ಮೇಲ್ಗಾಲುವೆ ಕುಸಿತ: ನಾಲ್ವರ ಸಾವು

7

ಮೇಲ್ಗಾಲುವೆ ಕುಸಿತ: ನಾಲ್ವರ ಸಾವು

Published:
Updated:

ಅಥಣಿ: ನಿರ್ಮಾಣ ಹಂತದಲ್ಲಿರುವ ಐನಾಪುರ ಏತ ನೀರಾವರಿ ಯೋಜನೆಯ ಮೇಲ್ಗಾಲುವೆ ಕುಸಿದು ಬಿದ್ದ ಪರಿಣಾಮ  ನಾಲ್ವರು ಕಾರ್ಮಿಕರು ಮತಪಟ್ಟು, ಏಳು ಮಂದಿ ಗಾಯಗೊಂಡ ಘಟನೆ ತಾಲ್ಲೂಕಿನ ಮಂಗಸೂಳಿ ಗ್ರಾಮದ ಹೊರವಲಯದಲ್ಲಿ ಗುರುವಾರ ಸಂಭವಿಸಿದೆ.ಆಂಧ್ರ ಪ್ರದೇಶದ ಆರ್ಯಪಟ್ಟ ಮೂಲದ ಶಾಮುಲು ಶೇಷನ್ (45) ಮತ್ತು ವಿಜಾಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಲಂಬಾಣಿ ತಾಂಡಾದ ಲಕ್ಷ್ಮಣ ಗೋವಿಂದ ಚವ್ಹಾಣ (35) ಸ್ಥಳದಲ್ಲೇ ಮೃತಪಟ್ಟರು. ತೀವ್ರವಾಗಿ ಗಾಯಗೊಂಡಿದ್ದ ಆಂಧ್ರಪ್ರದೇಶದ ಮೆಹಬೂಬ್‌ನಗರ ಜಿಲ್ಲೆಯ ತಿರುಪತಿ (25) ಹಾಗೂ ಶ್ರೀಶೈಲ (45) ಮಹಾರಾಷ್ಟ್ರದ ಮಿರಜ್ ಆಸ್ಪತ್ರೆಯಲ್ಲಿ ಮೃತಪಟ್ಟರು. ಗಾಯಗೊಂಡಿರುವ ಇನ್ನಿತರ ಏಳು ಕಾರ್ಮಿಕರು ಮಿರಜ್‌ನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಐನಾಪುರ ಏತ ನೀರಾವರಿ ಯೋಜನೆಯ ಮೇಲ್ಗಾಲುವೆ ನಿರ್ಮಾಣಕ್ಕೆ ಗುರುವಾರ ಮಧ್ಯಾಹ್ನ ಸೆಂಟ್ರಿಂಗ್ ಕಾಂಕ್ರೀಟ್ ಹಾಕುವ ವೇಳೆ ಅದು ದಿಢೀರ್ ಕುಸಿದು ಬಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry