ಬುಧವಾರ, ಫೆಬ್ರವರಿ 24, 2021
23 °C
ಚನ್ನಗಿರಿ ಪಟ್ಟಣದಿಂದ ಗರಗ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಮೇಲ್ಸೆತುವೆ ನಿರ್ಮಾಣಕ್ಕಾಗಿ ಬೇಡಿಕೆ

ಮೇಲ್ಸೇತುವೆ ನಿರ್ಮಿಸಲು ಗ್ರಾಮಸ್ಥರ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೇಲ್ಸೇತುವೆ ನಿರ್ಮಿಸಲು ಗ್ರಾಮಸ್ಥರ ಆಗ್ರಹ

ಚನ್ನಗಿರಿ: ಪಟ್ಟಣದಿಂದ ಗರಗ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಇರುವ ಸಣ್ಣ ಸೇತುವೆಯನ್ನು ತೆಗೆದು ಮೇಲ್ಸೆತುವೆ ನಿರ್ಮಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.ಚನ್ನಗಿರಿ ಪಟ್ಟಣದಿಂದ ದನದ ಓಣಿಯ ಮೂಲಕ ಗರಗ ಗ್ರಾಮಕ್ಕೆ ಹಾದು ಹೋಗುವ ಸಂಪರ್ಕ ರಸ್ತೆಯಲ್ಲಿ ಸೇತುವೆ ಇದ್ದು, ಮಳೆಗಾಲದಲ್ಲಿ ನೀರು ತುಂಬಿ ಸೇತುವೆ ಮೇಲೆ ಹರಿಯುವುದರಿಂದ ವಾಹನಗಳು ಸಂಚರಿಸಲು ಸಾಧ್ಯವಾಗುವುದಿಲ್ಲ. 3 ಕಿ.ಮೀ ಉದ್ದದ ಈ ರಸ್ತೆಯನ್ನು ಇತ್ತೀಚಿಗೆ ₨  70 ಲಕ್ಷ ವೆಚ್ಚದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆ ವತಿಯಿಂದ ಹೊಸದಾಗಿ ನಿರ್ಮಿಸಲಾಗಿದೆ. ನೆಲ ಮಟ್ಟದಲ್ಲಿ ಈ ಸೇತುವೆ ಇರುವುದರಿಂದ ಮಳೆಗಾಲದಲ್ಲಿ ವಾಹನಗಳು ಸಂಚರಿಸಲು ಸಮಸ್ಯೆ ಉಂಟಾಗುತ್ತದೆ. ಇನ್ನು ಈ ಸೇತುವೆಯ ಮೇಲೆ ಸಣ್ಣಪುಟ್ಟ ಗುಂಡಿಗಳೂ ಬಿದ್ದಿವೆ.  ಹರಿದ್ರಾವತಿ ಹಳ್ಳಕ್ಕೆ ಅಡ್ಡಲಾಗಿ ಸೇತುವೆಯನ್ನು ನಿರ್ಮಿಸಲಾಗಿದೆ.ಈ ಸೇತುವೆಯ ಸಮೀಪವೇ ಚೆಕ್‌ ಡ್ಯಾಂ ನಿರ್ಮಿಸಿರುವುದರಿಂದ ಮಳೆಗಾಲದಲ್ಲಿ ನೀರು ಹೆಚ್ಚು ಪ್ರಮಾಣದಲ್ಲಿ ಸಂಗ್ರಹವಾಗುತ್ತಿದ್ದು ಸೇತುವೆಯ ಮೇಲೆ ನೀರು ನಿಂತುಕೊಳ್ಳುವಂತಾಗಿದೆ.    ಅಲ್ಲದೇ ಪಟ್ಟಣದಲ್ಲಿನ ಗೂಡಂಗಂಡಿಗಳ ತ್ಯಾಜ್ಯ ವಸ್ತುಗಳನ್ನು ತಂದು ಈ ಚೆಕ್‌ ಡ್ಯಾಂ ಹತ್ತಿರ ಹಾಕುವುದರಿಂದ ಮಳೆಗಾಲದಲ್ಲಿ ಈ ತ್ಯಾಜ್ಯ ವಸ್ತುಗಳು ಮಳೆಯ ನೀರಿನೊಂದಿಗೆ ಹರಿದು ಹೋಗಿ ಚೆಕ್‌ ಡ್ಯಾಂ ಸೇರಿಕೊಂಡು ನೀರು ಸಂಪೂರ್ಣವಾಗಿ ಮಲಿನಗೊಂಡು ದುವಾರ್ಸನೆ ಬೀರುವಂತಾಗಿದೆ. ಆದ್ದರಿಂದ ಈ ಸಣ್ಣ ಸೇತುವೆಯ

ಬದಲಿಗೆ ಮೇಲ್ಸೆತುವೆ ನಿರ್ಮಿಸಿದರೆ  ವಾಹನಗಳ ಸುಗಮ ಸಂಚಾರಕ್ಕೆ ಅನೂಕೂಲವಾಗುತ್ತದೆ ಎನ್ನುತ್ತಾರೆ ಗರಗ ಗ್ರಾಮದ ವೆಂಕಟೇಶ್, ಮನ್ಸೂರ್.ಈ ಹಿಂದೆ ಸಣ್ಣ ನೀರಾವರಿ ಇಲಾಖೆಯವರು ಈ ಸೇತುವೆಯ ಸಮೀಪವೇ ಚೆಕ್‌ ಡ್ಯಾಂ ನಿರ್ಮಿಸಿರುವುದರಿಂದ ಮಳೆಗಾಲದಲ್ಲಿ ಈ ಚೆಕ್‌ ಡ್ಯಾಂನಲ್ಲಿ ನೀರು ಸಂಗ್ರಹಗೊಂಡು ಸೇತುವೆಯ ಮೇಲೆ ನಿಂತುಕೊಳ್ಳುವಂತಾಗಿದೆ.ಮೇಲ್ಸೆತುವೆ ನಿರ್ಮಾಣಕ್ಕೆ ಯಾವುದೇ ಅನುದಾನ ಬಂದಿರುವುದಿಲ್ಲ. ಹೊಸದಾಗಿ ಸೇತುವೆಗಳ ನಿರ್ಮಾಣದ ಬಗ್ಗೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.ಅನುದಾನ ಬಿಡುಗಡೆಯಾದರೆ ಮೇಲ್ಸೆತುವೆ ನಿರ್ಮಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಎಇಇ ಜಯ್ಯಣ್ಣ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.