ಮಂಗಳವಾರ, ನವೆಂಬರ್ 19, 2019
23 °C

ಮೇ 16ರಂದು `ಏಪ್‌ಕಾನ್-2013' ಅಂತರರಾಷ್ಟ್ರೀಯ ಸಮ್ಮೇಳನ

Published:
Updated:

ಬೆಂಗಳೂರು: `ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಮೆಟಿರಿಯಲ್ಸ್ ಮ್ಯಾನೇಜ್‌ಮೆಂಟ್' (ಐಐಎಂಎಂ) ಆಶ್ರಯದಲ್ಲಿ ಮೇ 16 ಮತ್ತು 17ರಂದು ನಗರದಲ್ಲಿ `ಏಪ್‌ಕಾನ್- 2013' ಎಂಬ ಸರಬರಾಜು ಸರಪಳಿ ನಿರ್ವಹಣೆಯ ಅಂತರರಾಷ್ಟ್ರೀಯ ಸಮ್ಮೇಳನವನ್ನು ಏರ್ಪಡಿಸಲಾಗಿದೆ.ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ `ಐಐಎಂಎಂ'ನ ರಾಷ್ಟ್ರೀಯ ಅಧ್ಯಕ್ಷ ಸಿ.ಸುಬ್ಬಕೃಷ್ಣ, `ಸರಬರಾಜು ಸರಪಳಿ ನಿರ್ವಹಣೆಯ ಉದ್ದಿಮೆದಾರರಿಗೆ ಮುಖ್ಯ ವೇದಿಕೆಯನ್ನು ಒದಗಿಸಿಕೊಡುವ ಈ ಸಮ್ಮೇಳನವು ನಗರದ ಹೋಟೆಲ್ ಶೆರಟಾನ್‌ನಲ್ಲಿ ನಡೆಯಲಿದೆ' ಎಂದರು.`ದೀರ್ಘ ಕಾಲೀನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದರ ಜತೆಗೆ ಉದ್ಯಮದ ಹೊಸ ಸವಾಲುಗಳನ್ನು ಎದುರಿಸುವ ಬಗೆಗೂ ಸಮ್ಮೇಳನದಲ್ಲಿ ಚರ್ಚೆ, ವಿಚಾರ ವಿನಿಮಯ, ನಿರ್ಣಯ ಮಂಡನೆ ಮಾಡಲಾಗುವುದು'ಎಂದರು.`ಏಪ್‌ಕಾನ್- 2013' ಸಮ್ಮೇಳನಾಧ್ಯಕ್ಷ ಸುಭಾಷ್ ಲೋವೆಕರ್ ಮಾತನಾಡಿ, `ಏಷ್ಯಾ- ಪೆಸಿಫಿಕ್ ವಲಯದ 12 ದೇಶಗಳ ಪ್ರತಿನಿಧಿಗಳು, ವಿದೇಶಗಳ 75 ಪ್ರತಿನಿಧಿಗಳು ಸೇರಿದಂತೆ ಒಟ್ಟು 400 ಪ್ರತಿನಿಧಿಗಳು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ' ಎಂದರು. ಸಮ್ಮೇಳನದ ಸಂಚಾಲಕ ಹರ್ಷ ಕೆಸ್ತೂರ್, `ಐಐಎಂಎಂ'ನ ಬೆಂಗಳೂರು ಶಾಖೆಯ ಅಧ್ಯಕ್ಷ ಚನ್ನಬಸಪ್ಪ ಹೆರೂರ್ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)