ಮೇಲ್ಸೇತುವೆ ಕಾಮಗಾರಿ ಸ್ಥಗಿತ

7
ಪರ್ಯಾಯ ರಸ್ತೆಯಲ್ಲಿ ದೂಳಿನ ಮಜ್ಜನ

ಮೇಲ್ಸೇತುವೆ ಕಾಮಗಾರಿ ಸ್ಥಗಿತ

Published:
Updated:

ಚನ್ನಗಿರಿ: ತಾಲ್ಲೂಕು ದೇವರಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಜವಾಹರ್ ನವೋದಯ ವಿದ್ಯಾಲಯದ ಬಳಿ ನಿರ್ಮಿಸುತ್ತಿರುವ ಹೊಸ ಮೇಲ್ಸೇತುವೆ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಳಿಸಲಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.ಬೀರೂರು-ಸಮ್ಮಸಗಿ ಜಿಲ್ಲಾ ಮುಖ್ಯರಸ್ತೆಯನ್ನು ರಾಜ್ಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಈಗಾಗಲೇ 105 ಕಿ.ಮೀ. ಉದ್ದದ ರಸ್ತೆ ನಿರ್ಮಾಣಕ್ಕೆ ್ಙ 210 ಕೋಟಿ ಅನುದಾನ ಬಿಡುಗಡೆಯಾಗಿದೆ. ಕೇಶಿಪ್ ಇದರ ಉಸ್ತುವಾರಿಯನ್ನು ವಹಿಸಿಕೊಂಡಿದ್ದು, ಗ್ಯಾಮನ್ ಇಂಡಿಯಾ ಕಂಪೆನಿ ಗುತ್ತಿಗೆಯನ್ನು ಪಡೆದುಕೊಂಡಿದೆ. ಅದರಂತೆ ಈ ಹೆದ್ದಾರಿಯಲ್ಲಿ ಬರುವ ಸಣ್ಣಪುಟ್ಟ ಸೇತುವೆಗಳನ್ನು ತೆಗೆದು ದೊಡ್ಡ ಮೇಲುಸೇತುವೆಯನ್ನು ನಿರ್ಮಿಸಲು ದೇವರಹಳ್ಳಿ ಗ್ರಾಮದ ಜವಾಹರ್ ನವೋದಯ ವಿದ್ಯಾಲಯದ ಬಳಿ ಕಳೆದ ಏಳು ತಿಂಗಳ ಕಾಮಗಾರಿಯನ್ನು ಆರಂಭಿಸಲಾಗಿತ್ತು. ಹೆದ್ದಾರಿಯನ್ನು ಬಂದ್ ಮಾಡಿ ದೊಡ್ಡ ದೊಡ್ಡ ಪೈಪ್‌ಗಳನ್ನು ಅಳವಡಿಸಿ  6 ತಿಂಗಳಾದರೂ ಕಾಮಗಾರಿ ಮುಕ್ತಾಯಗೊಂಡಿಲ್ಲ.ಸೇತುವೆ ನಿರ್ಮಾಣದ ದೃಷ್ಟಿಯಿಂದ ಈ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕಾಗಿ ಪರ್ಯಾಯ ರಸ್ತೆಯನ್ನು ಮಾಡಲಾಗಿದೆ. ಆದರೆ, ಈ ರಸ್ತೆ ಸಂಪೂರ್ಣವಾಗಿ ಗುಂಡಿಗಳಿಂದ ಕೂಡಿದ್ದು, ಒಂದು ವಾಹನ ಹಾದು ಹೋದ ಕೂಡಲೇ ಹೆಚ್ಚು ಪ್ರಮಾಣದಲ್ಲಿ ದೂಳು ಏಳುತ್ತದೆ. ಪರ್ಯಾಯ ರಸ್ತೆಯಲ್ಲಿ ವಾಹನಗಳು ಸಂಚರಿಸಲು ಹರಸಾಹಸ ಪಡಬೇಕಾಗಿದೆ. ಆದ್ದರಿಂದ, ಕಳೆದ ಆರು ತಿಂಗಳಿಂದ ಸ್ಥಗಿತಗೊಳಿಸಿದ ಮೇಲ್ಸೇತುವೆ ಕಾಮಗಾರಿಯನ್ನು ತರ‌್ವಿತವಾಗಿ ಮುಕ್ತಾಗೊಳಿಸಿ ಸುಗಮ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಗ್ರಾಮದ ಪರಶುರಾಮ, ಲಕ್ಷ್ಮೀಪತಿ ಒತ್ತಾಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry