.ಅದುವರೆಗೂ ಕಾಯುತ್ತ ನಿಂತಿದ್ದವರು ಉದ್ದನೆಯ ಸೌಟು ಹಾಕಿ ಅದೆಲ್ಲವನ್ನೂ ಮಿಶ್ರ ಮಾಡಿದರು. ಇದರೊಂದಿಗೆ ಕ್ರಿಸ್ಮಸ್ ಕೇಕ್ ಮಿಶ್ರಣ ತಯಾರಿಕೆಯ ಸಾಂಪ್ರದಾಯಿಕ ಪ್ರಕ್ರಿಯೆಗೆ ಚಾಲನೆ ಸಿಕ್ಕಿತು. ಈ ಮಿಶ್ರಣವನ್ನು ಕಂಟೇನರ್‌ಗಳಲ್ಲಿ ತುಂಬಿಟ್ಟು ಕೇಕ್ ತಯಾರಿಗೆ ಬಳಸಲಾಗುತ್ತದೆ.ಇದು ಕೇಕ್‌ಗೆ ವಿಶಿಷ್ಟ ರುಚಿ ನೀಡಲಿದೆ. ಕ್ರಿಸ್ಮಸ್‌ಗೆ ಇನ್ನೂ ಎರಡೂವರೆ ತಿಂಗಳಿದೆ. ಆದರೆ ಕೇಕ್‌ಗೆ ಪೂರ್ವಸಿದ್ಧತೆ ಈಗಲೇ ಆರಂಭವಾಗಿದೆ. ಮುಂಬರುವ ದಿನಗಳಲ್ಲಿ ನಗರದ ಮಾಲ್‌ಗಳು, ಹೋಟೆಲ್‌ಗಳಲ್ಲಿ ಮಿಕ್ಸಿಂಗ್ ಗರಿಗೆದರಲಿದೆ.ಮಿಕ್ಸಿಂಗ್‌ನಲ್ಲಿ ಪಾಲ್ಗೊಂಡ ಅತಿಥಿಗಳಿಗೆ ಕೃತಜ್ಞತೆ ಸಲ್ಲಿಸಿದರು ಹೋಟೆಲ್‌ನ ಪ್ರಧಾನ ವ್ಯವಸ್ಥಾಪಕ ಹೇಮಂತ್ ರಾಯ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.