ಶನಿವಾರ, ಡಿಸೆಂಬರ್ 14, 2019
25 °C

ಮೇಘನಾ ರಂಗಪ್ರವೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೇಘನಾ ರಂಗಪ್ರವೇಶ

ನಾಟ್ಯಾಂತರಂಗ: ಭಾನುವಾರ ಮೇಘನಾ ದ್ವಾರಕ (ಶುಭಾ ಧನಂಜಯ್ ಅವರ ಶಿಷ್ಯೆ) ಭರತ ನಾಟ್ಯ ರಂಗಪ್ರವೇಶ. ಅತಿಥಿಗಳು: ರಾಜರಾಜೇಶ್ವರಿ ಕಲಾನಿಕೇತನದ ನಿರ್ದೇಶಕಿ ವೀಣಾ ಮೂರ್ತಿ ವಿಜಯ್, ನ್ಯಾಷನಲ್ ಪಬ್ಲಿಕ್ ಶಾಲೆಯ ಪ್ರಾಚಾರ್ಯೆ ಚಿತ್ರಾರಾವ್.ಮೂಲತ: ಚೆನ್ನೈನವರಾದ ಡಿ.ಬಿ.ಜಯೇಂದ್ರ ಮತ್ತು ಮಾಧವಿ ಲತಾ ದಂಪತಿಯ ಪುತ್ರಿ ಮೇಘನಾ. ಎಚ್‌ಎಸ್‌ಆರ್ ಬಡಾವಣೆಯ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಒಂಬತ್ತನೇ ತರಗತಿಯಲ್ಲಿ ಓದುತ್ತಿರುವ ಮೇಘನಾಗೆ ಬಾಲ್ಯದಿಂದಲೇ ಭರತನಾಟ್ಯದ ಕಡೆಗೆ ಒಲವು.ಭರತನಾಟ್ಯದ ಪ್ರಾಥಮಿಕ ಶಿಕ್ಷಣವನ್ನು ಚೆನ್ನೈನ ರವಿಯವರ ಬಳಿ ಕಲಿತಿರುವ ಇವರು ಈಗ `ನಾಟ್ಯಾಂತರಂಗ~ದ ಶುಭ ಧನಂಜಯ್ ಅವರ ಬಳಿ ಕಳೆದ ಐದು ವರ್ಷದಿಂದ ಅಭ್ಯಾಸ ಮಾಡುತ್ತಿದ್ದಾರೆ.ಈಗಾಗಲೇ ಶಂಕರ ಚಾನೆಲ್, ಹಂಪಿ ಉತ್ಸವ, ಅಂತರ ಶಾಲಾ ಉತ್ಸವಗಳಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದಾರೆ.ಭರತನಾಟ್ಯ ಹೊರತಾಗಿ ಪಂಕಜ ಅವರ ಬಳಿ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಕಲಿತಿರುವ ಈಕೆ ಒಳ್ಳೆಯ ಈಜುಗಾರ್ತಿ ಕೂಡ.ಸ್ಥಳ: ಪುರಂದರ ಭವನ, ಸಂಗೀತ ಸಭಾ, 8ನೇ ಮುಖ್ಯ ರಸ್ತೆ, ಎಚ್‌ಎಎಲ್ ಎರಡನೇ ಹಂತ, ಇಂದಿರಾನಗರ. ಸಂಜೆ 5.30.

ಪ್ರತಿಕ್ರಿಯಿಸಿ (+)