ಮೇಲ್ಮನವಿಗೆ ಕಸಾಬ್‌ ತೀರ್ಮಾನ

7

ಮೇಲ್ಮನವಿಗೆ ಕಸಾಬ್‌ ತೀರ್ಮಾನ

Published:
Updated:

ಮುಂಬೈ, (ಪಿಟಿಐ/ ಐಎಎನ್‌ಎಸ್): ಪಾಕಿಸ್ತಾನಿ ಉಗ್ರ ಅಜ್ಮಲ್ ಕಸಾಬ್ ತನ್ನ ಗಲ್ಲು ಶಿಕ್ಷೆಯನ್ನು ಎತ್ತಿಹಿಡಿದಿರುವ ಮುಂಬೈ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಿರುವುದಾಗಿ ಆತನ ವಕೀಲರು ತಿಳಿಸಿದ್ದಾರೆ.‘ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸುವಂತೆ ಹೇಳಿದೆ. ಅದನ್ನು ಶಾಂತವಾಗಿ ಕೇಳಿಸಿಕೊಂಡ ಕಸಾಬ್, ಒಳ್ಳೆಯದು ಹಾಗೇ ಮಾಡೋಣ ಎಂದು ಹೇಳಿದ. ತೀರ್ಪಿನ ಪ್ರತಿಯನ್ನು ಪಡೆದ ಕೂಡಲೇ ಮೇಲ್ಮನವಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಲಿದೆ’ ಎಂದು ಕಸಾಬ್ ವಕೀಲೆ ಫರ್ಹಾನಾ ಷಾ ಬುಧವಾರ ಸುದ್ದಿಗಾರರಿಗೆ ತಿಳಿಸಿದರು. ಪತ್ರಿಕೆಗಳನ್ನು ಓದ ಬಯಸಿರುವುದಾಗಿ ಕಸಾಬ್ ಹೇಳಿದ.ಆದರೆ ಹಾಗೆ ಪತ್ರಿಕೆಗಳನ್ನು ತಂದುಕೊಡುವ ಅಧಿಕಾರ ನನಗೆ ಇಲ್ಲದ್ದರಿಂದ ಜೈಲರ್ ಅವರನ್ನು ಕೇಳುವಂತೆ ತಿಳಿಸಿದೆ. ಆತ ಬರೀ ಹ್ಞೂಂ ಗುಟ್ಟಿದ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry