ಶನಿವಾರ, ಏಪ್ರಿಲ್ 10, 2021
32 °C

ಮೇಟಿಕುಪ್ಪೆ ವಲಯದಲ್ಲಿ ಭಾರಿ ಕಾಳ್ಗಿಚ್ಚು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಮೇಟಿಕುಪ್ಪೆ ವಲಯದಲ್ಲಿ ಮಾರ್ಚ್ ತಿಂಗಳ 4, 5 ಹಾಗೂ 6ರಂದು ಭಾರಿ ಬೆಂಕಿ ಬಿದ್ದಿರುವ ಕುರಿತು ಉಪಗ್ರಹ ಛಾಯಾಚಿತ್ರದ ಮೂಲಕ ಗುರುತಿಸಿ ವರದಿ ನೀಡಿದ್ದರೂ ಸ್ಥಳೀಯ ಅರಣ್ಯ ಸಂರಕ್ಷಣಾಧಿಕಾರಿಗಳು ‘ಈ ಕುರಿತು ತಮಗೆ ವರದಿಯೇ ಬಂದಿಲ್ಲ’ ಎಂದು ಹೇಳಿಕೆ ನೀಡಿದ್ದಾರೆ.ಅಮೆರಿಕದ ಮೆರಿಲ್ಯಾಂಡ್ ವಿಶ್ವವಿದ್ಯಾನಿಲಯದ ವೆಬ್‌ಸೈಟ್‌ನಲ್ಲಿ ಪ್ರಕಟವಾಗಿರುವ ಉಪಗ್ರಹ ವರದಿ ದಾಖಲಾತಿಯಂತೆ ನಾಗರಹೊಳೆಯ ಮೇಟಿಕುಪ್ಪೆ ವಲಯದಲ್ಲಿ ಮಾ. 4, 5 ಹಾಗೂ 6ರಂದು ಅಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಂಕಿ ಬಿದ್ದಿರುವುದು ಖಚಿತವಾಗಿದೆ. ಏಕೆಂದರೆ ಸಣ್ಣ ಪ್ರಮಾಣದ ಬೆಂಕಿಯನ್ನು ಉಪಗ್ರಹ ಗುರುತಿಸಲಾರದು. ಮಾ. 4ರ ನಕ್ಷೆಯಲ್ಲಿ ಮೇಟಿಕುಪ್ಪೆ ವಲಯದ ಸೊಳ್ಳೇಪುರ ಪ್ರಾದೇಶಿಕ ವಲಯದಿಂದ ಪ್ರಾರಂಭವಾದ ಬೆಂಕಿ ಬಳಿಕ ಮೂರ್ಕಲ್, ಕಲ್ಲೆಟ್ಟಿ ರಸ್ತೆವರೆಗೆ ಹಬ್ಬಿರುವುದನ್ನು ಗಮನಿಸಬಹುದು. ಮಾ. 5 ಹಾಗೂ 6ರಂದು ಬೆಂಡೆಕಟ್ಟೆ ಎಂಬಲ್ಲಿ ಆರಂಭವಾದ ಬೆಂಕಿ ಕಲ್ಲಳ್ಳ ವಲಯದ ಗಡಿವರೆಗೆ ಹರಡಿರುವುದು ದಾಖಲಾಗಿದೆ.ಇಡೀ ನಾಗರಹೊಳೆಯ 7 ವಲಯಗಳಲ್ಲಿ ಮೇಟಿಕುಪ್ಪೆ ವಲಯದಲ್ಲಿ ಮಾತ್ರ ಭಾರಿ ಬೆಂಕಿಯಾಗಿರುವುದು ದಾಖಲಾಗಿದೆ. ಅಂದರೆ ಮೇಟಿಕುಪ್ಪೆ ವಲಯದಲ್ಲಿ ಬೆಂಕಿ ತಡೆ ನಿರ್ವಹಣೆಯ ಪ್ರಯತ್ನ ಸಂಪೂರ್ಣ ವಿಫಲವಾಗಿದೆ ಎಂಬುದು ಸ್ಪಷ್ಟ ಎನ್ನುತ್ತಾರೆ ತಜ್ಞರು.

ನಾಗರಹೊಳೆ ರಾಷ್ಟ್ರೀಯ ಉದ್ಯಾನ ಡಿಸಿಎಫ್ (ವನ್ಯಜೀವಿ) ವಿಜಯರಂಜನ್ ಸಿಂಗ್, ನಾಗರಹೊಳೆಗೆ ಬಿದ್ದಿರುವ ಭಾರಿ ಬೆಂಕಿಯ ಬಗ್ಗೆ ತನಗೆ ಇನ್ನೂ ಇಲಾಖೆ ಸಿಬ್ಬಂದಿ ವರದಿ ನೀಡಿಲ್ಲ. ಈ ಬಾರಿ ಕಾಡಿನ ಬೆಂಕಿ ಸಂಬಂಧಿಸಿ ಒಂದು ಪ್ರಕರಣವೂ ದಾಖಲಾಗಿಲ್ಲ. ಒಬ್ಬ ಆರೋಪಿಯನ್ನೂ ಬಂಧಿಸಿಲ್ಲ. ಅರಣ್ಯದೊಳಗೆ ಯಾರು? ಯಾವಾಗ? ಬೆಂಕಿ ಹಚ್ಚುವರೊ ತಿಳಿಯುತ್ತಿಲ್ಲ. ಹಾಗಾಗಿ ಅಪರಾಧಿಗಳು ಕೈಗೆ ಸಿಗುತ್ತಿಲ್ಲ’ ಎನ್ನುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.