ಮೇಯರ್ಸ್‌ ಕಪ್ ಕಬಡ್ಡಿ ಟೂರ್ನಿ: ಕೆಎಸ್‌ಪಿ ಮಹಿಳೆಯರಿಗೆ ಜಯ

7

ಮೇಯರ್ಸ್‌ ಕಪ್ ಕಬಡ್ಡಿ ಟೂರ್ನಿ: ಕೆಎಸ್‌ಪಿ ಮಹಿಳೆಯರಿಗೆ ಜಯ

Published:
Updated:
ಮೇಯರ್ಸ್‌ ಕಪ್ ಕಬಡ್ಡಿ ಟೂರ್ನಿ: ಕೆಎಸ್‌ಪಿ ಮಹಿಳೆಯರಿಗೆ ಜಯ

ಬೆಂಗಳೂರು: ಕರ್ನಾಟಕ ರಾಜ್ಯ ಪೊಲೀಸ್ (ಕೆಎಸ್‌ಪಿ) ತಂಡದವರು ಬೆಂಗಳೂರು ಮಹಾನಗರ ಪಾಲಿಕೆ ಆಶ್ರಯದಲ್ಲಿ ನಡೆಯುತ್ತಿರುವ ಅಖಿಲ ಭಾರತ ‘ಎ’ ದರ್ಜೆ ಮೇಯರ್ಸ್‌ ಕಪ್ ಕಬಡ್ಡಿ ಟೂರ್ನಿಯ ಮಹಿಳೆಯರ ವಿಭಾಗದಲ್ಲಿ ಶುಭಾರಂಭ ಮಾಡಿದರು. ಜೆ.ಪಿ. ನಗರ ಎರಡನೇ ಹಂತದ ದುರ್ಗಾ ಪರಮೇಶ್ವರಿ ಆಟದ ಮೈದಾನದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಕೆಎಸ್‌ಪಿ 53-06 ಪಾಯಿಂಟ್‌ಗಳಿಂದ ಶಿವಶಕ್ತಿ ತಂಡವನ್ನು ಮಣಿಸಿ ತವರಿಗೆ ಮೊದಲ ಗೆಲುವಿನ ಉಡುಗೊರೆ ನೀಡಿತು.ವಿರಾಮದ ವೇಳೆಗೆ 30-01ರಲ್ಲಿ ಮುಂದಿದ್ದ ಕೆಎಸ್‌ಪಿ ವಿರಾಮದ ನಂತರವೂ ಆಕ್ರಮಣಕಾರಿ ಆಟಕ್ಕಿಳಿದು ಗೆಲುವಿನ ಅಂತರ ಹೆಚ್ಚಿಸಿಕೊಂಡಿತು.ಇನ್ನೊಂದು ಪಂದ್ಯದಲ್ಲಿ ಹೈದರಾಬಾದ್‌ನ ಸೌತ್ ಸೆಂಟ್ರಲ್ ರೈಲ್ವೆ ತಂಡದವರು 49-17 ಪಾಯಿಂಟ್‌ಗಳಿಂದ ಮೂಡುಬಿದಿರೆಯ ಆಳ್ವಾಸ್ ತಂಡವನ್ನು ಸೋಲಿಸಿದರು. ಇದೇ ಟೂರ್ನಿಯ ಪುರುಷರ ವಿಭಾಗದಲ್ಲಿ ವಿಜಯಾ ಬ್ಯಾಂಕ್ ತಂಡ 32-30 (ವಿರಾಮದ ಸ್ಕೋರು 20-10) ಪಾಯಿಂಟ್‌ಗಳಿಂದ ಕೇಶವ ಕಬಡ್ಡಿ ಕ್ಲಬ್ ತಂಡವನ್ನು ಮಣಿಸಿತು.ಇದೇ ವಿಭಾಗದ ಇನ್ನೊಂದು ಪಂದ್ಯದಲ್ಲಿ ಹೂಡಿ ಸ್ಪೋಟ್ಸ್ ಕ್ಲಬ್ 21-18 ಪಾಯಿಂಟ್‌ಗಳಲ್ಲಿ ಮುಂಬೈನ ಮುನ್ಸಿಪಲ್ ಕಾರ್ಪೊರೇಷನ್ ತಂಡದ ಎದುರು ಗೆಲುವು ಪಡೆಯಿತು. ವಿರಾಮಕ್ಕೆ ಮೊದಲು 8-13ರಲ್ಲಿ ಹಿಂದಿದ್ದ ಹೂಡಿ ಕ್ಲಬ್ ನಂತರ ಆಕ್ರಮಣಕಾರಿ ಆಟವಾಡಿ ಗೆಲುವು ತನ್ನದಾಗಿಸಿಕೊಂಡಿತು.ಉದ್ಘಾಟನೆ: ಬುಧವಾರ ಸಂಜೆ ಸಚಿವ ಆರ್. ಅಶೋಕ ಅವರು ಕಬಡ್ಡಿ ಪಂದ್ಯಾವಳಿಗೆ ಚಾಲನೆಗೆ ನೀಡಿದರು. ಮೇಯರ್ ಎಸ್.ಕೆ. ನಟರಾಜ್, ವಿರೋಧ ಪಕ್ಷದ ನಾಯಕ ಎಂ.ನಾಗರಾಜ್, ತೋಟಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ರಂಗಣ್ಣ, ಪಾಲಿಕೆ ಸದಸ್ಯರಾದ ಬಿ.ಸೋಮಶೇಖರ್, ಎನ್.ಚಂದ್ರಶೇಖರರಾಜು, ಎಲ್.ರಮೇಶ್, ಸಿ.ಕೆ. ರಾಮಮೂರ್ತಿ, ಎನ್. ಹರೀಶ್, ವೆಂಕಟೇಶ್, ಪಾಲಿಕೆ ಆಯುಕ್ತ ಸಿದ್ದಯ್ಯ, ಬೆಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಎಂ. ಕೃಷ್ಣಪ್ಪ ಇತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry