ಮೇ ದಿನಾಚರಣೆ, ಹುತಾತ್ಮರ 42ನೇ ವಾರ್ಷಿಕೋತ್ಸವ ಕಾರ್ಯಕ್ರಮ

7

ಮೇ ದಿನಾಚರಣೆ, ಹುತಾತ್ಮರ 42ನೇ ವಾರ್ಷಿಕೋತ್ಸವ ಕಾರ್ಯಕ್ರಮ

Published:
Updated:
ಮೇ ದಿನಾಚರಣೆ, ಹುತಾತ್ಮರ 42ನೇ ವಾರ್ಷಿಕೋತ್ಸವ ಕಾರ್ಯಕ್ರಮ

ದಾವಣಗೆರೆ: ಬಂಡವಾಳಶಾಹಿ ನೀತಿ, ಕಾರ್ಮಿಕರ ಶೋಷಣೆ, ಹಕ್ಕುಗಳ ದಮನದ ವಿರುದ್ಧ ಅಖಿಲ ಭಾರತ ಕಾರ್ಮಿಕ ಸಂಘಟನೆಯ ಹೋರಾಟ ನಿರಂತರವಾಗಿರುತ್ತದೆ ಎಂದು ಎಐಟಿಯುಸಿ ರಾಷ್ಟ್ರೀಯ ಸಮಿತಿಯ ಉಪಾಧ್ಯಕ್ಷ ಎಚ್.ವಿ. ಅನಂತಸುಬ್ಬರಾವ್ ಹೇಳಿದರು.ನಗರದಲ್ಲಿ ಮಂಗಳವಾರ ಭಾರತ ಕಮ್ಯುನಿಸ್ಟ್ ಪಕ್ಷ ಮತ್ತು ಎಐಟಿಯುಸಿ ಆಶ್ರಯದಲ್ಲಿ ಮೇ ದಿನಾಚರಣೆ ಹಾಗೂ ಹುತಾತ್ಮರ 42ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದಿನಕ್ಕೆ 8 ಗಂಟೆಗಳ ಕೆಲಸಕ್ಕೆ ಆಗ್ರಹಿಸಿ 1886ರಲ್ಲಿ ಚಿಕಾಗೋದಲ್ಲಿ ಆರಂಭವಾದ ಚಳವಳಿ ಇಂದು ವಿಶ್ವದಾದ್ಯಂತ ಹರಡಿದೆ. ಎಲ್ಲ ದೇಶಗಳಲ್ಲಿಯೂ ಕಾರ್ಮಿಕ ಚಳವಳಿ ನಡೆಯುತ್ತಿದೆ.ಅವರ ದ್ವನಿ ಕುಗ್ಗಿಲ್ಲ. ಅಂತರರಾಷ್ಟ್ರೀಯವಾಗಿ ಕಾರ್ಮಿಕರೆಲ್ಲರೂ ಒಂದೇ ಎಂದು ಹೇಳಿದ ದಿನವಿದು ಎಂದು ಸ್ಮರಿಸಿದರು.ದೇಶದಲ್ಲಿ 46 ಕೋಟಿ ದುಡಿಯುವ ವರ್ಗದ ಜನರಿದ್ದಾರೆ. ಅವರ ಪೈಕಿ ಕೇವಲ 6 ಕೋಟಿ ಮಂದಿ ಭವಿಷ್ಯನಿಧಿ, ಸಾಮಾಜಿಕ ಭದ್ರತಾ ಸೌಲಭ್ಯ ಪಡೆಯುತ್ತಿದ್ದಾರೆ.40 ಕೋಟಿ ಜನರ ಪರ ನಾವು ಹೋರಾಡಬೇಕಿದೆ. ಬೆಲೆಯೇರಿಕೆ ಮತ್ತು ಭ್ರಷ್ಟಾಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಸ್ಪರ ಸ್ಪರ್ಧೆಗೆ ಬಿದ್ದಿವೆ. ಸಾರ್ವಜನಿಕ ಉದ್ದಿಮೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡಲು ಸರ್ಕಾರಗಳು ಹೊರಟಿವೆ. ಇಂದು ಸಾರ್ವಜನಿಕ ರಂಗದ ಉದ್ದಿಮೆಗಳು ಉಳಿದಿರುವುದರಿಂದಲೇ ದೇಶದ ಅರ್ಥ ವ್ಯವಸ್ಥೆ ಭದ್ರವಾಗಿದೆ ಎಂದು ಅಭಿಪ್ರಾಯಪಟ್ಟರು.ಇದೇ ವೇಳೆಗೆ ಎಐಟಿಯುಸಿ ಹಿರಿಯ ನಾಯಕರಾದ ಜಿ.ಎಂ. ರುದ್ರಯ್ಯ, ಹಾವನೂರು ಮಹಬೂಬ್ ಸಾಬ್ ಅವರನ್ನು ಸನ್ಮಾನಿಸಲಾಯಿತು.ಐರಿಣಿ ಚಂದ್ರು ಮತ್ತು ತಂಡದವರು ಜಾಗೃತಿ ಗೀತೆ ಹಾಡಿದರು.

ಎಐಟಿಯುಸಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಕೆ. ರಾಮಚಂದ್ರಪ್ಪ, ಸಿಪಿಐ ಮುಖಂಡ ಎಚ್. ಅಡಿವೆಪ್ಪ, ಎಚ್. ರಂಗಪ್ಪ, ಆನಂದರಾಜ್, ಟಿ.ಎಸ್. ನಾಗರಾಜ್, ಹೊಸಳ್ಳಿ ಮಲ್ಲೇಶ್,  ಆವರಗೆರೆ ಚಂದ್ರು, ಆವರಗೆರೆ ವಾಸು, ಟಿ.ಎಸ್. ನಾಗರಾಜ, ಎಚ್.ಜಿ. ಉಮೇಶ್, ಎಂ.ಬಿ. ಶಾರದಮ್ಮ, ಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಕೆ. ರಾಘವೆಂದ್ರ ನಾಯರಿ, ಮಹಮದ್ ಪಾಷಾ ಇತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry