ಮೇಲಕ್ಕೇರಿದ ಹೊಳೆನರಸೀಪುರ; ಕುಸಿದ ಆಲೂರು

6

ಮೇಲಕ್ಕೇರಿದ ಹೊಳೆನರಸೀಪುರ; ಕುಸಿದ ಆಲೂರು

Published:
Updated:
ಮೇಲಕ್ಕೇರಿದ ಹೊಳೆನರಸೀಪುರ; ಕುಸಿದ ಆಲೂರು

ಹಾಸನ: ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಈ ಬಾರಿ ಹೊಳೆನರಸೀಪುರ ತಾಲ್ಲೂಕು ಮೊದಲ ಸ್ಥಾನಕ್ಕೆ ಏರಿದರೆ, ಕಳೆದ ವರ್ಷ ಮೊದಲ ಸ್ಥಾನದಲ್ಲಿದ್ದ ಆಲೂರು ಆರನೇ ಸ್ಥಾನಕ್ಕೆ ಕುಸಿದಿದೆ.ಕಳೆದ ವರ್ಷ ಎರಡನೇ ಸ್ಥಾನದಲ್ಲಿದ್ದ ಹೊಳೆನರಸೀಪುರ ತಾಲ್ಲೂಕು ಈ ಬಾರಿ ಶೇ 94.48 ಫಲಿತಾಂಶ ದಾಖಲಿಸಿ ಮೊದಲ ಸ್ಥಾನ ತನ್ನದಾಗಿಸಿದೆ. ನಂತರದ ಸ್ಥಾನದಲ್ಲಿ ಕ್ರಮವಾಗಿ ಚನ್ನರಾಯಪಟ್ಟಣ (ಶೇ 91.42), ಹಾಸನ (ಶೇ 90.19), ಅರಸೀಕೆರೆ (ಶೇ 89.34), ಬೇಲೂರು (ಶೇ 88.87), ಆಲೂರು (ಶೇ 88.83), ಅರಕಲಗೂಡು (ಶೇ 87.29) ಹಾಗೂ ಕೊನೆಯ ಸ್ಥಾನದಲ್ಲಿ ಸಕಲೇಶಪುರ (ಶೇ  83.56) ಇದೆ.ಜಿಲ್ಲೆಯಲ್ಲಿರುವ ಒಟ್ಟು 240ಸರ್ಕಾರಿ ಪ್ರೌಢಶಾಲೆಗಳಲ್ಲಿ 58 ಶಾಲೆಗಳು ಶೇ 100 ಫಲಿತಾಂಶ ದಾಖಲಿಸಿದ್ದರೆ, 221 ಶಾಲೆಗಳಲ್ಲಿ ಶೇ 80ಕ್ಕೂ ಹೆಚ್ಚು ಫಲಿತಾಂಶ ದಾಖಲಾಗಿದೆ. 127 ಅನುದಾನಿತ ಶಾಲೆಗಳಲ್ಲಿ ಕೇವಲ 9 ಶಾಲೆಗಳು ಶೇ 100 ಹಾಗೂ 73 ಶಾಲೆಗಳು ಶೇ 80ಕ್ಕಿಂತ ಹೆಚ್ಚು ಫಲಿತಾಂಶ ದಾಖಲಿಸಿವೆ. 132  ಅನುದಾನರಹಿತ ಶಾಲೆಗಳಲ್ಲಿ 56 ಶಾಲೆಗಳು ಶೇ 100 ಹಾಗೂ 102 ಶಾಲೆಗಳು ಶೇ 80ಕ್ಕಿಂತ ಹೆಚ್ಚು ಫಲಿತಾಂಶ ದಾಖಲಿಸಿವೆ ಎಂದು ಡಿಡಿಪಿಐ ಎ.ಟಿ. ಚಾಮರಾಜ್ ತಿಳಿಸಿದ್ದಾರೆ.1244 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 8846 ವಿದ್ಯಾರ್ಥಿಗಳು ಪ್ರಥಮ ಹಾಗೂ 5117 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.ಕಳೆದ ವರ್ಷ ಸಮಾಜ ವಿಜ್ಞಾನದಲ್ಲಿ ಮಕ್ಕಳು ಹಿಂದೆ ಉಳಿದಿದ್ದರು. ಆದರೆ ಈ ವರ್ಷ ಅತ್ತ ಹೆಚ್ಚು ಗಮನಹರಿಸಿದ ಪರಿಣಾಮ ಈ ವಿಷಯದಲ್ಲಿ ಅತಿ ಹೆಚ್ಚು (ಶೇ 93.7) ಫಲಿತಾಂಶ ಬಂದಿದೆ ಎಂದು ಚಾಮರಾಜ್ ತಿಳಿಸಿದರು.ಜಿಲ್ಲೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಹತ್ತು ವಿದ್ಯಾರ್ಥಿಗಳ ವಿವರ ಇಂತಿದೆ.ವಿದ್ಯಾ ಟಿ.ಎಲ್ (614 ಅಂಕ) ವರಮಹಾಲಕ್ಷ್ಮಿ ಆಂಗ್ಲಮಾಧ್ಯಮ ಶಾಲೆ ಹಾಸನಗುರುದರ್ಶನ್ (613) ಸಿ.ಕೆ.ಎಸ್. ಆಂಗ್ಲಮಾಧ್ಯಮ ಶಾಲೆ ಹಾಸನ, ನಂದಿತಾ (611) ಸೇಂಟ್ ಫಿಲೊಮಿನಾ ಬಾಲಕಿಯರ ಶಾಲೆ ಹಾಸನ, ನಿನಾದ ಆರ್.ಪಿ (611) ವಿಜಯಾ ಆಂಗ್ಲಮಾಧ್ಯಮ ಶಾಲೆ ಚಿಕ್ಕಹೊನ್ನೇನಹಳ್ಳಿ, ಆಯೇಶಾ (610) ಪೂರ್ಣಪ್ರಜ್ಞಾಆಂಗ್ಲಮಾಧ್ಯಮ ಶಾಲೆ ಬೇಲೂರು. ಅರ್ಪಿತಾ ಎ. (610) ಯುನೈಟೆಡ್ ಹೈಸ್ಕೂಲ್ ಹಾಸನ, ತಿಲಕರಾಜ್ ಸಿ.ಕೆ. (610) ವರಮಹಾಲಕ್ಷ್ಮಿ ಆಂಗ್ಲಮಾಧ್ಯಮ ಶಾಲೆ ಹಾಸನ, ಶ್ರೀನಿಧಿ ಭಾರದ್ವಾಜ್ (609) ಸೇಟ್ ಮೆರೀಸ್ ಆಂಗ್ಲಮಾಧ್ಯಮ ಶಾಲೆ ಅರಸೀಕೆರೆ, ರೇಷ್ಮಾ (609) ಸಿ.ಕೆ.ಎಸ್.ಆಂಗ್ಲಮಾಧ್ಯಮ ಶಾಲೆ ಹಾಸನ, ಹರ್ಷಿತಾ (609) ವಿಜಯಾ ಆಂಗ್ಲಮಾಧ್ಯಮ ಶಾಲೆ ಹಾಸನ.ಶೇ. 100 ಫಲಿತಾಂಶ ದಾಖಲಿಸಿದ ಹಾಸನ ತಾಲ್ಲೂಕಿನ ಶಾಲೆಗಳು

ಪೂಮಗಾಮೆ ಸರ್ಕಾರಿ ಪ್ರೌಢಶಾಲೆ, ಮೊರಾರ್ಜಿ ದೇಸಾಯಿ ವಸತಿ ಪ್ರೌಢಶಾಲೆ ಕಂದಲಿ, ಮುತ್ತಿಗೆಹಿರಿಹಳ್ಳಿ ಸರ್ಕಾರಿ ಪ್ರೌಢಶಾಲೆ ಸೋಮನಹಳ್ಳಿ ಸರ್ಕಾರಿ ಪ್ರೌಢಶಾಲೆ, ಮೊರಾರ್ಜಿ ದೇಸಾಯಿ ವಸತಿ ಪ್ರೌಢಶಾಲೆ ಮೊಸಳೆಹೊಸಹಳ್ಳಿ ಅರವಿಂದ ಪ್ರೌಢಶಾಲೆ ಕುವೆಂಪುನಗರ ಹಾಸನ (ಅನುದಾನಿತ)ಅನುದಾನರಹಿತ ಶಾಲೆಗಳು:ಯುನೈಟೆಡ್ ಪ್ರೌಢಶಾಲೆ ಹಾಸನ, ಮಾಳವಿಕಾ ಪ್ರೌಢಶಾಲೆ ಹಾಸನ

ಆದಿಚುಂಚನಗಿರಿ ಆಂಗ್ಲಮಾಧ್ಯಮ ಶಾಲೆ ಹಾಸನ, ರಂಗನಾಥ ಪ್ರೌಢಶಾಲೆ ಕೆಂಚಮಾರನಹಳ್ಳಿ, ಸಿ.ಕೆ.ಎಸ್. ಆಂಗ್ಲಮಾಧ್ಯಮ ಪ್ರೌಢಶಾಲೆ ಹಾಸನ, ಜೆ.ಎಂ.ಎಂ. ಪ್ರೌಢಶಾಲೆ ಹಾಸನ, ರಾಮಕೃಷ್ಣ ವಿದ್ಯಾಲಯ ಆಂಗ್ಲ ಪ್ರೌಢಶಾಲೆ ಹಾಸನ, ವಾಸವಿ ಪ್ರೌಢಶಾಲೆ ಹಾಸನ, ವಿಜಯ ಪ್ರೌಢಶಾಲೆ ಚಿಕ್ಕಹೊನ್ನೇನಹಳ್ಳಿ ಹಾಸನ, ಲಕ್ಷ್ಮೀ ಪ್ರೌಢಶಾಲೆ ಹಾಸನ, ಶಾಸ್ತಾ ಪಬ್ಲಿಕ್ ಶಾಲೆ ಹಾಸನ, ಹಾಸನ ಪಬ್ಲಿಕ್ ಸ್ಕೂಲ್ ಹಾಸನ, ಕುವೆಂಪು ಪ್ರೌಢಶಾಲೆ ಬಿ.ಕಾಟಿಹಳ್ಳಿ, ಸಿ.ಕೆ.ಎಸ್. ಆಂಗ್ಲಪ್ರೌಢಶಾಲೆ  ಬೂವನಹಳ್ಳಿ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry