ಸೋಮವಾರ, ಜೂನ್ 21, 2021
30 °C

ಮೇಘಾಲಯ ವಿಧಾನಸಭೆ: ಛಾಯಾಚಿತ್ರ ಪತ್ರಕರ್ತನ ಮೇಲೆ ಶಾಸಕನ ಹಲ್ಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಷಿಲ್ಲಾಂಗ್ (ಪಿಟಿಐ): ನಿದ್ರಿಸುತ್ತಿದ್ದ ಕಾಂಗ್ರೆಸ್ ಶಾಸಕರೊಬ್ಬರ ಛಾಯಾಚಿತ್ರವನ್ನು ಕಳೆದವಾರ ಕ್ಲಿಕ್ಕಿಸಿದ್ದ ಛಾಯಾಚಿತ್ರ ಪತ್ರಕರ್ತರೊಬ್ಬರ ಮೇಲೆ ಶಾಸಕರೊಬ್ಬರು ಸದನದ ಆವರಣಲ್ಲೇ ಹಲ್ಲೆ ನಡೆಸಿದ ಘಟನೆ ಮೇಘಾಲಯ ವಿಧಾನಸಭೆಯಲ್ಲಿ ಸೋಮವಾರ ಘಟಿಸಿತು.ಛಾಯಾಚಿತ್ರ ಪತ್ರಕರ್ತ ವಾಲ್ಟೊನ್ ಲಿಟಾನ್ ಅವರ ಮೇಲೆ ಮುಖ್ಯಮಂತ್ರಿ ಮುಕುಲ್ ಸಂಗ್ಮಾ ಅವರು ಮುಂಗಡಪತ್ರ ಭಾಷಣ ಮುಗಿಸಿದ ಬಳಿಕ ಸದನದ ಆವರಣದಲ್ಲೇ ಈ ಹಲ್ಲೆ ನಡೆಯಿತು.ಮಾಲ್ವಾಯಿ ಶಾಸಕ ಸದನದಲ್ಲಿ ನಿದ್ರಿಸುತ್ತಿದ್ದ ಛಾಯಾಚಿತ್ರ ಇಲ್ಲಿನ ಹಲವಾರು ಭಾಷಾ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು.ಘಟನೆಯನ್ನು ದುರದೃಷ್ಟಕರ ಎಂದು ಬಣ್ಣಿಸಿದ ವಿರೋಧ ಪಕ್ಷದ ನಾಯಕ ಕೊನ್ರಾಡ್ ಕೆ. ಸಂಗ್ಮಾ ~ಈ ರೀತಿ ಮಾಡುವುದು, ಅದೂ ವಿಧಾನಸಭೆಯ ಅವರಣದಲ್ಲಿ, ಜನಪ್ರತಿನಿಧಿಗಳಿಗೆ ತರವಲ್ಲ~ ಎಂದು ಹೇಳಿದರು.ಈ ವಿಚಾರವನ್ನು ನಾವು ವಿಧಾನಸಭಾ ಅಧ್ಯಕ್ಷ ಬಳಿಗೆ ಒಯ್ಯುತ್ತೇವೆ. ತಪ್ಪಿತಸ್ಥ ಶಾಸಕನ ವಿರುದ್ಧ ಸಭಾಧ್ಯಕ್ಷರು ಸೂಕ್ತ ಕ್ರಮ ಕೈಗೊಳ್ಳುವಂತೆ ಮಾಡುತ್ತೇವೆ~ ಎಂದು ಅವರು ನುಡಿದರು.ಘಟನೆ ಸಂಬಂಧ ಪೊಲೀಸರ ಬಳಿ ಪ್ರಥಮ ವರ್ತಮಾನ ವರದಿ ದಾಖಲಿಸುವ ಸಂದರ್ಭದಲ್ಲಿ ~ವಿಷಯವನ್ನು ಮಂಗಳವಾರ ಸದನದಲ್ಲಿ ಪ್ರಸ್ತಾಪಿಸಲಾಗುವುದು~ ವಿರೋಧ ಪಕ್ಷಗಳು ಮಾಧ್ಯಮ ಮಂದಿಗೆ ಭರವಸೆ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.