ಮೇರಿ ಕ್ಯೂರಿ ನಿಮಗೆಷ್ಟು ಗೊತ್ತು?

ಶುಕ್ರವಾರ, ಜೂಲೈ 19, 2019
24 °C

ಮೇರಿ ಕ್ಯೂರಿ ನಿಮಗೆಷ್ಟು ಗೊತ್ತು?

Published:
Updated:

ಮೇರಿ ಕ್ಯೂರಿ ಯಾರು?

ಪೋಲೆಂಡ್‌ನಲ್ಲಿ ಹುಟ್ಟಿದ ವಿಜ್ಞಾನಿ. ಪೊಲೋನಿಯಮ್ ಹಾಗೂ ರೇಡಿಯಮ್ ಶೋಧಿಸಿದ್ದು ಅವರೇ.

ಅವರು ಸಂಶೋಧನೆ ನಡೆಸಿದ್ದು ಎಲ್ಲಿ?

ಪ್ಯಾರಿಸ್‌ನ ಸ್ಕೂಲ್ ಆಫ್ ಫಿಸಿಕ್ಸ್‌ನ ಸಣ್ಣ ಶೆಡ್‌ನಲ್ಲಿ ಅವರು ಸಂಶೋಧನೆ ಮಾಡಿದರು. ಮಳೆ ಬಂದರೆ ಸೋರುತ್ತಿದ್ದ ಆ ಶೆಡ್‌ನಲ್ಲಿ ಅವರು ತಮ್ಮ ಬಹುತೇಕ ಸಂಶೋಧನೆಗಳನ್ನು ಮಾಡಿದರು.

ಅವರಿಗೆ ನೊಬೆಲ್ ಪ್ರಶಸ್ತಿ ಬಂದದ್ದು ಯಾವಾಗ?

1903ರಲ್ಲಿ ಪಿಯರಿ ಕ್ಯೂರಿ ಹಾಗೂ ಬೆಕ್ವೆರಲ್ ಜೊತೆಯಲ್ಲಿ ಭೌತವಿಜ್ಞಾನ ಕ್ಷೇತ್ರದ ಸಂಶೋಧನೆಗಾಗಿ ನೊಬೆಲ್ ಪ್ರಶಸ್ತಿಯನ್ನು ಹಂಚಿಕೊಂಡರು. 1911ರಲ್ಲಿ ಮತ್ತೊಮ್ಮೆ ರಸಾಯನವಿಜ್ಞಾನಕ್ಕೆ ಸಂಬಂಧಿಸಿದ ಸಾಧನೆಗೆ ನೊಬೆಲ್ ಪ್ರಶಸ್ತಿ ಸಂದಿತು.

ಅವರಿಗೆ ರೇಡಿಯಮ್ ಎಲ್ಲಿ ಸಿಗುತ್ತಿತ್ತು?

ಬೊಹೆಮಿಯಾದ `ಪಿಚ್‌ಬ್ಲೆಂಡ್ ಗಣಿ~ಯಲ್ಲಿ ಪೊಲೋನಿಯಮ್ ಹಾಗೂ ರೇಡಿಯಮ್‌ಗಳನ್ನು ಅವರು ತರಿಸಿಕೊಳ್ಳುತ್ತಿದ್ದರು.

ಅವರ ಸಾವನ್ನು ದುರಂತ ಎಂದು ಯಾಕೆ ಕರೆಯುತ್ತಾರೆ?

ಆ ಕಾಲದಲ್ಲಿ ರೇಡಿಯೋ ವಿಕಿರಣಗಳು ಮಾರಣಾಂತಿಕ ಎಂಬುದು ಗೊತ್ತಿರಲಿಲ್ಲ.1934ರಲ್ಲಿ ಮೇರಿ ಕ್ಯೂರಿ ಮೃತಪಟ್ಟರು. ಅದಕ್ಕೆ ವಿಕಿರಣದಿಂದ ಆದ ತೊಂದರೆಯೇ ಕಾರಣ. 1200ರಲ್ಲಿ ಸ್ಥಾಪಿತವಾಗಿದ್ದ ಪ್ಯಾರಿಸ್‌ನ ಸೋರ್‌ಬೋನ್ ಕಾಲೇಜಿನಲ್ಲಿ ಪಾಠ ಮಾಡಿದ ಮೊದಲ ಮಹಿಳೆ ಎಂಬ ಅಗ್ಗಳಿಕೆಗೂ ಮೇರಿ ಕ್ಯೂರಿ ಪಾತ್ರರಾಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry