ಮೇಲುಕೋಟೆ ಅಭಿವೃದ್ಧಿಗೆ ್ಙ10 ಕೋಟಿ

7
ಶಾಸಕ ಸಿ.ಎಸ್. ಪುಟ್ಟರಾಜು ಭರವಸೆ

ಮೇಲುಕೋಟೆ ಅಭಿವೃದ್ಧಿಗೆ ್ಙ10 ಕೋಟಿ

Published:
Updated:
ಮೇಲುಕೋಟೆ ಅಭಿವೃದ್ಧಿಗೆ ್ಙ10 ಕೋಟಿ

ಮಂಡ್ಯ: ಜಿಲ್ಲೆಯ ಧಾರ್ಮಿಕ ಹಾಗೂ ಐತಿಹಾಸಿಕ ಕ್ಷೇತ್ರ ಮೇಲುಕೋಟೆಯ ಸಮಗ್ರ ಅಭಿವೃದ್ಧಿಗೆ ಸರ್ಕಾರ ರೂ. 10 ಕೋಟಿ ಅನುದಾನ ನೀಡುವ ಭರವಸೆ ನೀಡಿದೆ ಎಂದು ಶಾಸಕ ಸಿ.ಎಸ್. ಪುಟ್ಟರಾಜು ತಿಳಿಸಿದರು. ಪಾಂಡವಪುರ ತಾಲ್ಲೂಕು ಮೇಲುಕೋಟೆಯಲ್ಲಿ ಸೋಮವಾರ ನಡೆದ ಯೋಗಾ ನರಸಿಂಹಸ್ವಾಮಿ ದೇಗುಲದ ಮೆಟ್ಟಿಲುಗಳ ನವೀಕರಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.ಬೆಳಗಾವಿಯಲ್ಲಿ ಈಚೆಗೆ ನಡೆದ ಅಧಿವೇಶನ ವೇಳೆ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು, ಶೀಘ್ರದಲ್ಲಿ ಇಷ್ಟೂ ಹಣವನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು. ಜಿಲ್ಲಾಧಿಕಾರಿ ಬಿ.ಎನ್. ಕೃಷ್ಣಯ್ಯ ಮಾತನಾಡಿ, ಐತಿಹಾಸಿಕ ಪ್ರಸಿದ್ಧವಾದ ಮೇಲುಕೋಟೆಗೆ ಸಾವಿರಾರು ಭಕ್ತರು ಹಾಗೂ ಪ್ರವಾಸಿಗರು ನಿತ್ಯ ಭೇಟಿ ನೀಡುತ್ತಿದ್ದು, ಅವರಿಗೆ ಅನುಕೂಲವನ್ನು ಕಲ್ಪಿಸುವ ಉದ್ದೇಶದಿಂದ ಹಲವು ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.ದೇಗುಲದ ಮೆಟ್ಟಿಲುಗಳ ನವೀಕರಣ ಕಾಮಗಾರಿಯನ್ನು 87.5 ಲಕ್ಷ ರೂಪಾಯಿಯನಲ್ಲಿ ನಡೆಸಲಾಗುತ್ತಿದ್ದು, ಇದನ್ನು ನಿರ್ಮಿತಿ ಕೇಂದ್ರವು ನಿರ್ವಹಿಸಲಿದ್ದಾರೆ ಎಂದು ಹೇಳಿದರು. ಜಿಲ್ಲೆಯ ಬಿ ಮತ್ತು ಸಿ ವರ್ಗದ ದೇವಾಲಯಗಳಿಗೆ ವ್ಯವಸ್ಥಾಪನಾ ಸಮಿತಿ ರಚಿಸಲು ಅರ್ಜಿಗಳನ್ನು ಈಗಾಗಲೇ ಆಹ್ವಾನಿಸಲಾಗಿದೆ. ಶೀಘ್ರದಲ್ಲೇ ವ್ಯವಸ್ಥಾಪನಾ ಸಮಿತಿಗಳನ್ನು ರಚಿಸಲಾಗುವುದು. ವ್ಯವಸ್ಥಾಪನಾ ಸಮಿತಿಗಳು ದೇವಸ್ಥಾನದ ಅಭಿವದ್ಧಿಗಾಗಿ ಕಾರ್ಯ ನಿರ್ವಹಿಸಲಿದೆ ಎಂದರು.ಪಾಂಡವಪುರ ಉಪ ವಿಭಾಗಾಧಿಕಾರಿ ಆರ್.ಲತಾ, ಇಂಟಾಕ್ ಸಂಸ್ಥೆಯ ಸಂಚಾಲಕ ಸತ್ಯಪ್ರಕಾಶ್ ವಾರಣಾಸಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಜಯಲಕ್ಷ್ಮಿ  ನರಸಿಂಹ ಶೆಟ್ಟಿ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಭಾನುಪ್ರಕಾಶ್ ಶರ್ಮ, ತಾಲ್ಲೂಕು ಪಂಚಾಯತ್ ಸದಸ್ಯ ಶಾಮಣ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಣಿ, ಪಾಂಡವಪುರ ತಹಶೀಲ್ದಾರ್ ಶಿವಾನಂದ ಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry