ಬುಧವಾರ, ಏಪ್ರಿಲ್ 21, 2021
25 °C

ಮೇಲುಕೋಟೆ: ಸಂಭ್ರಮದ ವೈರಮುಡಿ ಉತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೇಲುಕೋಟೆ: ಇಲ್ಲಿನ ಚಲುವನಾರಾಯಣ ಸ್ವಾಮಿಯ ವೈರಮುಡಿ ಉತ್ಸವ ಮಂಗಳವಾರ ರಾತ್ರಿ   ಸಡಗರ ಸಂಭ್ರಮದೊಂದಿಗೆ ನೆರವೇರಿತು. ‘ಭಗವಂತನ ಕಿರೀಟ’ ವೆಂದೇ ನಂಬಿರುವ ವೈರಮುಡಿ ಕಿರೀಟ ಧರಿಸಿದ ಸ್ವಾಮಿಯ ದರ್ಶನವನ್ನು ಸಾವಿರಾರು ಭಕ್ತರು ಪಡೆದರು. ಗರುಡಾರೂಢನಾದ ಚಲುವನಾರಾಯಣನನ್ನು ಅಲಂಕರಿಸಿದ್ದ ವರ್ಣಮಯ  ಪುಷ್ಪಾಹಾರಗಳು ಚಲುವಿಗೆ ಮತ್ತಷ್ಟು ಮೆರುಗು ನೀಡಿದ್ದವು.ರಾತ್ರಿ ಯಾಗಶಾಲೆ ಮತ್ತು ಗರುಡದೇವನ ಮೆರವಣಿಗೆಯ ನಂತರ ಮಹಾಮಂಗಳಾರತಿಯ ಪ್ರಾರ್ಥನೆ  ಸಲ್ಲಿಸಿದ ತರುವಾಯ ಉತ್ಸವ 8.30ಕ್ಕೆ ವಿಧ್ಯುಕ್ತವಾಗಿ ಆರಂಭವಾಯಿತು. ನಂತರ ದೇವಾಲಯದ ಎಡಭಾಗದಲ್ಲಿ ನಿರ್ಮಿಸಲಾಗಿರುವ ಮಂಟಪದಲ್ಲಿ ಸ್ವಾಮಿಗೆ ಮತ್ತೊಮ್ಮೆ ಮಂಗಳಾರತಿ ಮಾಡಲಾಯಿತು. ಇದಾದ ನಂತರ ಚತುರ್ವೇದಿಗಳಲ್ಲಿ ವೈರಮುಡಿ ಉತ್ಸವ ವೈಭವದಿಂದ ನೆರವೇರಿತು.ಮಂಡ್ಯ ಜಿಲ್ಲಾ ಖಜಾನೆಯಿಂದ ತರಲಾದ ರಾಜಮುಡಿ-ವೈರಮುಡಿ ಕಿರೀಟಗಳಿಗೆ ಪಾರ್ವತಿ ಮಂಟಪದ  ಬಳಿ ದೇವಾಲಯದ ವತಿಯಿಂದ ಭವ್ಯ ಸ್ವಾಗತ ನೀಡಲಾಯಿತು. ಸಂಜೆ 6.30 ಕ್ಕೆ ಆಂಜನೇಯಸ್ವಾಮಿ  ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ ವೈರಮುಡಿ ಕಿರೀಟವನ್ನು ಮಂಡ್ಯದಿಂದ ಮೇಲುಕೋಟೆಯವರೆಗೆ ಬಿಗಿಭದ್ರತೆಯಲ್ಲಿ ತರಲಾಯಿತು.ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್, ಮೈಷುಗರ್ ಅಧ್ಯಕ್ಷ ನಾಗರಾಜಪ್ಪ, ಶಾಸಕರಾದ  ಸಿ.ಎಸ್.ಪುಟ್ಟರಾಜು, ಅಶ್ವಥ್‌ನಾರಾಯಣ, ಜೆಡಿಎಸ್‌ನ ನಾಯಕ ಎಚ್.ಡಿ.ರೇವಣ್ಣ ಸೇರಿದಂತೆ ಹಲವಾರು ಗಣ್ಯರು ಭಾಗವಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.