ಮೇಲ್ಸೇತುವೆ ಬೇಕು

ಭಾನುವಾರ, ಜೂಲೈ 21, 2019
27 °C

ಮೇಲ್ಸೇತುವೆ ಬೇಕು

Published:
Updated:

ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಾನಿಕ್ ಸಿಟಿ ಮತ್ತು ಇತರೆ ಪ್ರದೇಶಗಳಲ್ಲಿ ಮೇಲ್ಸೇತುವೆಗಳು ಬಂದಿರುವುದರಿಂದ ವಾಹನದ ದಟ್ಟಣೆ ನಿಯಂತ್ರಣಕ್ಕೆ ಬಂದಿರುತ್ತದೆ.

ಆದರೆ ಜೆ.ಪಿ.ನಗರದ ತಿರುವಿನಿಂದ ಹಿಡಿದು ಬನ್ನೇರುಘಟ್ಟದ ಮುಖ್ಯ ರಸ್ತೆ ತುದಿಯ ತನಕ ಬೆಳಿಗ್ಗೆ ಮತ್ತು ಸಂಜೆಯ ವೇಳೆಯಲ್ಲಿ ವಾಹನಗಳು ಅತಿ ಹೆಚ್ಚು ಸಂಖ್ಯೆಯಲ್ಲಿ ಸಂಚರಿಸುವುದರಿಂದ ಟ್ರಾಫಿಕ್ ಜಾಮ್ ಸಾಮಾನ್ಯ ಎನ್ನುವಂತಾಗಿದೆ. ವಿಶೇಷವಾಗಿ, ಮಳೆ ಬಂದಂತಹ ಸಂದರ್ಭದಲ್ಲಿ ಇಲ್ಲಿ ಸಂಚಾರ ವ್ಯವಸ್ಥೆಯಂತೂ ಸಂಪೂರ್ಣವಾಗಿ ಅಸ್ತವ್ಯಸ್ತಗೊಳ್ಳುತ್ತದೆ.

ಆದುದರಿಂದ ಜೆ.ಪಿ.ನಗರ ತಿರುವಿನಿಂದ ಹಿಡಿದು ಬನ್ನೇರುಘಟ್ಟದ ಮುಖ್ಯ ರಸ್ತೆಯ ತುದಿಯ ತನಕ ಮೇಲ್ಸೇತುವೆಯನ್ನು ನಿರ್ಮಾಣ ಮಾಡಿದರೆ ವಾಹನ ಸವಾರರಿಗೆ ಮತ್ತು ನಾಗರಿಕರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಅಲ್ಲದೆ ಈ ರಸ್ತೆಯಲ್ಲಿ ಹಲವಾರು ಪ್ರಮುಖ ಆಸ್ಪತ್ರೆಗಳಿದ್ದು, ರೋಗಿಗಳನ್ನು ಆಂಬುಲೆನ್ಸ್‌ನಲ್ಲಿ ಸಕಾಲಕ್ಕೆ ಸಾಗಿಸಲು ಕೂಡ ಇದರಿಂದ ಸಹಾಯವಾಗುತ್ತದೆ.

ಮುಖ್ಯಮಂತ್ರಿಗಳು ಮತ್ತು ಸಂಬಂಧಪಟ್ಟವರು ಇತ್ತ ಕಡೆ ಗಮನ ಹರಿಸುವರೇ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry